ಕತಾರ್​​ನಲ್ಲಿ ವಿಜೃಂಭಿಸಿದ ತುಳು ಚಿತ್ರ "ತುಡರ್"

Tudar
Published on

ಕತಾರ್​: "ತುಡರ್" ಚಿತ್ರದ ಮಹಾಪ್ರೇಕ್ಷಣೆ ಮೊದಲ ಬಾರಿಗೆ ಕತಾರಿನ ಏಷ್ಯನ್ ಟೌನ್ನಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರದಲ್ಲಿ ಹಾಸ್ಯ, ರಹಸ್ಯ ,ಆಕ್ಷನ್ ಹಾಗೂ ರೊಮಾನ್ಸ್ ಈ ಪ್ರತಿಯೊಂದು ಅಂಶವನ್ನು ಸಮರಸವಾಗಿ ಹೊಂದಿದೆ ಎಂಬುದರಿಂದ ದರ್ಶಕರು ವಿಶೇಷವಾಗಿ ಸಂತೋಷಗೊಂಡರು.

ದರ್ಶಕರು ಚಿತ್ರದ ಕಥೆಯನ್ನು, ನಟನೆಯನ್ನು ಹಾಗೂ ನಿರ್ದೇಶನವನ್ನು ಮೆಚ್ಚಿ ಪ್ರಶಂಶಿಸಿದರು. "ತುಡರ್" ಚಿತ್ರವನ್ನು 2024ರ ಜೂನ್‌ 14ರಂದು ವಿಶ್ವದಾದ್ಯಂತ ಬಿಡುಗಡೆಗೊಳಿಸುವ ಘೋಷಣೆಯು ಪ್ರೇಕ್ಷಕರಲ್ಲಿ ಉತ್ಸಾಹವನ್ನು ತಂದಿತು.

ಈ ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಕತಾರಿನ ಅಧ್ಯಕ್ಷ ಶ್ರೀ ರವಿ ಶೆಟ್ಟಿ, ಕರ್ನಾಟಕ ಸಂಘ ಕತಾರಿನ ಮಾಜಿ ಅಧ್ಯಕ್ಷ ಶ್ರೀ ಮಹೇಶ್‌ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಿಲನ್ ಅರುಣ್ ಮತ್ತು ಡಿಪಿಎಸ್ ಶಾಲೆಯ ಮುಖ್ಯ ಅಧ್ಯಾಪಕ ಶ್ರೀ ಸುಜಿತ್‌ ಕುಮಾರ್‌ರವರು ಹಾಗೂ ವಿವಿಧ ಕರ್ನಾಟಕದ ಸಂಘಗಳ ಅಧ್ಯಕ್ಷರುಗಲು ಉಪಸ್ಥಿತರಿದ್ದರು. ಇದಲ್ಲದೆ, ತುಡರ್ ಚಿತ್ರದ ನಾಯಕ ನಟ ಸಿದ್ಧಾರ್ಥ್ ಶೆಟ್ಟಿಯ ಉಪಸ್ಥಿತಿಯು ಕಾರ್ಯಕ್ರಮದ ಗರಿಮೆಯನ್ನು ಹೆಚ್ಚಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net