More

    ಚೆನ್ನೈ ಸೇರಿ ಭಾರತದ 12 ನಗರಗಳು ಜಲಸಮಾಧಿ! ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಘನಘೋರ ದುರಂತ

    ಚೆನ್ನೈ: ಮಿಚೌಂಗ್​​​ ಚಂಡಮಾರುತದ ರೌದ್ರಾವತಾರಕ್ಕೆ ಚೆನ್ನೈ ಅಕ್ಷರಶಃ ನಲುಗಿ ಹೋಗಿದೆ. ಭಾರಿ ಮಳೆಗೆ ಒಳಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳೆಲ್ಲ ನದಿಯಂತಾಗಿದೆ. ರಸ್ತೆ, ರೈಲು, ವಿಮಾನ ಮತ್ತು ವಿದ್ಯುತ್ ಸಂಪರ್ಕಗಳನ್ನು ಒಂದೇ ಒಂದು ಮಳೆ ಅಡ್ಡಿಪಡಿಸಿದೆ. ಈಗಾಗಲೇ 17 ಮಂದಿ ಪ್ರವಾಹಕ್ಕೆ ಅಸುನೀಗಿದ್ದು, ಮಿಚೌಂಗ್​ ಸೈಕ್ಲೋನ್​ ಚೆನ್ನೈನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಆದರೆ, ಇದು ಇದೇ ಮೊದಲೇನಲ್ಲ. ಪ್ರತಿ ಬಾರಿ ಹವಾಮಾನ ಬದಲಾವಣೆ ಆದಾಗಲೆಲ್ಲ ಪ್ರಮುಖ ನಗರಗಳ ಸ್ಥಿತಿ ಇದೇ ಆಗಿದೆ.

    ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಿರುವ ಭಾರತೀಯ ನಗರಗಳಲ್ಲಿ ಚೆನ್ನೈ ಕೂಡ ಒಂದು. 2015ರಲ್ಲಿಯೂ ಚೆನ್ನೈ ಭಾರೀ ಪ್ರವಾಹವನ್ನು ಅನುಭವಿಸಿತು. ಈಗಿನ ಪರಿಸ್ಥಿತಿಗೆ ಚಂಡಮಾರುತವನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ. ಏಕೆಂದರೆ, ಇದು ಮಾನವ ನಿರ್ಮಿತ ಅಪಾಯವಾಗಿದೆ. ಚೆನ್ನೈ ಮಹಾನಗರದಲ್ಲಿ ಒಳಚಂರಂಡಿ ವ್ಯವಸ್ಥಿತವಾಗಿಲ್ಲ. ನಗರ ಯೋಜನೆಯಲ್ಲಿಯೇ ವೈಫಲ್ಯವಿದೆ. ನಗರ ನಿರ್ವಹಣೆಯಲ್ಲಿ ಸರಿಯಾದ ಕ್ರಮ ಇಲ್ಲದಿರುವುದು ಕೂಡ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ನದಿಗಳ ನೈಸರ್ಗಿಕ ಹರಿವಿನ ಅಡಚಣೆಯು ಸಹ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿದೆ.

    ಇನ್ನೂ ಭಾರತದ ಕರಾವಳಿ ನಗರಗಳು ಮಾತ್ರ ಪ್ರವಾಹದ ಅಪಾಯದಲ್ಲಿವೆ ಎಂದು ಅಧ್ಯಯನದ ವರದಿ ಸೂಚಿಸುತ್ತದೆ. ಹೆಚ್ಚುತ್ತಿರುವ ಸಮುದ್ರ ಮಟ್ಟವು ಮುಂಬೈ ಮತ್ತು ಕೋಲ್ಕತ್ತಾದಂತಹ ದೊಡ್ಡ ನಗರಗಳಿಗೆ ಭವಿಷ್ಯದಲ್ಲಿ ಭಾರಿ ಅಪಾಯವನ್ನು ಉಂಟುಮಾಡುತ್ತದೆ. ಈ ನಗರಗಳು ಈಗಾಗಲೇ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಆಗಾಗ ಅನುಭವಿಸುತ್ತಿವೆ.

    ಪಾಟ್ಸ್‌ಡ್ಯಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮ್ಯಾಟಿಕ್ ಇಂಪ್ಯಾಕ್ಟ್ ರಿಸರ್ಚ್ ಪ್ರಕಾರ ಈ ಶತಮಾನದ ಅಂತ್ಯದ ವೇಳೆಗೆ 12 ಭಾರತೀಯ ನಗರಗಳು ಸಂಪೂರ್ಣವಾಗಿ ಮುಳುಗಬಹುದು ಎಂದು ಎಚ್ಚರಿಸಿದೆ. ಕರಾವಳಿ ನಗರಗಳನ್ನು ಅತ್ಯಂತ ದುರ್ಬಲ ಎಂದು ಪಟ್ಟಿ ಮಾಡಲಾಗಿದೆ. ತೀರ ಪ್ರದೇಶಗಳಲ್ಲಿ ಇರುವ ನಗರಗಳು ಜಲಸಮಾಧಿಯಾಗಲಿವೆ ಎಂದು ಅಧ್ಯಯನಗಳು ಎಚ್ಚರಿಸಿವೆ.

    ಹವಾಮಾನ ಬದಲಾವಣೆಯ ಕುರಿತ ಅಂತರಸರ್ಕಾರಿ ಸಮಿತಿ (ಐಪಿಸಿಸಿ) ವರದಿ ಪ್ರಕಾರ ಮುಂಬೈ, ವಿಶಾಖಪಟ್ಟಣ, ಕೊಚ್ಚಿ, ಚೆನ್ನೈ ಮತ್ತು ಕೋಲ್ಕತ ಸೇರಿದಂತೆ ಪ್ರಮುಖ 12 ನಗರಗಳು ಮುಂಬರುವ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ತೀವ್ರ ಪರಿಣಾಮವನ್ನು ಎದುರಿಸಲಿವೆ. ನಗರದಲ್ಲಿನ ನೀರಿನ ಹರಿಯುವಿಕೆಯ ಅಸಮರ್ಪಕ ನಿರ್ವಹಣೆಯೇ ಇದೆಲ್ಲದಕ್ಕೂ ಕಾರಣವಾಗಿದೆ. ಸೂಕ್ತ ವ್ಯವಸ್ಥೆಗಳು ಇಲ್ಲದಿದ್ದರೆ ನಿರಂತರ ಪ್ರವಾಹಗಳಿಗೆ ಈ ನಗರಗಳು ಅಳಿದು ಹೋದರು ಅಚ್ಚರಿ ಪಡಬೇಕಿಲ್ಲ ಎಂದು ಅಧ್ಯಯನಗಳು ಎಚ್ಚರಿಸಿವೆ. (ಏಜೆನ್ಸೀಸ್​)

    ಚೆನ್ನೈಗಾಗಿ ಮಿಡಿದ ಡೇವಿಡ್​ ವಾರ್ನರ್ ಹೃದಯ: ನೆರವಿನ ಹಸ್ತ ಚಾಚೋಣ ಎಂದ ಆಸೀಸ್​ ಕ್ರಿಕೆಟಿಗ​

    ಚೆನ್ನೈ ಪ್ರವಾಹ: ಸಂಕಷ್ಟದಲ್ಲಿದ್ದ ಆಮೀರ್​ ಖಾನ್​, ವಿಶಾಲ್​ಗೆ ನಟ ಅಜಿತ್​ ಕುಮಾರ್​ ಸಹಾಯ ಮಾಡಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts