More

    ಟಾಟಾ ಸಮೂಹದ ಕಂಪನಿ ಷೇರು ಬೆಲೆ ಕುಸಿತ: ಈಗ ಖರೀದಿಸಿದರೆ ಮುಂದೆ ಲಾಭ ಎನ್ನುತ್ತಾರೆ ತಜ್ಞರು

    ಮುಂಬೈ: ಗುರುವಾರದ ವಹಿವಾಟಿನ ವೇಳೆ ಇಂಡಿಯನ್​ ಹೋಟೆಲ್ಸ್​ ಕಂಪನಿ ಲಿಮಿಟೆಡ್​ (Indian Hotels Company Ltd.) ಷೇರುಗಳ ಬೆಲೆ ಶೇಕಡಾ 5.25ರಷ್ಟು ಕುಸಿದು 577.25 ರೂ. ತಲುಪಿತು. ಇದು ಟಾಟಾ ಸಮೂಹದ ಕಂಪನಿಯಾಗಿದೆ.

    ಷೇರುಗಳ ಈ ಕುಸಿತದ ಹಿಂದಿನ ಕಾರಣ ಕಂಪನಿಯ ನಾಲ್ಕನೇ ತ್ರೈಮಾಸಿಕದ ಫಲಿತಾಂಶ.

    ಇಂಡಿಯನ್ ಹೋಟೆಲ್ಸ್ ಕಂಪನಿಯು ಬುಧವಾರದಂದು 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (Q4FY24) ಲಾಭ 438.33 ಕೋಟಿ ರೂ. ಲಾಭ ಮಾಡಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಶೇಕಡಾ 29.4ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 338.84 ಕೋಟಿ ರೂ. ಆಗಿತ್ತು. Q4FY24 ತ್ರೈಮಾಸಿಕದಲ್ಲಿ ಒಟ್ಟು ಆದಾಯವು ವರ್ಷದಿಂದ ವರ್ಷಕ್ಕೆ 18 ಪ್ರತಿಶತದಷ್ಟು ಹೆಚ್ಚಿ 1,951.46 ಕೋಟಿ ರೂಪಾಯಿ ಆಗಿದೆ.

    “2023-24ನೇ ಹಣಕಾಸು ವರ್ಷದಲ್ಲಿ 53 ಡೀಲ್‌ಗಳೊಂದಿಗೆ, ಇಂಡಿಯನ್ ಹೋಟೆಲ್ಸ್ ಕಂಪನಿಯು 310 ಹೋಟೆಲ್‌ಗಳನ್ನು ಸ್ವಾಧೀನಪಡಿಸಿಕೊಂಡಿದೆ. ಇದು ನಮ್ಮ ಪ್ರತಿಯೊಂದು ಬ್ರ್ಯಾಂಡ್‌ಗಳಾದ್ಯಂತ ಪ್ರಮಾಣವನ್ನು ಸಾಧಿಸಲು ಮತ್ತು ಹೊಸ ಮಾರುಕಟ್ಟೆ ವಿಭಾಗಗಳಲ್ಲಿ ಕಾರ್ಯತಂತ್ರದ ಮೈತ್ರಿಗಳನ್ನು ರಚಿಸಲು ನಮಗೆ ಅನುವು ಮಾಡಿಕೊಡುತ್ತದೆ.” ಎಂದು ಕಂಪನಿಯ ಎಂ.ಡಿ. ಮತ್ತು ಸಿಇಒ ಪುನೀತ್ ಛತ್ವಾಲ್ ಹೇಳಿದ್ದಾರೆ.

    ಮುಂದಿನ ಹಣಕಾಸು ವರ್ಷದಲ್ಲಿ ಹೊಸ ವ್ಯವಹಾರಗಳು ಮತ್ತು 25 ಹೋಟೆಲ್‌ಗಳನ್ನು ತೆರೆಯುವುದರೊಂದಿಗೆ ಆದಾಯವನ್ನು ಹೆಚ್ಚಿಸುವುದನ್ನು ಕಂಪನಿ ಮುಂದುವರಿಸುತ್ತದೆ ಎಂದು ಅವರು ಹೇಳಿದ್ದಾರೆ.

    ಏತನ್ಮಧ್ಯೆ, ಬ್ರೋಕರೇಜ್​ ಸಂಸ್ಥೆಯಾದ ಇನ್ವೆಸ್ಟೆಕ್ ಈ ಕಂಪನಿಯ ಷೇರಿಗೆ ‘ಖರೀದಿ’ ರೇಟಿಂಗ್ ನೀಡಿದೆ, ಪ್ರತಿ ಷೇರಿಗೆ 626 ರೂ. ಟಾರ್ಗೆಟ್​ ಪ್ರೈಸ್ (ಗುರಿ ಬೆಲೆ) ಅನ್ನು ಅದು ನೀಡಿದೆ.

    ಬ್ರೋಕರೇಜ್ ಸಂಸ್ಥೆ ಪ್ರಭುದಾಸ್ ಲೀಲಾಧರ್‌ನ ವಿಶ್ಲೇಷಕರು ಈ ಕಂಪನಿಯ ಫಲಿತಾಂಶಗಳು ಒಮ್ಮತದ ಅಂದಾಜಿಗಿಂತ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಅಲ್ಲದೆ, ಬ್ರೋಕರೇಜ್ ಸಂಸ್ಥೆಯು ಇಂಡಿಯನ್ ಹೋಟೆಲ್ಸ್ ಸ್ಟಾಕ್‌ನಲ್ಲಿ ಯಾವುದೇ ರೇಟಿಂಗ್ ಹೊಂದಿಲ್ಲ.

    1 ಷೇರಿಗೆ ಉಚಿತವಾಗಿ ದೊರೆಯಲಿವೆ 3 ಷೇರುಗಳು: ಎನರ್ಜಿ ಕಂಪನಿಯ ಸ್ಟಾಕ್​ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ ಹೂಡಿಕೆದಾರರು

    ಹೂಡಿಕೆದಾರರ ಇರಲಿ ಎಚ್ಚರಿಕೆ: ಅದಾನಿ ಪವರ್ ಸೇರಿ ಈ 9 ಕಂಪನಿಗಳ ಪ್ರವರ್ತಕರು ಷೇರು ಒತ್ತೆ ಇಟ್ಟು ಪಡೆದಿದ್ದಾರೆ ಸಾಲ..

    ಹಿರಿಯ ಹೂಡಿಕೆದಾರ ಕಚೋಲಿಯಾ ಹೂಡಿಕೆ ಮಾಡಿದ ಕಂಪನಿಯ ಷೇರುಗಳ ಬೆಲೆ 45 ದಿನಗಳಲ್ಲಿ 60% ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts