More

    ನೀವು ಸಲ್ಲಿಸಿದ ಗೃಹಜ್ಯೋತಿ ಅರ್ಜಿ ರಿಜಿಸ್ಟರ್​ ಆಗಿದ್ಯಾ? ಪರಿಶೀಲಿಸುವುದು ಹೀಗೆ…

    ಬೆಂಗಳೂರು: ಈಗಾಗಲೇ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಯ ಫಲಾನುಭವಿ ಆಗಲು ಅರ್ಜಿ ಸಲ್ಲಿಕೆ ಕಾರ್ಯಕ್ರಮ ಶುರುವಾಗಿದೆ. ಇದೀಗ ರಾಜ್ಯದಲ್ಲಿ ಸುಮಾರು 1.5 ಕೋಟಿ ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಿನ್ನೆ ನಡೆದ ಬಜೆಟ್ ಅಧಿವೇಶನದಲ್ಲೂ ಪ್ರಸ್ತಕ ವರ್ಷದಲ್ಲಿ 13,910 ಕೋಟಿ ರೂ. ಮೀಸಲಿರಿಸಲಾಗಿದೆ.

    ಆದರೆ ಕೆಲವರಿಗೆ ಸರ್ವರ್​ ಸಮಸ್ಯೆ ಎದುರಾಗಿದ್ದು ಅವರ ಅರ್ಜಿ ಸಲ್ಲಿಕೆ ಆಗಿದೆಯೇ ಎನ್ನುವ ಅನುಮಾನ ಇರುತ್ತದೆ. ಈ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಅದಕ್ಕಾಗಿ ಪ್ರತ್ಯೇಕ ಲಿಂಕ್ ಅನ್ನು ಬಿಡುಗಡೆ ಮಾಡಿದೆ.

    ಈ ಕೆಳಕಂಡ ಲಿಂಕ್‌ಗೆ ಭೇಟಿ ನೀಡಿ ನೀವು ನಿಮ್ಮ ಅರ್ಜಿ ಸಲ್ಲಿಕೆಯಾಗಿದೆಯೇ ಇಲ್ಲವೇ ಎನ್ನುವುದನ್ನು ಕಂಡು ಕೊಳ್ಳಬಹುದಾಗಿದೆ. ಒಂದು ವೇಳೆ ಅರ್ಜಿ ಸಲ್ಲಿಕೆಯಾಗಿದ್ದರೂ ಯಾವುದಾದರು ತೊಂದರೆಯನ್ನು ನೀವು ಅನುಭವಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ ಈ ಪೋರ್ಟಲ್ ಮೂಲಕ ತಿಳಿಸಬಹುದಾಗಿದೆ.
    https://sevasindhu.karnataka.gov.in/StatucTrack/Track_Status

    ಈ ಲಿಂಕ್ ತೆರೆದು ನಿಮ್ಮ ಪ್ರದೇಶಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿರುವ ಘಟಕವನ್ನು ಆಯ್ಕೆ ಮಾಡಬೇಕು. ನಂತರ ನಿಮ್ಮ ಅಕೌಂಟ್ ನಂಬರ್​ಅನ್ನು ನಮೂದಿಸಬೇಕು. ಈ ಅಕೌಂಟ್​ ಸಂಖ್ಯೆ ನಿಮ್ಮ ವಿದ್ಯುತ್​ ಬಿಲ್​ನಲ್ಲಿ ಕನ್ಸ್ಯೂಮರ್​ ಐಡಿ ಎಂಬ ಹೆಸರಿನಲ್ಲಿ ಇರುತ್ತದೆ. ಇದನ್ನು ನಮೂದಿಸಿ ‘ಚೆಕ್​ ಸ್ಟೇಟಸ್​’ ಎನ್ನುವ ಸ್ಕ್ರೀನ್​ ಮೇಲಿನ ಬಟನ್ ಒತ್ತಿದರೆ ಅರ್ಜಿಯ ಸ್ಟೇಟಸ್ ತಿಳಿಯಬಹುದಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts