More

  ಕುಟುಂಬ ಜವಾಬ್ದಾರಿ ನಿರ್ವಹಣೆ ಜತೆ ಸಮಾಜಕ್ಕೆ ಕೊಡುಗೆ ನೀಡಿ

  ಎನ್.ಆರ್.ಪುರ: ಉತ್ತಮ ಸಮಾಜ ನಿರ್ಮಿಸಲು ಯುವಕರ ಪಾತ್ರ ಹಿರಿದು. ಶಿಕ್ಷಣ ಪಡೆದ ಯುಜನರು ಕುಟುಂಬ ಜವಾಬ್ದಾರಿ ನಿರ್ವಹಣೆ ಜತೆ ಸಮಾಜಕ್ಕೂ ಏನಾದರೂ ಕೊಡುಗೆ ನೀಡಬೇಕು ಎಂದು ಕಲಾವಿದ ಅಭಿನವ ಗಿರಿರಾಜ್ ಹೇಳಿದರು.

  ಶುಕ್ರವಾರ ಹೊನ್ನೇಕೊಡಿಗೆ ಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಲ್ಲಿ ಮಾತನಾಡಿ, ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ಕೊಡುಗೆ ನೀಡಿದರೆ ನಿಜವಾದ ಸೇವೆಯಾಗುತ್ತದೆ. ವೈಯಕ್ತಿಕ ಅಭಿವೃದ್ಧಿ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಿ. ಯುವಜನರು, ಮಹಿಳೆಯರು ರಕ್ತದಾನ ಮಾಡಿದರೆ ಅಮೂಲ್ಯವಾದ ಜೀವ ಉಳಿಸಬಹುದು ಎಂದರು.
  ಹೊನ್ನೇಕೊಡಿಗೆ ಪಿಡಿಒ ಕೆ.ಡಿ.ಜೋಸೆಫ್ ಮಾತನಾಡಿ, ಹಾನಿಕಾರಕ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ದುರಾಸೆಯಿಂದ ಪರಿಸರ ಹಾಳು ಮಾಡಬಾರದು ಎಂದು ಹೇಳಿದರು.
  ವೆಲ್ಫೇರ್ ಸೊಸೈಟಿ ನಿರ್ದೇಶಕ ಫಾ.ಜೋವಿಶ್ ಅವರು ಸಂಸ್ಥೆಯ ಚಟುವಟಿಕೆ ಮತ್ತು ಸೌಲಭ್ಯಗಳ ಮಾಹಿತಿ ನೀಡಿದರು. ಸಿಸ್ಟರ್ ಚಾರ್ಲ್ಸ್, ಪ್ರಭಾಕರ್, ರಮೇಶ್, ಎಚ್.ಸಿ.ರೇಖಾ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts