More

    ಮಾದಿಗ ಸಮಾಜದ ಜಾಗೃತಿ ಅಭಿಯಾನ ಸಮುದಾಯದ ಮತಗಳು ಮಾರಾಟಕ್ಕಿಲ್ಲ  ಷಡಾಕ್ಷರಿಮುನಿ  ಶ್ರೀ

    ದಾವಣಗೆರೆ: ಮಾದಿಗ ಸಮಾಜ ಮತಬ್ಯಾಂಕ್ ಅಲ್ಲ, ಈ ಸಮುದಾಯದ ಮತಗಳು ಮಾರಾಟಕ್ಕಿಲ್ಲ. ನಮ್ಮ ಸಮಾಜದ ಅಭಿವೃದ್ಧಿಯ ದೂರದೃಷ್ಟಿ ಇರಿಸಿಕೊಂಡ ಚುನಾವಣಾ ಅಭ್ಯರ್ಥಿಗೆ ಬೆಂಬಲಿಸುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಆದಿಜಾಂಬವ ಪೀಠವು ಜಾಗೃತಿ ಅಭಿಯಾನ ಆರಂಭಿಸುತ್ತಿದೆ ಎಂದು ಪೀಠದ ಶ್ರೀ ಷಡಾಕ್ಷರಿಮುನಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಬಲ ಅಸ್ತ್ರ. ಪಕ್ಷಗಳು ಅಧಿಕಾರ ಪಡೆಯಲು ದಲಿತ ಸಮುದಾಯವನ್ನು ಮತ ಬ್ಯಾಂಕ್ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಹಣ, ಆಮಿಷಕ್ಕೆ ಮತ ಹಾಕುವ ಮನಸ್ಥಿತಿಯಿಂದ ಮಾದಿಗ ಸಮಾಜ ಹೊರಬರಬೇಕಾದ ಅನಿವರ್ಯತೆ ಇಂದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಮಾಜದ ಬೆರಳೆಣಿಕೆಯ ಮುಖಂಡರು ರಾಜಕೀಯ ಲಾಭ ಪಡೆಯುತ್ತಿದ್ದಾರೆ, ಅವರೆಲ್ಲ 2ನೇ ಹಂತದ ನಾಯಕರನ್ನು ಮುಂಚೂಣಿಗೆ ತರಬೇಕು. ಮತ ಬ್ಯಾಂಕ್ ದುರ್ಬಳಕೆಯನ್ನು ಯುವಕರು ತಡೆಯಬೇಕಿದೆ. ಎಲ್ಲ ಸಮಾಜಗಳ ಜತೆಯಲ್ಲೇ ಕೆಳಸ್ತರ ದ ಸಮಾಜಗಳನ್ನು ಮುಖ್ಯವಾಹಿನಿಗೆ ತರುವ ಹಾಗೂಈ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಬಲ್ಲ ಛಾತಿಯ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.
    ದೊಡ್ಡ ಸಂಖ್ಯೆಯಲ್ಲಿರುವ ಮಾದಿಗ ಸಮಾಜ ಅಭ್ಯರ್ಥಿ ಆಯ್ಕೆಯಲ್ಲಿ ಸ್ಪಷ್ಟ ನಿಲುವು ತಳೆಯಬೇಕು. ನಮ್ಮ ನಿಲುವು ಏಕಮುಖಿಯಾಗದ್ದರಿಂದ ಸಮಾಜ ಅಭಿವೃದ್ಧಿಯಾಗಿಲ್ಲ. ಪ್ರಜ್ಞಾವಂತ ಮಾದಿಗ ಸಮುದಾಯವು ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ನಿಲುವು ಹೊಂದಬೇಕು. ಈ ವಿಚಾರವಾಗಿ ಸೋಮವಾರ ಸಂಜೆಯಿಂದಲೇ ಜಾಗೃತಿ ಅಭಿಯಾನ ಮಾಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts