More

    ಕಟ್ಟಡಕ್ಕೆ ಬೇಕು ಗಟ್ಟಿತನ

    ಹುಬ್ಬಳ್ಳಿ: ಯಾವುದೇ ಒಂದು ಕಟ್ಟಡ ನಿರ್ಮಿಸುವ ಮೊದಲು ಸಿಮೆಂಟ್‌ನಷ್ಟೇ ಮುಖ್ಯವಾಗಿ ಅದಕ್ಕೆ ಬಳಸುವ ಕಬ್ಬಿಣ ಅಂದರೆ ಟಿಎಂಟಿ ಕಂಬಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನು ಗಮನಿಸಬೇಕು.

    ಕಟ್ಟಡದ ಸುರಕ್ಷತೆ, ಗಟ್ಟಿತನ, ದೀರ್ಘ ಬಾಳಿಕೆ ಸಲುವಾಗಿ ಮಾರುಕಟ್ಟೆಯಲ್ಲಿ ಉತ್ತಮವಾದ ಹಾಗೂ ಗುಣಮಟ್ಟದ ಕಂಬಿಗಳನ್ನು ಬಳಕೆ ಮಾಡಬೇಕು ಎನ್ನುತ್ತಾರೆ ನಿರ್ಮಾಣ ಕ್ಷೇತ್ರದ ತಜ್ಞರು.

    ನೀವು ನಿರ್ಮಿಸುವ ಕಟ್ಟಡಕ್ಕೆ ಸ್ಟೀಲ್ ತೆಗೆದುಕೊಳ್ಳುವಾಗ ಕೆಲವೊಂದಿಷ್ಟು ಕ್ರಮಗಳನ್ನು ಅನುಸರಿಸಿದರೆ ಕಟ್ಟಡದ ಆಯಸ್ಸು ಜಾಸ್ತಿ ಮಾಡಬಹುದು. ಎಲ್ಲಕ್ಕಿಂತ ಮೊದಲು ಕಬ್ಬಿಣದಲ್ಲಿ ಶೇ. 100ರಷ್ಟು ಕಬ್ಬಿಣದ ಅದಿರು ಇದೆಯೇ, ಯಾರು ತಯಾರಿಸಿದ್ದಾರೆ? ಎಂಬುದನ್ನು ಕಂಡುಕೊಳ್ಳಬೇಕು.
    ದೇಶದಲ್ಲಿ ಕೆಲವೇ ಕಂಪನಿಗಳು ಕಬ್ಬಿಣದ ಕಂಬಿಗಳ ಪ್ರಧಾನ ಉತ್ಪಾದಕರಿದ್ದಾರೆ. ಇವರನ್ನು ಪ್ರಾಥಮಿಕ ಉತ್ಪಾದಕರು ಎಂದು ಹೇಳಲಾಗುತ್ತದೆ. ಇವರು ನೇರವಾಗಿ ಕಬ್ಬಿಣದ ಅದಿರಿನಿಂದ ಕಬ್ಬಿಣ ತಯಾರಿಸುವುದರಿಂದ ಕಂಬಿಗಳು ಅತ್ಯಂತ ಹೆಚ್ಚು ಗುಣಮಟ್ಟದಿಂದ ಕೂಡಿರುತ್ತವೆ. ಇವುಗಳನ್ನು ಸರಿಯಾದ ಗೇಜ್ ಅಂದರೆ ಅಳತೆಯಲ್ಲಿ ತಯಾರಿಸಲಾಗುತ್ತದೆ.

    ಕಟ್ಟಡಕ್ಕೆ ಬೇಕು ಗಟ್ಟಿತನ

    ಶುದ್ಧತೆಯ ಪರೀಕ್ಷೆಯಲ್ಲಿ ಇವು ಪಾಸಾಗಿರುವುದರಿಂದ ಗ್ರಾಹಕರು ನೇರವಾಗಿ ಯಾವುದೇ ಸಂಶಯವಿಲ್ಲದೇ ಬಳಕೆ ಮಾಡಬಹುದು.
    ಕಟ್ಟಡ ನಿರ್ಮಿಸುವಾಗ ಒಳ್ಳೆಯ ಗುಣಮಟ್ಟದ ಹಾಗೂ ಅಳತೆಯ ಸ್ಟೀಲ್ ಬಳಸಿದರೆ ಶೇ. 20ರಷ್ಟು ಉಳಿತಾಯ ಮಾಡಬಹುದು. ಕಬ್ಬಿಣದ ಮೇಲಿನ ಖರ್ಚು ಕಡಿಮೆಯಾಗುತ್ತದೆ. ಆದರೆ, ಸಾಧಾರಣ ಸ್ಟೀಲ್ ಬಳಸುವುದರಿಂದ ಕಬ್ಬಿಣದ ಬಳಕೆ ಜಾಸ್ತಿಯಾಗುತ್ತದೆ ಜತೆಗೆ ಗುಣಮಟ್ಟವೂ ಕಡಿಮೆಯಾಗಿರುತ್ತದೆ. ಸಾಧಾರಣ ಸ್ಟೀಲ್ ಕಂಬಿಗಳು ಸರಿಯಾದ ಹಾಗೂ ಸಮರ್ಪಕ ಗೇಜ್‌ನಲ್ಲಿ ಸಿಗುವುದಿಲ್ಲ. ಕೆಲವೊಮ್ಮೆ ಹೆಚ್ಚು ಇಲ್ಲವೇ ಕಡಿಮೆ ಗೇಜ್‌ನಲ್ಲಿ ಬಂದಿರುತ್ತವೆ. 10 ಎಂಎಂನ ಕಂಬಿ 10.5 ಎಂಎಂ ಅಥವಾ 9.6 ಎಂಎಂ ಹೀಗೆ ವ್ಯತ್ಯಾಸವಾಗಿರುತ್ತವೆ. ಇದರಿಂದ ಸ್ಟ್ರಕ್ಚರಲ್ ಇಂಜಿನಿಯರ್ ಸೂಚಿಸಿದಂತೆ ಕಟ್ಟಡ ನಿರ್ಮಿಸಲು ಸಾಧ್ಯವಾಗದೇ ಹೋಗಬಹುದು. ಹಾಗಾಗಿ ಗ್ರಾಹಕರಿಗೆ ನಷ್ಟವಾಗಲಿದೆ.

    ನೀವು ಹಾಗೂ ಇಂಜಿನಿಯರ್ ಡಿಸೈನ್ ಮಾಡಿದಂತೆ ಕಟ್ಟಡ ಇರಬೇಕು ಎಂದರೆ ಗುಣಮಟ್ಟದ ಕಬ್ಬಿಣ ಬಳಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.
    ಇನ್ನು ಅನೇಕ ಕಡೆಗಳಲ್ಲಿ ತೂಕದಲ್ಲಿ ಕಡಿಮೆ ಬರಬಹುದು. ಹಾಗಾಗಿ ಅಧಿಕೃತ ಡೀಲರ್ ಅಥವಾ ಮಾರಾಟಗಾರರಿಂದ ಖರೀದಿಸಿ ಎಂಬುದು ಗುಣಮಟ್ಟದ ಕಬ್ಬಿಣದ ಸರಳು ಉತ್ಪಾದಕರ ಕಳಕಳಿ.

    ಕನ್ನಡದ ನಂಬರ್ 1 ಪತ್ರಿಕೆ ವಿಜಯವಾಣಿ ಏರ್ಪಡಿಸಿರುವ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಕಟ್ಟಡ ನಿರ್ಮಾಣ, ಾರ್ಮಲ್ಯಾಂಡ್ ಕುರಿತ ಗ್ರಾಹಕರ ಗೊಂದಲಗಳಿಗೆ ಪರಿಹಾರ ಸಿಗಲಿದೆ. ನೀವೂ ಒಮ್ಮೆ ಭೇಟಿ ನೀಡಿ.

    ಬೆಂಡ್‌ರಿಬೆಂಡ್ ಟೆಸ್ಟ್: ಎರಡು ಅಡಿಯ ಸ್ಟೀಲ್ ರಾಡ್ ತೆಗೆದುಕೊಂಡು ಮೂರ್ನಾಲ್ಕು ಬಾರಿ ಬೆಂಡ್ ಹಾಗೂ ರಿಬೆಂಡ್ ಮಾಡಿದರೆ ಅದರ ಗುಣಮಟ್ಟ ತಿಳಿಯುತ್ತದೆ. ಸಾದಾ ಇದ್ದರೆ ಬೇಗ ಮುರಿಯುತ್ತದೆ. ಉತ್ತಮವಾಗಿರುವುದು ಹಾಗೇ ಇರುತ್ತದೆ. ಈ ಸಾಮಾನ್ಯ ಪರೀಕ್ಷೆಯನ್ನು ಮಾಡಿಯೂ ಗ್ರಾಹಕರು ಗುಣಮಟ್ಟದ ಕಬ್ಬಿಣ ಆಯ್ಕೆ ಮಾಡಿಕೊಳ್ಳಬಹುದು.

    ಕಾಂಕ್ರೀಟ್ ಕಟ್ಟಡಗಳಿಗೆ ಗುಣಮಟ್ಟದ ಕಂಬಿಗಳನ್ನು ಬಳಸುವುದರಿಂದ ಅವುಗಳ ಬಾಳಿಕೆ, ಸುರಕ್ಷತೆ ಹೆಚ್ಚಾಗುತ್ತದೆ. ಗ್ರಾಹಕರು ಕಬ್ಬಿಣ ಖರೀದಿಸುವಾಗ ಟೆಸ್ಟ್ ಸರ್ಟಿಫಿಕೇಟ್ ಪರಿಶೀಲಿಸಬೇಕು. ಗ್ರಾಹಕರು ಇಂಜಿನಿಯರ್‌ಗಳಿಗೆ ಒಳ್ಳೆಯ ಸ್ಟೀಲ್ ಬಳಸುವಂತೆ ಕೇಳಿದರೆ ಅವರು ಖಂಡಿತ ಬಳಸುತ್ತಾರೆ. ಇದರಿಂದ ಯೋಗ್ಯ ಬೆಲೆಯಲ್ಲಿ ಉತ್ತಮ ಕಟ್ಟಡ ನಿರ್ಮಿಸಿದ ಖುಷಿಯೂ ಜನರಿಗೆ ಇರಲಿದೆ.

    ಮೋಹಿತ ಮೆಹ್ತಾ, ಕಮಲ್ ಟ್ರೇಡಿಂಗ್ ಕಾರ್ಪೋರೇಶನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts