More

  “ನಿಮ್ಮ ಮಗಳನ್ನು ಹತ್ಯೆ ಮಾಡಿದ್ದೀನಿ” ಎಂದು ಅತ್ತೆಗೆ ಕರೆ ಮಾಡಿ ತಿಳಿಸಿದ ಪತಿರಾಯ!

  ಬೆಂಗಳೂರು: ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಯನ್ನು ಕೊಂದು, ಕೆಲಸದಲ್ಲಿದ್ದ ಆಕೆಯ ತಾಯಿಗೆ ಕರೆ ಮಾಡಿ ತಿಳಿಸಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಮೂಡಲಪಾಳ್ಯದ ಶಿವಾನಂದ ನಗರದಲ್ಲಿ ನಡೆದಿದೆ.

  "ನಿಮ್ಮ ಮಗಳನ್ನು ಹತ್ಯೆ ಮಾಡಿದ್ದೀನಿ" ಎಂದು ಅತ್ತೆಗೆ ಕರೆ ಮಾಡಿ ತಿಳಿಸಿದ ಪತಿರಾಯ!

  ಕೊಲೆಯಾದ ಮಹಿಳೆಯನ್ನು ಗೀತಾ (33) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಶಂಕರ್​ರಿಂದ ಕೊಲೆಯಾಗಿದ್ದಾರೆ. ಗೀತಾ, ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನುವ ಅನುಮಾನ ಹೊಂದಿದ್ದ ಪತಿ ಶಂಕರ್, ಹೆಂಡತಿಯನ್ನು ಹತ್ಯೆಗೈದಿದ್ದಾನೆ. ನಂತರ ಈತ, ಆಕೆಯ ಶವವನ್ನು ಸೋಫಾ ಮೇಲೆ ಇರಿಸಿದ್ದಾನೆ.

  ಇದನ್ನೂ ಓದಿ: ಜೆಡಿಎಸ್ ಮುಖಂಡನಾದ್ರೆ ಏನಂತೆ? ಅಕ್ರಮ ಸಂಬಂಧ ಹೊಂದಿದ್ದರೆ ಬೀಳುತ್ತೆ ಗೂಸಾ!

  ಪತ್ನಿಯನ್ನು ಹತ್ಯೆಗೈದ ಶಂಕರ್, ಕೆಲಸದ ಮೇಲಿದ್ದ ಅತ್ತೆಗೆ ಕರೆ ಮಾಡಿದ್ದು, “ಅತ್ತೆ, ನಿಮ್ಮ ಮಗಳನ್ನ ಕೊಲೆ ಮಾಡಿದ್ದೇನೆ” ಎಂದು ಹೇಳಿದ್ದಾನೆ. ಕೊಲೆ ಆರೋಪಿಯನ್ನ ಬಂಧಿಸಿರೋ ಚಂದ್ರಾಲೇಔಟ್ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ.

  "ನಿಮ್ಮ ಮಗಳನ್ನು ಹತ್ಯೆ ಮಾಡಿದ್ದೀನಿ" ಎಂದು ಅತ್ತೆಗೆ ಕರೆ ಮಾಡಿ ತಿಳಿಸಿದ ಪತಿರಾಯ!

  ಗಾಢವಾಗಿದೆ ಅಕ್ರಮ ಸಂಬಂಧದ ವಾಸನೆ

  13 ವರ್ಷಗಳ ಹಿಂದೆ ಗೀತಾಳನ್ನು ಶಂಕರ್ ಮದುವೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ ಗೀತಾ, ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

  ಆ ವಿಷಯ ತಿಳಿದಿದ್ದ ಶಂಕರ್, ಗೀತಾಗೆ ಬುದ್ದಿ ಮಾತು ಹೇಳಿದ್ದಾನೆ. ಆದರೂ ಗೀತಾ ಮಾತ್ರ ಅನೈತಿಕ ಸಂಬಂಧ ಮುಂದುವರೆಸಿದ್ದಳು ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಆಕೆ, ತನ್ನ ಪ್ರಿಯಕರನೊಂದಿಗೆ ಸೇರಿ ಪತಿಗೆ ಕೊಲೆ ಬೆದರಿಕೆ ಕೂಡ ಹಾಕಿದ್ದಾಳೆ ಎನ್ನಲಾಗಿದೆ.

  "ನಿಮ್ಮ ಮಗಳನ್ನು ಹತ್ಯೆ ಮಾಡಿದ್ದೀನಿ" ಎಂದು ಅತ್ತೆಗೆ ಕರೆ ಮಾಡಿ ತಿಳಿಸಿದ ಪತಿರಾಯ!

  ಇದನ್ನೂ ಓದಿ: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕೊಲೆ-ಪತ್ನಿ, ಪ್ರಿಯಕರನ ಬಂಧನ 

  ಅಕ್ರಮ ಸಂಬಂಧಕ್ಕೆ ಸಂಬಂಧಿಸಿದಂತೆ ದಂಪತಿ ಜಗಳ ಕಳೆದ ಹದಿನೈದು ದಿನಗಳಿಂದ ವಿಕೋಪಕ್ಕೆ ತಿರುಗಿದ್ದು, ಕೊನೆಗೆ ಕೊಲೆಯಲ್ಲಿ ನಿಂತಿದೆ. ಕಳೆದ ರಾತ್ರಿಯೂ ಅದೇ ರೀತಿ ಜಗಳ ನಡೆದಿದ್ದು ಆ ವೇಳೆ ಆಕ್ರೋಶಕ್ಕೋಳಗಾದ ಶಂಕರ್ ಗೀತಾಳ ಹತ್ಯೆ ಮಾಡಿದ್ದಾನೆ. ಹರಿತವಾದ ಆಯುಧದಿಂದ ಶಂಕರ್, ಗೀತಾಳ ತಲೆಗೆ ಹೊಡೆದು ಹತ್ಯೆ ಮಾಡಿದ್ದು ನಂತರ, ಸಂಬಂಧಿಕರಿಗೆ ಸ್ನೇಹಿತರಿಗೆ ವಿಷ್ಯ ತಿಳಿಸಿ ಪೊಲೀಸ್ರಿಗೆ ಶರಣಾಗಿದ್ದಾನೆ.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts