More

    ಅರ್ಧ ಕರ್ನಾಟಕದಲ್ಲಿ ಮಳೆ ಜೋರು: ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

    ಬೆಂಗಳೂರು: ಅರ್ಧ ಕರ್ನಾಟಕದಲ್ಲಿ ಭಾನುವಾರವೂ ವರುಣಾರ್ಭಟ ಮುಂದುವರಿದಿದೆ. ವಾರದಿಂದ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕವಾಗಿ ಮಳೆ ಸುರಿದಿದೆ. ಉಡುಪಿಯ ಕಾರ್ಕಳ, ಚಿಕ್ಕಮಗಳೂರಿನ ಮೂಡುಗೆರೆ, ಕೊಡಗಿನ ಗೋಣಿಕೊಪ್ಪಲು,ಬೆಳಗಾವಿಯ ಕಣಬರಗಿ, ಮೈಸೂರಿನ ಹುಣಸೂರು, ಹಾವೇರಿಯ ಹನುಮಾನುಮಟ್ಟಿ ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ ಬಿದ್ದಿದೆ.

    ಇದನ್ನೂ ಓದಿ: ಮಳೆಯಿಂದ ಜಲಾಶಯಗಳಿಗೆ ಜೀವ ಕಳೆ.

    ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಜು.24 ಮತ್ತು ಜು.25ರಂದು ಅತಿ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಅಲ್ಲದೆ, ಜು.26ರಿಂದ ಮುಂದಿನ ಮೂರು ದಿನ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಹಾಸನ, ಹಾವೇರಿ, ಬಳ್ಳಾರಿಯಲ್ಲಿ ಜು.24ರಿಂದ ಜು.28 ರವರೆಗೆ ಬಿರುಸಾಗಿ ಮಳೆ ಬೀಳುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಕೊಡಲಾಗಿದೆ.

    ಇದನ್ನೂ ಓದಿ: ಧಾರಾಕಾರ ಮಳೆ: ಬುಡಸಮೇತ ನೆಲಕ್ಕುರುಳಿದ ಅಡಕೆ ಮರಗಳು

    ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯಪುರದಲ್ಲಿ ಮುಂದಿನ ನಾಲ್ಕು ದಿನ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts