More

    ಮೈಸೂರಿನ ಕಾವೇರಿ ಸಮೂಹ ಸಂಸ್ಥೆ – ಅಯೋಧ್ಯೆಯ ಡಾ.ರಾಮಮನೋಹರ್ ಲೋಹಿಯ ವಿವಿ ನಡುವೆ ಒಡಂಬಡಿಕೆಗೆ ಸಹಿ

    ಮೈಸೂರು: ಕಾವೇರಿ ಸಮೂಹ ಸಂಸ್ಥೆ ಹಾಗೂ ಅಯೋಧ್ಯೆಯ ಡಾ.ರಾಮಮನೋಹರ್ ಲೋಹಿಯ ವಿಶ್ವ ವಿದ್ಯಾಲಯ ನಡುವೆ ಶುಕ್ರವಾರ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಆಸಕ್ತಿ ಹೆಚ್ಚಿಸುವ ಕುರಿತು ಒಡಂಬಡಿಕೆ ನಡೆಯಿತು.

    ವಿಶ್ವ ವಿದ್ಯಾಲಯದ ಕುಲಸಚಿವ ಉಮಾನಾಥ್ ಅವರೊಂದಿಗೆ ಕಾವೇರಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಜಿ.ಆರ್. ಚಂದ್ರಶೇಖರ್ ಪರವಾಗಿ ಫಾರ್ಮಾಸ್ಯುಟಿಕಲ್ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕ ಪ್ರೊ.ಆರ್. ರವೀಂದ್ರ ಒಡಂಬಡಿಕೆಗೆ ಸಹಿ ಹಾಕಿದರು.

    ಈ ಒಡಂಬಡಿಕೆಯಿಂದ ಜೀವ ವಿಜ್ಞಾನ ಮತ್ತು ಔಷಧ ವಿಜ್ಞಾನ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತಾ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಎರಡು ಸಂಸ್ಥೆಗಳ ನಡುವೆ ಉದ್ಯಮಶೀಲತೆಯ ಕೌಶಲ್ಯ ಅಭಿವೃದ್ಧಿ, ಸಂವಾದ, ಫಲಿತಾಂಶ ಆಧಾರಿತ ತರಬೇತಿ, ಉದ್ಯೋಗ ಹಾಗೂ ಇತರ ಸಂಬಂಧಿತ ಸೇವೆಗಳ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ನಡೆಯಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts