

ಕಲಬುರಗಿ: ಕೆಲವೊಂದು ಬಾರಿ ಅಧಿಕಾರ ಹೊಂದಿದ್ದೇವೆ ಎಂದು ಭಾವಿಸುವ ಕೆಲವರು, ಸಾಮಾಜಿಕ ನಿಯಮಗಳನ್ನು ಮೀರಿ ನಡೆಯುತ್ತಾರೆ. ಅಂತಹವರಿಗೆ ಜನರೇ ತಕ್ಕ ಪಾಠವನ್ನೂ ಕಲಿಸಿಬಿಡುತ್ತಾರೆ. ಅಂತಹ ಘಟನೆ ನಿನ್ನೆ ರಾತ್ರಿ ಕಲಬುರಗಿಯಲ್ಲಿ ನಡೆದಿದೆ.
ಮಹಿಳೆ ಜೊತೆ ಅಕ್ರಮ ಸಂಭಂಧ ಹೊಂದಿದ್ದ ಜೆಡಿಎಸ್ ಮುಖಂಡನಿಗೆ ಜನರೇ ಗೂಸಾ ನೀಡಿದ್ದಾರೆ. ಈ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲಾ ಜೆಡಿಎಸ್ ಮುಖಂಡನಾಗಿರುವ ವಿಷ್ಣುಕಾಂತ ಮೂಲಗಿ , ಐನೊಳ್ಳಿ ಗ್ರಾಮದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈತ ನಿನ್ನೆ ರಾತ್ರಿ ಕುಡಿದು ಟೈಟ್ ಆಗಿ ಹಣದ ಆಮಿಷ ಒಡ್ಡಿ ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದ ಎನ್ನಲಾಗಿದೆ.
ಈತನ ಅನೈತಿಕ ಸಂಬಂಧದಿಂದ ರೋಸಿ ಹೋಗಿದ್ದ ಏರಿಯಾದ ಜನರು ಬೇಸತ್ತು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇಲ್ಲಿನ ಜನರು, ಮುಖಂಡನ ಅನೈತಿಕ ಸಂಬಂಧದಿಂದಾಗಿ ತಮ್ಮ ಏರಿಯಾದ ಹೆಸರೇ ಹಾಳಾಗುವುದು ಎಂದು ಹಲವು ತಿಂಗಳುಗಳಿಂದ ಸುಮ್ಮನಿದ್ದರು. ಈ ಅನೈತಿಕ ಸಂಬಂಧದಿಂದಾಗಿ ಹೆಣ್ಣು ಮಕ್ಕಳು ತಲೆ ಎತ್ತಿ ಓಡಾಡೋದಕ್ಕೆ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದ್ದ ಕಾರಣ ಜೆಡಿಎಸ್ ಮುಖಂಡನಿಗೆ ಧರ್ಮದೇಟು ಲಭಿಸಿದೆ.
ಇದನ್ನೂ ಓದಿ: ತಳಮಟ್ಟದಿಂದ ಜೆಡಿಎಸ್, ಬಿಜೆಪಿ ಮೈತ್ರಿಯಾಗಲಿ
ಸದ್ಯ ಜೆಡಿಎಸ್ ಮುಖಂಡನಿಗೆ ಗೂಸಾ ಬಿದ್ದ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.