ಹುಬ್ಬಳ್ಳಿ: ಒಳ್ಳೆಯ ಪ್ರದೇಶದಲ್ಲಿ ನಿವೇಶನ ಖರೀದಿಸಿ, ಸ್ವಂತದ್ದೊಂದು ಸೂರು ಮಾಡಿಕೊಳ್ಳಬೇಕು ಎಂಬ ಕನಸು ಹೊತ್ತವರಿಗೆ ಇದೊಂದು ಸುವರ್ಣ ಅವಕಾಶ. ಮನೆ ನಿರ್ಮಾಣಕ್ಕೆ ನಿವೇಶನ ಖರೀದಿ, ನಿರ್ಮಾಣ ಹೇಗೆ? ಸಾಲ ಎಲ್ಲಿ ಪಡೆಯಬೇಕು? ಏನೆಲ್ಲ ದಾಖಲಾತಿ ಬೇಕು? ಹೀಗೆ ಪ್ರತಿಯೊಂದಕ್ಕೂ ಒಂದೊಂದು ಕಡೆ ಓಡಾಡಬೇಕು. ಇಂತಹ ಓಡಾಟ ತಪ್ಪಿಸಿ, ಒಂದೇ ಸೂರಿನಡಿ ಸಮಗ್ರ ಮಾಹಿತಿ ಒದಗಿಸಲು ವಿಜಯವಾಣಿ ಪ್ರಾಪರ್ಟಿ ಎಕ್ಸ್‌ಪೋ ಆಯೋಜಿಸಿದೆ. ಇಲ್ಲೊಮ್ಮೆ ಭೇಟಿ ನೀಡಿದರೆ ಸಾಕು. ನಿಮ್ಮೆಲ್ಲ ಸಂಶಯಗಳಿಗೆ ಪರಿಹಾರ ಸಿಗಲಿದೆ.
ಹೊಸೂರ ರಾಯ್ಕರ್ ಮೈದಾನದಲ್ಲಿ ಭವ್ಯ ಹಾಗೂ ಸಂಪೂರ್ಣ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ಆಯೋಜಿಸಿರುವ ರಿಯಲ್ ಎಸ್ಟೇಟ್ ಮತ್ತು ಇಂಟೀರಿಯರ್ಸ್ ಎಕ್ಸ್‌ಪೋಕ್ಕೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಮೇ 5ರವರೆಗೆ ನಡೆಯಲಿದೆ.
ಪ್ರಾಪರ್ಟಿ ಎಕ್ಸ್‌ಪೋ ಆರಂಭವಾಗುವುದನ್ನೇ ಜನರು ಬಹಳ ದಿನಗಳಿಂದ ಕಾಯುತ್ತಿದ್ದರು. ಶುಕ್ರವಾರ ಬೆಳಗ್ಗೆ ಅದ್ದೂರಿಯಾಗಿ ಉದ್ಘಾಟನೆಯಾಗುತ್ತಿದ್ದಂತೆ ಜನರಲ್ಲಿ ಮಂದಹಾಸ ಮೂಡಿದೆ. ಅನೇಕ ಬಿಲ್ಡರ್ ಹಾಗೂ ಡೆವಲಪರ್‌ಗಳು, ಸಿಮೆಂಟ್, ಕಬ್ಬಿಣ ಉತ್ಪಾದಕರು, ಡೀಲರ್‌ಗಳು, ಮನೆಗಳ ಇಂಟೀರಿಯರ್ಸ್ ಅಲಂಕಾರಿಕ ವಸ್ತುಗಳ ತಯಾರಕರು, ಬ್ಯಾಂಕ್, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಮಳಿಗೆಗಳು ಇಲ್ಲಿವೆ.
ಉದ್ಘಾಟನೆಗೊಂಡ ಮೊದಲ ದಿನವೇ ಎಕ್ಸ್‌ಪೋಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿರುವುದು ಆಯೋಜಕರು, ಬಿಲ್ಡರ್ ಹಾಗೂ ಡೆವಲಪರ್‌ಗಳಲ್ಲಿ ಸಂತಸ ಮೂಡಿಸಿದೆ. ಎಕ್ಸ್‌ಪೋದಲ್ಲಿ ನಿವೇಶನ, ಮನೆ, ಅಪಾರ್ಟ್‌ಮೆಂಟ್, ಾರ್ಮ್ ಲ್ಯಾಂಡ್ ಸೇರಿ ಇತರ ಯೋಜನೆಗಳು ಪ್ರದರ್ಶನಗೊಳ್ಳಲಿದ್ದು, ಇಲ್ಲಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಬಿಲ್ಡರ್ಸ್, ಡೆವಲಪರ್‌ಗಳು ರಿಯಾಯಿತಿ ದರ ನೀಡುತ್ತಿದ್ದಾರೆ. ಇದಲ್ಲದೆ ದ್ವಿಚಕ್ರ ವಾಹನ, ಮೊಬೈಲ್ ೆನ್ ಸೇರಿ ಇನ್ನೂ ಅನೇಕ ವಿಶೇಷ ಬಹುಮಾನಗಳನ್ನೂ ೋಷಿಸಿದ್ದಾರೆ.
ನಿವೇಶನ, ಮನೆ ಖರೀದಿಸುವ ಜನರಿಗೆ ಆರ್ಥಿಕ ಚಿಂತೆಯೂ ಇಲ್ಲ. ಆರ್ಥಿಕ ಸಹಾಯ ಕುರಿತು ಅಲ್ಲೇ ಬ್ಯಾಂಕರ್ಸ್‌ಗಳು ಮಾಹಿತಿ ನೀಡಲಿದ್ದಾರೆ. ಇದಲ್ಲದೆ ಬಿಲ್ಡರ್ಸ್, ಡೆವಲಪರ್‌ಗಳು ಗ್ರಾಹಕರ ಹಿತ ದೃಷ್ಟಿಯಿಂದ ತಮ್ಮದೇ ಆದ ಯೋಜನೆ ರೂಪಿಸಿ ಕಂತುಗಳಲ್ಲಿ ಸಹ ಖರೀದಿಗೆ ಅವಕಾಶ ಕಲ್ಪಿಸುತ್ತಿರುವುದು ವಿಶೇಷವಾಗಿದೆ.
ವಿಜಯವಾಣಿ ವತಿಯಿಂದ ಆಯೋಜಿಸಿರುವ ಪ್ರಾಪರ್ಟಿ ಎಕ್ಸ್‌ಪೋ ಅದ್ಭುತವಾಗಿದೆ. ಒಂದೇ ಸೂರಿನಡಿ ಎಲ್ಲ ಮಾಹಿತಿ ಪಡೆಯಲು ಸಹಕಾರಿಯಾಗಿದೆ. ಇಡೀ ಆವರಣ ಸಂಪೂರ್ಣ ಹವಾ ನಿಯಂತ್ರಿತ ಆಗಿರುವುದರಿಂದ ಬಿಸಿಲಿನ ಝಳ ಮರೆತು ನಮ್ಮಿಷ್ಟದ ಮನೆ ಖರೀದಿಗೆ ಬಿಲ್ಡರ್ಸ್, ಡೆವಲಪರ್‌ಗಳಿಂದ ಸಮಗ್ರ ಮಾಹಿತಿ ಪಡೆಯಬಹುದು.
ಅಕ್ಷಯ ಪಾಟೀಲ