More

    ಶಿವಮೊಗ್ಗ ಕ್ಷೇತ್ರದಲ್ಲಿ ಮನೆಯಿಂದಲೇ ಮತದಾನ

    ಶಿವಮೊಗ್ಗ: ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿತ್ತು. ಲೋಕಸಭೆ ಚುನಾವಣೆಯಲ್ಲಿ 85 ವರ್ಷ ಮೇಲ್ಟಟ್ಟ ಹಿರಿಯ ನಾಗರಿಕರು ಬಯಸಿದಲ್ಲಿ ಮನೆಯಿಂದಲೇ ಹಕ್ಕು ಚಲಾಯಿಸಬಹುದು. ಗುರುವಾರದಿಂದಲೇ ಕ್ಷೇತ್ರದಲ್ಲಿ ಮನೆಯಿಂದಲೇ ಮತದಾನ ಆರಂಭವಾಗಿದೆ.

    ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 85 ವರ್ಷ ಮೇಲ್ಪಟ್ಟ 15,315 ಮಂದಿ ಹಾಗೂ ಶೇ.40ಕ್ಕೂ ಅಧಿಕ ಅಂಗವೈಕಲ್ಯ ಹೊಂದಿರುವ 18,888 ಮತದಾರರಿದ್ದಾರೆ. ಈ ಪೈಕಿ 85 ವರ್ಷ ಮೇಲ್ಪಟ್ಟ 2,515 ಮಂದಿ ಹಾಗೂ 1,064 ಅಂಗವಿಕಲರು ಸೇರಿ ಒಟ್ಟು 3,579 ಮಂದಿ ಮನೆಯಿಂದಲೇ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು.
    ಬೈಂದೂರು ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮನೆಯಿಂದಲೇ ಮತದಾನ ಪ್ರಕ್ರಿಯೆಗೆ ಒಟ್ಟು 132 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೂ ಸರಾಸರಿ 27 ಮತದಾರರ ಗುರಿ ನಿಗದಿಪಡಿಸಲಾಗಿದೆ. ಇದೆಲ್ಲದರ ಮೇಲ್ವಿಚಾರಣೆಗೆ 161 ಮಂದಿ ಮೈಕ್ರೋಅಬ್ಸರ್ವರ್‌ಗಳನ್ನು ನೇಮಿಸಲಾಗಿದೆ.
    ಹಲವೆಡೆ ಸಿಇಒ ಭೇಟಿ: ಸ್ವೀಪ್ ಸಮಿತಿ ನೋಡಲ್ ಅಧಿಕಾರಿಯೂ ಆಗಿರುವ ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಮೊದಲ ದಿನ ಶಿವಮೊಗ್ಗದ ಕೆಲವೆಡೆ ಮನೆಯಿಂದಲೇ ಮತದಾನ ಪ್ರಕ್ರಿಯೆಯನ್ನು ಖುದ್ದಾಗಿ ಗಮನಿಸಿದರು. ಮತ ಚಲಾಯಿಸಿದ ವಯೋವೃದ್ಧರಿಗೆ ಹೂವು ನೀಡುವ ಮೂಲಕ ಅಭಿನಂದಿಸಿದರು.
    ವಿನೋಬನಗರದ ಚಾಚಾ ನೆಹರು ರಸ್ತೆಯಲ್ಲಿರುವ ಜೈಭವಾನಿ ನಿವಾಸದಲ್ಲಿ 93 ವರ್ಷದ ನಿವೃತ್ತ ಪ್ರಾಚಾರ್ಯ ಆರ್.ಪುಟ್ಟುಸಿಂಗ್ ಮತದಾನ ಮಾಡಿದರು. ಓರ್ವ ಪೊಲೀಸ್ ಸೇರಿದಂತೆ 8 ಜನ ಸಿಬ್ಬಂದಿಗಳು ಮತದಾನ ಪ್ರಕ್ರಿಯೆ ನಡೆಸಿದರು. ಎಲ್ಲವನ್ನೂ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಶರಾವತಿ ನಗರದ 91 ವರ್ಷದ ಚಂದ್ರಶೇಖರಪ್ಪ, ಕೋಟೆ ರಸ್ತೆಯ 90 ವರ್ಷದ ಅನ್ನಪೂರ್ಣಮ್ಮ ಹೊಸಮನೆಯ ಹನುಮಂತರಾಯಪ್ಪ ಮುಂತಾದವರು ಮತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts