More

    ಸದಾ ಗ್ಲಾಮರ್​​ ಪ್ರದರ್ಶನ ಮಾಡ್ತೀರಲ್ಲ ಏಕೆ? ಏಕೆಂದರೆ… ಮಾಳವಿಕಾ ಕೊಟ್ಟ ಉತ್ತರ ವೈರಲ್​

    ಹೈದರಾಬಾದ್​: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್​ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್​ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್​ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ಯಾವುದೇ ಕಾಮೆಂಟ್​ ಅಥವಾ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಖ್ಯಾತ ನಟಿ ಮಾಳವಿಕಾ ಮೋಹನನ್ ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಬೋಲ್ಡ್​ ಉತ್ತರವನ್ನೇ ನೀಡಿದ್ದಾರೆ.

    2013ರಲ್ಲಿ ತೆರೆಕಂಡ ಪಟ್ಟಂ ಪೋಲ್​ ಸಿನಿಮಾ ಮೂಲಕ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದ ಮಲಯಾಳಿ ಬ್ಯೂಟಿ ಮಾಳವಿಕಾ ಮೋಹನನ್​, ಇದೀಗ ದಕ್ಷಿಣ ಭಾರತ ಸಿನಿರಂಗದ ಪ್ರಮುಖ ನಟಿಯರ ಸಾಲಲ್ಲಿ ಒಬ್ಬರಾಗಿದ್ದಾರೆ. ಅನೇಕ ದೊಡ್ಡ ದೊಡ್ಡ ಸಿನಿಮಾಗಳ ಭಾಗವಾಗಿರುವ ಮಾಳವಿಕಾ, ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ಕೂಡ ಹೌದು. ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಮಾಳವಿಕಾ ಆಗಾಗ ಗ್ಲಾಮರಸ್​ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ.

    ಇತ್ತೀಚೆಗೆ ಮಾಳವಿಕಾ ಅವರು ಎಕ್ಸ್​ ಖಾತೆಯಲ್ಲಿ #AskMalavika ಸೆಸ್ಸೆನ್ಸ್​ ನಡೆಸಿದ್ದರು. ಈ ವೇಳೆ ನೆಟ್ಟಿಗರೊಬ್ಬರು “ಯಾಕೆ ನೀವು ಯಾವಾಗಲು ಗ್ಲಾಮರಸ್​ ಫೋಟೋಶೂಟ್​ ಮಾಡಿಸುತ್ತೀರಾ ಎಂದು ಪ್ರಶ್ನಿಸಿದ್ದರು. ಇದಕ್ಕೆ ಖಡಕ್​ ಉತ್ತರ ನೀಡಿರುವ ಮಾಳವಿಕಾ, “ಏಕೆಂದರೆ ನಾನದನ್ನು ಇಷ್ಟಪಡುತ್ತೇನೆ” ಎಂದಿದ್ದಾರೆ.

    ಇದೇ ವೇಳೆ ಮತ್ತೊಬ್ಬ ನೆಟ್ಟಿಗ, ಗ್ಲಾಮರ್​ ಪ್ರದರ್ಶನ ಬಿಟ್ಟು ನೀವು ಯಾವಾಗ ನಟನೆ ಆರಂಭಿಸುತ್ತೀರಾ ಎಂದು ಪ್ರಶ್ನಿಸಿದ್ದ. ಇದಕ್ಕೆ ಉತ್ತರ ನೀಡಿರುವ ಮಾಳವಿಕಾ, ನಾನು ಯಾವತ್ತೂ ಮಾಡೋದೇ ಇಲ್ಲ, ಇದರಿಂದ ನಿನಗೆ ಏನಾದರೂ ತೊಂದರೆ ಇದೆಯೇ? ಎಂದಿದ್ದಾರೆ. ಸದ್ಯ ಮಾಳವಿಕಾ ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳು ಮಾಳವಿಕಾ ದಿಟ್ಟತನಕ್ಕೆ ಫಿದಾ ಆಗಿದ್ದಾರೆ.

    ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ಮಾಳವಿಕಾ ಅವರು ಪ್ರಭಾಸ್-ಮಾರುತಿ ಜೋಡಿಯ ಹಾರರ್ ಕಾಮಿಡಿ ಪ್ರಾಜೆಕ್ಟ್ ರಾಜಾಸಾಬ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್​)

    ರಾಜ್​ ಚಿತ್ರದ ನಟಿ ನಿಶಾ ಕೊಠಾರಿ ಈಗ ಹೇಗಿದ್ದಾರೆ? ಎಲ್ಲಿದ್ದಾರೆ? ಏನ್​ ಮಾಡ್ತಿದ್ದಾರೆ ಗೊತ್ತಾ? ಇಲ್ಲಿದೆ ಮಾಹಿತಿ…

    ಅಶ್ಲೀಲ ವಿಡಿಯೋ ಪ್ರಕರಣ: ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಸಿಡಿದೆದ್ದ ನಟಿ ಪೂನಂ ಕೌರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts