More

    ತಾಪಮಾನ ಬಿಕ್ಕಟ್ಟಿಗೆ 15.5 ದಶಲಕ್ಷ ಜನರ ಬಲಿ ಸಂಭವ! ಸಮಸ್ಯೆ ಶಮನಕ್ಕೆ ಜಾಗತಿಕ ಸಹಕಾರದ ಪ್ರತಿಪಾದನೆ

    ದಾವೋಸ್​: ಇಳೆಯ ತಾಪಮಾನ ಏರಿಕೆಯಿಂದ ದುರಂತಗಳು ಹೆಚ್ಚಾಗಿ 2050ರೊಳಗೆ ಜಗತ್ತಿನಾದ್ಯಂತ 14.5 ದಶಲಕ್ಷ ಜನರು ಬಲಿಯಾಗಬಹುದು ಮತ್ತು 12.5 ಟ್ರಿಲಿಯನ್​ ಡಾಲರ್​ ಆರ್ಥಿಕ ನಷ್ಟ ಸಾಧ್ಯತೆ ಇದೆ ಎಂದು ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯುಇಎಫ್​) ಹೊಸ ವಿಶ್ಲೇಷಣೆ ಎಚ್ಚರಿಕೆ ನೀಡಿದೆ. ಹಾಗಾಗಿ, ಸಮಸ್ಯೆ ಶಮನಗೊಳಿಸಲು ಜಾಗತಿಕ ಸಹಕಾರದ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿದೆ. ಈ ಎಚ್ಚರಿಕೆಗಳನ್ನು ಎದುರಿಸಲು ಹಾಗೂ ಉಪಶಮನಗೊಳಿಸಲು ನಿರ್ಣಾಯಕ ಮತ್ತು ಕಾರ್ಯತಂತ್ರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಎಲ್ಲರಿಗೂ ಇನ್ನೂ ಸಾಕಷ್ಟು ಕಾಲಾವಕಾಶವಿದೆ ಎಂದು ವರದಿ ಹೇಳಿದೆ.

    ಒಲಿವರ್​ ವೈಮ್ಯಾನ್​ ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ‘ಮಾನವ ಆರೋಗ್ಯದ ಮೇಲೆ ತಾಪಮಾನ ಬದಲಾವಣೆಯ ಪರಿಣಾಮದ ಪ್ರಮಾಣೀಕರಣ’ ಎಂಬ ಈ ವರದಿಯನ್ನು ಇಲ್ಲಿ ನಡೆಯುತ್ತಿರುವ ವೇದಿಕೆಯ 2024ರ ವಾರ್ಷಿಕ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

    ಮಾನವ ಆರೋಗ್ಯ, ವಿಶ್ವದ ಆರ್ಥಿಕತೆ ಮತ್ತು ಜಗತ್ತಿನಾದ್ಯಂತ ಯೋಗಕ್ಷೇಮ ವ್ಯವಸ್ಥೆಗಳ ಮೇಲೆ ತಾಪಮಾನ ಬದಲಾವಣೆ ಪರೋಕ್ಷವಾಗಿ ಬೀರಲಿರುವ ಪರಿಣಾಮದ ವಿಸ್ತ್ರತ ಚಿತ್ರಣವನ್ನು ನೀಡುವ ಮೂಲಕ ಈ ವರದಿಯು ಬಿಕ್ಕಟ್ಟನ್ನು ವಿಶ್ಲೇಷಿಸಿದೆ.

    ಪ್ರಕೃತಿ ಮತ್ತು ಜಾಗತಿಕ ಆರ್ಥಿಕತೆ ಮೇಲಿನ ತಾಪಮಾನ ಬದಲಾವಣೆಯ ಪರಿಣಾಮ ಕುರಿತು ಬೇಕಾದಷ್ಟು ಚರ್ಚೆ ನಡೆದಿದೆ. ಆದರೆ, ಭೂಮಿಯ ಹೆಚ್ಚುತ್ತಿರುವ ತಾಪಮಾನದಿಂದ ಮಾನವ ಆರೋಗ್ಯ ಮತ್ತು ಜಾಗತಿಕ ಯೋಗಕ್ಷೇಮ ವ್ಯವಸ್ಥೆ ಮೇಲೆ ಆಗುವ ಪರಿಣಾಮಗಳ ಬಗ್ಗೆ ತುರ್ತಾಗಿ ಚಿಂತನೆ ನಡೆಸಬೇಕಾಗಿದೆ ಎಂದು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರದ ಮುಖ್ಯಸ್ಥ ಶ್ಯಾಮ್​ ಬಿಶೆನ್​ ಪ್ರತಿಪಾದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts