More

    ರಾಜ್ಯದೆಲ್ಲೆಡೆ ಕಳ್ಳತನ ಮಾಡಿದ ಖತರ್‌ನಾಕ್‌ ಕಳ್ಳರ ಗ್ಯಾಂಗ್‌ ಹೊನ್ನಾವರದಲ್ಲಿ ಅಂದರ್‌

    ಹೊನ್ನಾವರ: ತಾಲೂಕಿನ ಮಂಕಿ ಗುಳದಕೇರಿಯಲ್ಲಿ ಎಪ್ರಿಲ್ 29 ರಂದು ತಡರಾತ್ರಿ ಅಣ್ಣಪ್ಪ ಪ್ರಭಾಕರ ಶೇಟ್ ಎಂಬುವವರಿಗೆ ಸೇರಿದ ಶ್ರೀ ಕಾಮಾಕ್ಷಿ ಜ್ಯೂವೆಲರ್ ಚಿನ್ನದ ಅಂಗಡಿ ಕಳ್ಳತನದ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಕಳ್ಲರು ರಾಜ್ಯದ ವಿವಿಧೆಡೆ ಕಳ್ಳತನ ಪ್ರಕರಣದಲ್ಲಿ ಬೇಕಾದವರಾಗಿದ್ದಾರೆ.
    ಬಲವಾದ ವಸ್ತುವಿನಿಂದ ಶಟರನ್ನು ಎತ್ತಿ ಅಂಗಡಿ ಒಳನುಗ್ಗಿದ ಕಳ್ಳರು ಕಳ್ಳತನ ನಡೆಸಿದ್ದರು. 296 ಗ್ರಾಂ ತೂಕದ ಅಂದಾಜು 14.55 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 22.50 ಕೆ.ಜಿ ತೂಕದ 11.10 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣ, ವಸ್ತುಗಳನ್ನು ಕದ್ದೊಯ್ದಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿ, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಖಚಿತ ಮಾಹಿತಿ ಆಧರಿಸಿ ಏಳು ಜನ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

    ಆರೋಪಿಗಳು:
    ಮೊಹಮ್ಮದ್ ಖಾದಿರ್ ಮಿಯಾ ಸುತಾರ್ (28). ಭಟ್ಕಳದ ಮುಗದಮ್ ಕಾಲನಿಯ ಈತನೇ ಈ ಸರಣಿ ಕಳ್ಳತನದ ಮುಖ್ಯ ರೂವಾರಿಯಾಗಿದ್ದಾನೆ. ಮಂಕಿಯಲ್ಲಿ ಈ ಹಿಂದೆ ನಿರಂಜನನಗರದ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಯೂ ಹೌದು. ಟೈಲ್ಸ್ ಕೆಲಸಕ್ಕೆಂದು ಬಂದವನು ಸುತ್ತಮುತ್ತಲಿನ ಒಂಟಿಮನೆ ಮತ್ತು ಬೀಗ ಒಡೆಯಲು ಸುಲಭವಾಗುವ ಅಂಗಡಿಗಳನ್ನು ಕಳ್ಳತನ ಮಾಡಲು ಪ್ಲಾನ್ ಮಾಡುತ್ತಾನೆ.
    ಜಾಫರ್ ಸಾದಿಕ್ ಶೇಖ್ (27), ಈತನು ಭಟ್ಕಳದ ಮುಗ್ದುಮ್ ಕಾಲನಿಯ ನಿವಾಸಿ. ಬಾವಿ ತೋಡುವ ಕೆಲಸ ಮಾಡುವ ಈತ ಈ ಹಿಂದೆ ಶಿರಸಿಯಲ್ಲಿ ಒಂದು ಪ್ರಕರಣ, ಮುರ್ಡೇಶ್ವರದಲ್ಲಿ ಒಂದು ಪ್ರಕರಣ, ಗೋಕಾಕದಲ್ಲಿ ಒಂದು ಪ್ರಕರಣ, ಕುಂದಾಪುರದಲ್ಲಿ ಒಂದು ಪ್ರಕರಣ ಹಾಗೂ ಭಟ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ಅಪರಾಧ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
    ಹಜರತ್ ಅಲಿ ಸಾಬ್ (24), ಈತ ಕಾರವಾರದ ಕೊನೆವಾಡದವನು. ಪೇಂಟಿಂಗ್ ಕೆಲಸ ಮಾಡುವ ಈತ ಕಾರವಾರದಲ್ಲಿ 5 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಖಾದೀರ್‌ನ ದೋಸ್ತಿ ಮಾಡಿಕೊಂಡು ಈ ಗ್ಯಾಂಗ್ ಸೇರಿಕೊಂಡಿದ್ದನು.
    ಅಕ್ರಮ್ ಸಯ್ಯದ್ ಮಹಮ್ಮದ್ ಹುಸೇನ್ (24), ಭಟ್ಕಳದ ಬಿಲಾಲಖಂಡದ ಈತ ಬಟ್ಟೆ ವ್ಯಾಪಾರಿಯಾಗಿದ್ದಾನೆ. ಪಾರ್ಟ್ ಟೈಮ್ ಆಗಿ ಕಳ್ಳತನದ ವೃತ್ತಿಯನ್ನು ಮಾಡುತ್ತಿದ್ದಾನೆ. ಈತ ಹಾವೇರಿಯ ಬಂಕಾಪುರದಲ್ಲಿ 1, ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ 1, ಭಟ್ಕಳ ನಗರ ಠಾಣೆ ವ್ಯಾಪ್ತಿಯಲ್ಲಿ 3, ಉಡುಪಿ ಬ್ರಹ್ಮಾವರದಲ್ಲಿ 2, ಶಿರಸಿ ಗ್ರಾಮೀಣದಲ್ಲಿ 2 ಕಳ್ಳತನ, ಗಾಂಜಾ ಮತ್ತು 420 ಪ್ರಕರಣದ ಆರೋಪಿಯೂ ಆಗಿದ್ದಾನೆ.
    ಮಹಮ್ಮದ್ ಮುಜಾಮಿಲ್ ನಿಸಾರ್ ಅಹಮ್ಮದ್ (26), ಈತ ಭಟ್ಕಳದ ತಲಹಾ ಕಾಲನಿಯವನು. ಕೂಲಿ ಕೆಲಸ ಮಾಡುವ ಈತ ಕಳ್ಳತನ ಮಾಡಲು ಕಾಲ್ ಬಂದಾಗ ಗ್ಯಾಂಗ್ ಸೇರಿಕೊಳ್ಳುತ್ತಿದ್ದ. ಹೆಚ್ಚಿನ ಹಣದ ಆಸೆಗೆ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದನು.
    ಇಬ್ರಾಹಿಂ ದಾವೂದ್ ಸಾಬ್ (20) ಈತನು ಕಾರವಾರದ ಹಬ್ಬೋಡದವನು. ಮೆಕ್ಯಾನಿಕಲ್ ಕೆಲಸ ಮಾಡುತ್ತಿರುವ ಈತನು ಈ ಹಿಂದೆ ಅಂಕೋಲಾದಲ್ಲಿ ಒಂದು ಪ್ರಕರಣದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದನು. ಈತನೂ ಕೂಡ ಹಣದ ಆಸೆಗೆ ಈ ಗ್ಯಾಂಗ್ ಸೇರಿಕೊಂಡು ಕಳ್ಳತನಕ್ಕೆ ಇಳಿದಿದ್ದಾನೆ.
    ಜವೂರ ರಫಿಕ್ ಮಂಡಲ್, ಪಶ್ಚಿಮ ಬಂಗಾಳದ ಮೂಲದವನಾದ ಈತನು ಸುಮಾರು 10 ವರ್ಷಗಳಿಂದ ಭಟ್ಕಳದ ಸಕೀನಾ ಕಾಂಪ್ಲೆಸ್ ಹತ್ತಿರ ವಾಸಿಸುತ್ತಿದ್ದಾನೆ. ಅಕ್ಕಸಾಲಿಗನಾಗಿರುವ ಈತ ಕಳ್ಳತನ ಮಾಡಿದ ಆಭರಣಗಳನ್ನು ಕರಗಿಸಿ ಬಂಗಾರ ಗಟ್ಟಿಯನ್ನು ತಯಾರಿಸುವುದು ಈತನ ಕೆಲಸ. ದುರಾಸೆಯಿಂದ ದರೋಡೆ ಮಾಡುವ ಕೆಲಸದಲ್ಲಿ ತೊಡಗಿದ್ದ.

    https://www.vijayavani.net/gold-shop-robbers-arrested

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts