More

  ದೇವರಾಜೇಗೌಡ ಒಬ್ಬ ಒಬ್ಬ ಫ್ರಾಡ್, ಪೆನ್​​ಡ್ರೈವ್​ ವ್ಯಾಪಾರಕ್ಕಿಟ್ಟಿದ್ದೆ ಆತ: ಶಿವರಾಮೇಗೌಡ

  ಬೆಂಗಳೂರು: ವಕೀಲ ದೇವರಾಜೇಗೌಡ ಒಬ್ಬ ಒಬ್ಬ ಫ್ರಾಡ್ ಆತನ ಜೊತೆ ವ್ಯವಹರಿಸುವಾಗ ಎಚ್ಚರ. ನನಗೂ ಈ ದೇವರಾಜೇಗೌಡಗೂ ಸಂಬಂಧ ಇಲ್ಲ. ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ತನಿಖೆಯಾಗಲಿ ಎಂದು ಮಾಜಿ ಸಂಸದ ಶಿವರಾಮೇಗೌಡ ಆಗ್ರಹಿಸಿದ್ದಾರೆ.

  ವಕೀಲ ದೇವರಾಜೇಗೌಡ ಮಾಡಿರುವ ಆರೋಪ ಕುರಿತಂತೆ ಪ್ರತಿಕ್ರಿಯಿಸಿದ ಶಿವರಾಮೇಗೌಡ, ಪ್ರಕರಣ ಎಲ್ಲೆಲ್ಲೋ ಹೋಗುತ್ತಿದೆ. ಪೆನ್​ಡ್ರೈವ್​ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಯಾವುದೋ ವಿಚಾರದಲ್ಲಿ ನನ್ನ ಹೆಸರು ಹೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.

  ಪೆನ್​​ಡ್ರೈವ್​​​ ಹೊರಗಿಟ್ಟಿದ್ದು ದೇವರಾಜೇಗೌಡ ಮತ್ತು ಕಾರ್ತಿಕ್. ಹೀಗಾಗಿ ಈ ಇಬ್ಬರನ್ನೂ ​ವಿಚಾರಣೆ ನಡೆಸಬೇಕು. ಈ ಪ್ರಕರಣಕ್ಕೂ ಡಿಕೆ ಶಿವಕುಮಾರ್​ ಅವರಿಗಾಗಲಿ ಮತ್ತು ನನಗಾಗಲಿ ಯಾವುದೇ ಸಂಬಂಧವಿಲ್ಲ. ದೇವರಾಜೇಗೌಡ ನನಗೆ ಫೋನ್ ಮಾಡಿ, ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿಸುವಂತೆ ಹೇಳಿದ್ದ. ನಾನು ಆಗಲಿ ಎಂದು ಫೋನ್​ನಲ್ಲಿ ಹೇಳಿದ್ದೆ. ಈ ಮಾತನ್ನೇ ಇಟ್ಟುಕೊಂಡು ದೇವರಾಜೇಗೌಡ ಸುಳ್ಳು ಮಾಹಿತಿ ನೀಡಿದ್ದಾನೆ.

  LR Shivaramegowda

  ಇದನ್ನೂ ಓದಿ: ಸಿಎಸ್​ಕೆ ವಿರುದ್ಧ 27 ರನ್​ಗಳ ಭರ್ಜರಿ ಜಯ; ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿದ್ದಿಷ್ಟು

  ದೇವರಾಜೇಗೌಡ ಜೊತೆ ವ್ಯವಹರಿಸುವಾಗ ಎಚ್ಚರ. ಆತ ನಾಲಾಯಕ್ ವ್ಯಕ್ತಿ, ಒಬ್ಬ ಫ್ರಾಡ್. ಪೆನ್​​ಡ್ರೈವ್​ ವ್ಯಾಪಾರಕ್ಕಿಟ್ಟವನೇ ಈ ದೇವರಾಜೇಗೌಡ. ನನಗೂ ಈ ದೇವರಾಜೇಗೌಡಗೂ ಸಂಬಂಧ ಇಲ್ಲ. ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ತನಿಖೆಯಾಗಲಿ ಎಂದು ಮಾಜಿ ಸಂಸದ ಶಿವರಾಮೇಗೌಡ ಆಗ್ರಹಿಸಿದ್ದಾರೆ.

  ನಾಲ್ಕು ಮಂತ್ರಿಗಳ ಕಮಿಟಿ ಮಾಡಿ, ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್‌. ಮೋದಿ, ಬಿಜೆಪಿ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ನನಗೆ ಎಲ್.ಆರ್. ಶಿವರಾಮೇಗೌಡ ಮೂಲಕ ನನಗೆ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜೊತೆಗೆ ಮಾತನಾಡಿಲ್ಲ ವಕೀಲ ದೇವರಾಜೇಗೌಡ ಆರೋಪಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts