

ಬೆಂಗಳೂರು: ಕೈ ಮುಗಿದು ಮನವಿ ಮಾಡುತ್ತೇನೆ ನನ್ನ ಹಾಗೂ ದೇವೇಗೌಡರ ಮೇಲೆ ಅಭಿಮಾನ ಇದ್ದರೆ ಮುಂದಿನ 48 ಗಂಟೆಯೊಳಗೆ ಎಸ್ಐಟಿ ಮುಂದೆ ಶರಣಾಗು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ.
ಜೆಡಿಎಸ್ ರಾಜ್ಯ ಘಟಕದ ಕಚೇರಿ ಜೆಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಎಚ್ಡಿಕೆ. ಈ ನೆಲದ ಕಾನೂನು ಇದೆ, ಯಾಕೆ ಹೆದರಬೇಕು. ಎಷ್ಟು ದಿನ ಕಳ್ಳ ಪೊಲೀಸ್ ಆಟ. ವಿದೇಶದಿಂದ ಬಂದು ತನಿಖೆಗೆ ಸಹಕರಿಸು ಎಂದು ವಿನಂತಿಸಿದ್ದಾರೆ.
ಪದ್ಮನಾಭನಗರಕ್ಕೆ ನಾನು ಪ್ರಜ್ವಲ್ನನ್ನು ಬಿಡಿಸಲು ತಂದೆ ಜೊತೆ ಮಾತನಾಡಲು ಹೋಗಿಲ್ಲ. ತಂದೆ- ತಾಯಿ ಅವರ ಆರೋಗ್ಯ ವಿಚಾರಿಸಲು ಮತ್ತು ಧೈರ್ಯ ಹೇಳಲು ಹೊಗುತ್ತೇನೆ. ನಾನು ತಂದೆಗೆ ಮನವಿ ಮಾಡಿದ್ದೇನೆ. ಪ್ರಜ್ವಲ್ ಎಲ್ಲೆ ಇದ್ದರೂ ಬಂದು ಸರೆಂಡರ್ ಆಗಲು ಮಾನವಿ ಮಾಡಲು ಹೇಳಿದ್ದೇನೆ. ಇದು ಎಲ್ಲರೂ ತಲೆತಗ್ಗಿಸುವ ಪ್ರಕರಣ. ಹಾಗಾಗಿ ನಾನು ಸಾರ್ವಜನಿಕವಾಗಿ ಮತ್ತೊಮ್ಮೆ ಕ್ಷಮೆ ಕೋರುತ್ತೇನೆ. ಎಲ್ಲರೂ ಅಸಹ್ಯ ಪಡುವ ಪ್ರಕರಣ ಇದು. ಈ ಕೇಸ್ನಲ್ಲಿ ನನ್ನ ಹಾಗೂ ದೇವೇಗೌಡರನ್ನ ತಾಳೆ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಿನ್ನೆ ಆಡಿಯೋ ಬಂತಲ್ಲ. ಈಗ ಕಾಂಗ್ರೆಸ್ ನಾಯಕರು ಯಾಕೆ ಮಾತನಾಡುತ್ತಿಲ್ಲ. ಕುಮಾರಸ್ವಾಮಿ ಪೆನ್ ಡ್ರೈವ್ ಹೊಟ್ಟಿದ್ದು ಅಂತ ಹೇಳು ಅಂತೀರಾ. ಈ ಸರ್ಕಾರ 376 ಸರ್ಕಾರ. ಯಾರು ನಿಮ್ಮ ವಿರುದ್ಧ ಮಾತನಾಡುತ್ತಾರೆ ಅವರಿಗೆ 376 ಹಾಕಿಸುತ್ತಾರೆ. ದೇವರಾಜಜೇ=ಗೌಡ ಬಗ್ಗೆ ನಾನು ವಕಾಲತ್ತು ವಹಿಸಲ್ಲ ಸತ್ಯಾಂಶ ಹೇಳುತ್ತೇನೆ. ದೇವರಾಜೇಗೌಡ ಆಡಿಯೋದಲ್ಲಿ ಯಾರು ಮತನಾಡಿದ್ದು, ಸದಾಶಿವ ನಗರಕ್ಕೆ ಯಾರನ್ನ ಭೇಟಿ ಮಾಡಲು ಹೇಳಿದ್ದರು. ಆಡಿಯೋದಲ್ಲಿ ಶಿವಕುಮಾರ್ ಹೇಳಿದ್ದಾರೆ ಕುಮಾರಸ್ವಾಮಿ ಹೆಸರು ಹೇಳಿ ಅಂದಿದ್ದಿರಾ ಸಿಡಿ ಶಿವು.
ಶಿವಕುಮಾರ್ ನೀವು ತಿಹಾರ್ ಜೈಲಿನಲ್ಲಿ ಇದ್ದಾಗ ನಾನು ನಿಮ್ಮ ತಾಯಿ ಭೇಟಿ ಮಾಡಿ ಸಾಂತ್ವನ ಹೇಳಿದೆ. ನಿಮ್ಮನ್ನು ಕೂಡ ತಿಹಾರ್ ಜೈಲಿನಲ್ಲಿ ಭೇಟಿ ಮಾಡಿ ನಾಲ್ಕು ದಿನಗಳಲ್ಲಿ ನೀವು ಬಿಡುಗಡೆ ಆದ್ರಿ. ಈಗ ನೀವು ಏನು ಮಾಡುತ್ತಿದ್ದೀರಿ. ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಇದ್ದಾಗ ನಮ್ಮ ತಾಯಿ ಕೈಯಿಂದ ಅನ್ನ ತಿಂದಿದ್ದಿರಾ. ತಾಯಿಯ ನೋವು ಏನು ಅಂತ ಗೊತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.