More

    ಇಂದಿನಿಂದ ಕಾಶಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ ಶುರು

    ನವದೆಹಲಿ: ಅಯೋಧ್ಯೆಯ ರಾಮಜನ್ಮ ಭೂಮಿಯ ವ್ಯಾಜ್ಯವನ್ನು ನ್ಯಾಯಾಲಯದಲ್ಲಿ ಬಗೆಹರಿಸಲಾಗಿದ್ದು ಪ್ರಕರಣ ಅಂತ್ಯಗೊಂಡು ಮಂದಿರದ ಬಹುತೇಕ ಭಾಗ ನಿರ್ಮಾಣವಾಗಿದೆ. ಇದೀಗ ಕಾಶಿಯ ವಿಶ್ವನಾಥ ದೇವಸ್ಥಾನವನ್ನು ಕೆಡವಿ ನಿರ್ಮಿಸಲಾಗಿದೆ ಎನ್ನಲಾಗಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆ ಇಂದು ಶುರುವಾಗಿದೆ. ಈ ಕುರಿತಾಗಿ ಭಾರತೀಯ ಪುರಾತತ್ವ ಇಲಾಖೆ ಅಧಿಕೃತ ಹೇಳಿಕೆ ನೀಡಿದೆ.

    ಇದನ್ನೂ ಓದಿ: ಮಂದಿರಗಳ ಮರುನಿರ್ಮಾಣ ಕಾರ್ಯ ನನ್ನ ಪಾಲಿಗೆ ಪ್ರಾಯಶ್ಚಿತ್ತ: ಕೆ.ಕೆ. ಮಹಮದ್, ASI ನಿರ್ದೇಶಕ

    ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆ ಸೋಮವಾರ (ಜುಲೈ.24) ಬೆಳಿಗ್ಗೆ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಸಮೀಕ್ಷೆ ಸ್ಥಳೀಯ ನ್ಯಾಯಾಲಯದ ಆದೇಶದಂತೆ ಮುಂಜಾನೆ ಪ್ರಾರಂಭವಾಗುತ್ತದೆ. 2022 ರಲ್ಲಿ ಸಮೀಕ್ಷೆಯ ಸಮಯದಲ್ಲಿ ಹಿಂದೂ ಪರ ದಾವೆದಾರರು, ಹಿಂದಿನ ಶಿವ ದೇವಸ್ಥಾನದ ಅವಶೇಷ ಎಂದು ಹೇಳಲಾಗತ್ತಿರುವ ಶಿವಲಿಂಗ ರೀತಿಯ ರಚನೆ “ವುಜುಖಾನಾ” ಹೊರತುಪಡಿಸಿ ಎಲ್ಲಾ ಪ್ರದೇಶಗಳಿಗೆ ಈ ಸಮೀಕ್ಷೆ ವಿಸ್ತರಿಸುತ್ತದೆ. ASI ಆಗಸ್ಟ್ 4ರೊಳಗೆ ಜಿಲ್ಲಾ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಬೇಕು.

    ಇದನ್ನೂ ಓದಿ: ಅಯೋಧ್ಯೆ ಯಾಗಕ್ಕೆ ಧಾರವಾಡ ವಿದ್ವಾಂಸ

    ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಹೇಳುವ ಮಹಿಳೆಯರ ಗುಂಪಿನ ಅರ್ಜಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ಸಮೀಕ್ಷೆಯ ಆದೇಶ ಬಂದಿದೆ. ಹಿಂದೂ ದೇವತೆಗಳ ಪುರಾತನ ವಿಗ್ರಹಗಳು ಮಸೀದಿಯೊಳಗೆ ನೆಲೆಗೊಂಡಿದ್ದು ವೈಜ್ಞಾನಿಕ ಸಮೀಕ್ಷೆಯಿಂದ ಮಾತ್ರ ಸತ್ಯವನ್ನು ಬಹಿರಂಗಪಡಿಸಬಹುದು ಎಂದು ಮಹಿಳೆಯರು ಹೇಳುತ್ತಾರೆ.

    ಇದನ್ನೂ ಓದಿ: ಅಯೋಧ್ಯೆಯ ಚತುರ್ವೆದ ಸಂಹಿತಾಯಾಗದಲ್ಲಿ ಪಾಲ್ಗೊಳ್ಳುವ ಉತ್ತರ ಕನ್ನಡದ ವೈದಿಕರು ಇವರೇ….

    ಕಳೆದ ವರ್ಷ ನಡೆಸಿದ ವೀಡಿಯೋಗ್ರಾಫಿಕ್ ಸಮೀಕ್ಷೆಯಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದಿದೆ ಎಂದು ಹೇಳಲಾದ “ಶಿವಲಿಂಗ” ದ ಕಾರ್ಬನ್ ಡೇಟಿಂಗ್ ಸೇರಿದಂತೆ “ವೈಜ್ಞಾನಿಕ ಸಮೀಕ್ಷೆ”ಯನ್ನು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮುಂದೂಡಿತ್ತು. ‘ವಝುಖಾನಾ’ ಪ್ರದೇಶವನ್ನು ಸೀಲ್ ಮಾಡುವಂತೆಯೂ ನ್ಯಾಯಾಲಯ ಆದೇಶಿಸಿತ್ತು

    ಈ ಹಿಂದೆ, ಹಿಂದೂ ಅರ್ಜಿದಾರರು “ಶಿವಲಿಂಗ” ಎಂದು ಹೇಳಲಾದ ರಚನೆಯ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಎಎಸ್‌ಐಗೆ ನಿರ್ದೇಶನ ನೀಡಿತು. ಜ್ಞಾನವಾಪಿ ಮಸೀದಿಯ ಅಧಿಕಾರಿಗಳು ಈ ರಚನೆಯು “ವಝುಖಾನಾ”ದಲ್ಲಿ ಕಾರಂಜಿಯ ಸಮೀಕ್ಷೆ ಕೂಡ ಒಂದು ಭಾಗವಾಗಿದೆ ಎಂದು ಹೇಳಿದರು, ಅಲ್ಲಿ ಜನರು ನಮಾಜ್ ಮಾಡುವ ಮೊದಲು ಕಾಲು ತೊಳೆಯುತ್ತಾರೆ ಎಂದು ಆರೋಪಿಸಲಾಗಿದೆ.

    ಇದನ್ನೂ ಓದಿ: ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ಸಭೆ: ನಿರ್ಣಯ, ಚರ್ಚಿತ ವಿಷಯಗಳ ಮಾಹಿತಿ ಇಲ್ಲಿದೆ..

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಮಸೀದಿ ಸಮಿತಿಯ ಸವಾಲನ್ನು ವಜಾಗೊಳಿಸಿ ಅದು ಮಹಿಳೆಯರ ಪ್ರಕರಣಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ವಾದಿಸಿತ್ತು.

    ಪ್ರಧಾನಿ ಮೋದಿಯ . ಕ್ಷೇತ್ರದಲ್ಲಿರುವ ಜ್ಞಾನವಾಪಿ ಮಸೀದಿಯು ಹಿಂದೂ ದೇವಾಲಯಗದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂದು ಬಲಪಂಥೀಯರು ನಂಬಿರುವ ಹಲವಾರು ಮಸೀದಿಗಳಲ್ಲಿ ಒಂದಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts