More

    ಸ್ವಾಯತ್ತ ಸಂಸ್ಥೆಯಾಗಿ ಬಿಐಇಟಿ ಕಾಲೇಜು   ಪ್ರಾಚಾರ್ಯ ಡಾ.ಎಚ್.ಬಿ. ಅರವಿಂದ್ ಮಾಹಿತಿ

    ದಾವಣಗೆರೆ: ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯಕ್ಕೆ 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ  ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಯುಜಿಸಿಯಿಂದ ಅನುಮತಿ ದೊರೆತಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಬಿ. ಅರವಿಂದ್ ತಿಳಿಸಿದರು.
    ಕಳೆದ 25 ವರ್ಷಗಳಿಂದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಾವಿದ್ಯಾಲಯವು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು 2023ರ ಮಾರ್ಚ್ 3ರಂದು ನವದೆಹಲಿಯ ಯುಜಿಸಿಗೆ ಅರ್ಜಿ ಸಲ್ಲಿಸಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ವಿಟಿಯು ತಜ್ಞರ ಸಮಿತಿಯು 2023ರ ಮೇ 12ರಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತಲ್ಲದೆ, ಕಮಿಟಿ ಶಿಫಾರಸಿನ ಮೇಲೆ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಿ ಯುಜಿಸಿಗೆ ಅರ್ಜಿ ರವಾನಿಸಿತ್ತು. 2024ರ ಜನವರಿ 20ರಂದು ಯುಜಿಸಿ ಸಂಸ್ಥೆಯು ಕಾಲೇಜಿಗೆ 10 ವರ್ಷಗಳವರೆಗೆ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಅನುಮೋದನೆ ನೀಡಿದೆ ಎಂದರು.
    ಸ್ವಾಯತ್ತ ಸಂಸ್ಥೆಗಳು ತನ್ನ ದಿನನಿತ್ಯದ ಕಾರ್ಯಗಳು, ಪಠ್ಯಕ್ರಮ ಹಾಗೂ ಪರೀಕ್ಷೆ ನಡೆಸುವುದರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತವೆ. ಪ್ರವೇಶಕ್ಕೆ ಆಯಾ ವರ್ಷ ಸರ್ಕಾರ ನಿಗದಿಪಡಿಸುವ ಶುಲ್ಕ ಹಾಗೂ ನಿಯಮ ಪಾಲಿಸಬೇಕಾಗುತ್ತದೆ. ಪದವಿ ಮುಗಿದ ನಂತರ ಸ್ವಾಯತ್ತ ಸಂಸ್ಥೆಯ ಸಂಯೋಜಿತ ವಿಶ್ವವಿದ್ಯಾನಿಲಯವೇ ಅಂತಿಮ ಪದವಿ ಹಾಗೂ ಡಿಪ್ಲೋಮಾ ಪ್ರಮಾಣ ಪತ್ರ ನೀಡುತ್ತದೆ ಎಂದು ಹೇಳಿದರು.
    ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ: ಬಿಐಇಟಿ ಕಾಲೇಜಿನ 2023-24ನೇ ಶೈಕ್ಷಣಿಕ ವರ್ಷದಲ್ಲಿ 50ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿದ್ದು, ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಿದ 239 ವಿದ್ಯಾರ್ಥಿಗಳು 355ಕ್ಕೂ ಅಧಿಕ ಅವಕಾಶಗಳೊಂದಿಗೆ ನೇಮಕಾತಿ ಹೊಂದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ವಾರ್ಷಿಕ 30 ಲಕ್ಷ ರೂ. ಪ್ಯಾಕೇಜ್‌ನೊಂದಿಗೆ ಎಂ.ಯು. ಸಿಗ್ಮಾ ಕಂಪನಿಗೆ ನೇಮಕಗೊಂಡಿರುವುದು ವಿಶೇಷ ಎಂದು ತಿಳಿಸಿದರು.
    ಪ್ರಾಜೆಕ್ಟ್ ಪ್ರದರ್ಶನ: ಕಾಲೇಜಿನಲ್ಲಿ ಮೇ 25ರಂದು ‘ನಿರ್ಮಾಣ 4.0’ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಆಯ್ದ ಪ್ರಾಜೆಕ್ಟ್‌ಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.
    ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಡಾ.ಜಿ.ಪಿ. ದೇಸಾಯಿ, ಡಾ. ನಿರ್ಮಲಾ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts