ಮಂದಿರಗಳ ಮರುನಿರ್ಮಾಣ ಕಾರ್ಯ ನನ್ನ ಪಾಲಿಗೆ ಪ್ರಾಯಶ್ಚಿತ್ತ: ಕೆ.ಕೆ. ಮಹಮದ್, ASI ನಿರ್ದೇಶಕ

kk muhammad
ಕೆ,ಕೆ, ಮಹಮದ್​ರ ಸಾಂದರ್ಭಿಕ ಚಿತ್ರ
Published on

ನವದೆಹಲಿ: ಇತ್ತೀಚೆಗೆ ಯೂಟ್ಯೂಬ್ ಚ್ಯಾನಲ್​ನಲ್ಲಿ ನಡೆದ ಸಂದರ್ಶನವೊಂದರಲ್ಲಿ "ಇಸ್ಲಾಮಿಕ್ ದಾಳಿಕೋರರು ಮಾಡಿದ್ದ ದೇವಸ್ಥಾನದ ನಾಶಕ್ಕೆ ಪಶ್ಚಾತ್ತಾಪ ರೂಪದಲ್ಲಿ ಮಂದಿರಗಳ ಜೀರ್ಣೋದ್ಧಾರ ಮಾಡುತ್ತಿದ್ದೇನೆ" ಎಂದು ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಥವಾ ಪುರಾತತ್ವ ಇಲಾಖೆಯ ಮುಖ್ಯ ನಿರ್ದೇಶಕ ಕೆ.ಕೆ. ಮಹಮದ್ ಹೇಳಿದ್ದಾರೆ.ಇವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ಕಾಮೆಂಟ್ ವಿಭಾಗದಲ್ಲಿ ವ್ಯಕ್ತವಾಗಿದೆ. ಇವರು, ಈ ಹಿಂದೆ ರಾಮಜನ್ಮ ಭೂಮಿ ಪ್ರಕರಣದಲ್ಲೂ ನ್ಯಾಯಾಲಯಕ್ಕೆ ಅಯೋಧ್ಯೆಯಲ್ಲಿ ಹಿಂದೆ ದೇವಸ್ಥಾನ ಇದ್ದ ಬಗ್ಗೆ ಸಾಕ್ಷ್ಯವನ್ನು ಒದಗಿಸಿದ್ದರು.

ಅವರು ಈವರೆಗೆ 100ಕ್ಕೂ ಹೆಚ್ಚು ದೇವಸ್ಥಾನಗಳನ್ನು ಮರುನಿರ್ಮಾಣ ಮಾಡಿದ್ದಾರೆ. ಅವರು ತಮ್ಮ ಸಂದರ್ಶನದಲ್ಲಿ ಈ ಕೆಲಸ ಮಾಡುತ್ತಿರುವುದಕ್ಕೆ ಎರಡು ಕಾರಣಗಳನ್ನು ನೀಡಿದ್ದಾರೆ. ಆರ್ಕಿಯಲಾಜಿಕಲ್ ಕಾರಣ ಏನೆಂದರೆ, ಬಿದ್ದಿರುವ ಅವಶೇಷಗಳನ್ನು ಮರು ಜೋಡಿಸಿದರೆ ಹಿಂದಿನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಕಟ್ಟಡ ಮರು ನಿರ್ಮಾಣ ಆಗುತ್ತದೆ.


ಆದರೆ ಅವರೇ ಹೇಳಿಕೊಳ್ಳುವಂತೆ ವೈಯಕ್ತಿಕವಾಗಿ ಈ ಕೆಲಸ ಪಶ್ಚಾತ್ತಾಪದ ಭಾಗ. ಅವರು "ನಾನು, ಹಿಂದಿನ ಕಾಲದಲ್ಲಿ ಮುಸಲ್ಮಾನರು ಭಾರತಕ್ಕೆ ಬಂದಾಗ ಅವರು ಅನೇಕ ದೇವಸ್ಥಾನಗಳನ್ನು ನಾಶ ಮಾಡಿದ್ದರು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಸೂಕ್ಷ್ಮವಾಗಿ ನನಗೆ ಇದಕ್ಕೆ ಪ್ರಾಯಶ್ಚಿತ್ತ ಮಾಡಬೇಕಿದೆ.

ನಾನು ಇಲ್ಲಿಯವರೆಗೆ 100ಕ್ಕೂ ಹೆಚ್ಚು ದೇವಸ್ಥಾನಗಳನ್ನು ಮರುನಿರ್ಮಾಣ ಮಾಡಿದ್ದೇನೆ. ಪ್ರತೀ ಮಂದಿರ ಪುನರ್​ನಿರ್ಮಾಣವಾದಾಗ ನನ್ನ ಮನಸ್ಸಿನಲ್ಲಿ ನಾನು ಪ್ರಾಯಶ್ಚಿತ್ತ ಮಾಡಿದ್ದೇನೆ ಎಂದೇ ಇರುತ್ತದೆ. ಇದನ್ನು ಮಾಡಲು ನನಗೆ ದೇವರು ಅವಕಾಶ ನೀಡಿದ್ದಾರೆ. ಮತ್ತು ನಾನು ಅದನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದೇನೆ. ಹೀಗಾಗಿ ಅದು ನನಗೊಂದು ಪ್ರಾಯಶ್ಚಿತ್ತದ ರಿಪೇರಿ ಕಾರ್ಯ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net