More

    ಮೂರು ವಾರಗಳ ಅಂತರದಲ್ಲಿ ಟೂರ್ನಿಯ ಚಿತ್ರಣವನ್ನೇ ಬದಲಿಸಿದ ಆರ್​ಸಿಬಿ; ಹೇಗೆ ಗೊತ್ತಾ?

    ಬೆಂಗಳೂರು: ಹೊಸ ಅಧ್ಯಾಯವನ್ನು ಸತತ ಸೋಲುಗಳ ಮೂಲಕ ಶುರು ಮಾಡಿ ಭರ್ಜರಿ ಗೆಲುವಿನ ಮೂಲಕ ಕಮ್​ಬ್ಯಾಕ್​ ಮಾಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 15 ದಿನದ ಅಂತರದಲ್ಲಿ 17ನೇ ಆವೃತ್ತಿಯ ಟೂರ್ನಿಯ ಚಿತ್ರಣವನ್ನೇ ಬದಲಿಸುವ ಮೂಲಕ ಪ್ಲೇಆಫ್​ ಪ್ರವೇಶಿಸಿರುವುದು ಎಲ್ಲರ ಹುಬ್ಬೇರಿಸಿದೆ.

    ಮಾರ್ಚ್​ 22ರಂದು ಆರಂಭಗೊಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋಲುವ ಮೂಲಕ ಅಭಿಯಾನ ಆರಂಭಿಸಿದ ಆರ್​ಸಿಬಿ ಬಳಿಕ ಪಂಜಾಬ್​ ಕಿಂಗ್ಸ್​ ಎದುರು ಗೆದ್ದು ಬೀಗಿತ್ತು. ಆ ಬಳಿಕ ಸತತ ಆರು ಪಂದ್ಯಗಳಲ್ಲಿ ಸೋತು 10ನೇ ಸ್ಥಾನಕ್ಕೆ ಕುಸಿದ ಬೆಂಗಳೂರು ತಂಡವು ಪ್ಲೇಆಫ್​ ಪ್ರವೇಶಿಸುವುದು ಕಷ್ಟ ಎಂದು ಹೇಳಲಾಗಿತ್ತು. ಶೇ.01ರಷ್ಟು ಅವಕಾಶವನ್ನು ಹೊಂದಿದ್ದ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಿದ್ದು ಮಾತ್ರ ರಣರೋಚಕ.

    RCB

    ಇದನ್ನೂ ಓದಿ: ನನ್ನ ಪ್ರಕಾರ ಪ್ರಜ್ವಲ್​ ತನಿಖೆ ಎದುರಿಸುವುದು ಸೂಕ್ತ: ನಿಖಿಲ್​ ಕುಮಾರಸ್ವಾಮಿ

    ಏಪ್ರಿಲ್​ 21ರಂದು ಕೆಕೆಆರ್​ ಎದುರು 1 ರನ್​ಗಳ ವಿರೋಚಿತ ಸೋಲು ಕಂಡ ಬಳಿಕ ಪುಟಿದೆದ್ದ ಫಾಫ್​ ಡು ಪ್ಲೆಸಿಸ್​ ಪಡೆಯೂ ಲೀಗ್​ ಹಂತದ ಕೊನೆಯ ಪಂದ್ಯದವರೆಗೂ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ಮೂಲಕ ಯಶಸ್ವಿಯಾಗಿ ಪ್ಲೇಆಫ್​ ಪ್ರವೇಶಿಸಿತ್ತು. ಮೂರು ವಾರಗಳ ಅವಧಿಯಲ್ಲಿ ಆರ್​ಸಿಬಿ ಐಪಿಎಲ್​ನ ಚಿತ್ರಣವನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದು, ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ್ದಾರೆ. ಸತತ ಗೆಲುವಿನ ಮೂಲಕ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಿಸುವ ಉತ್ಸಾಹದಲ್ಲಿದ್ದ ತಂಡಗಳನ್ನು ಲೀಗ್​ ಹಂತದಲ್ಲೇ ಹೊರದಬ್ಬುವಲ್ಲಿ ಯಶಸ್ವಿಯಾಯಿತು. ಇದಲ್ಲದೆ ಉತ್ತಮ ರನ್​ರೇಟ್​ ಆಧಾರದ ಮೇಲೆ ಪ್ಲೇಆಫ್​ ಪ್ರವೇಶಿಸಿತ್ತು.

    ಈ ಮೂಲಕ ಆರ್​ಸಿಬಿ ಪಾಲಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ. ಇದೀಗ ಎಲಿಮಿನೇಟರ್​ ಪಂದ್ಯಕ್ಕೆ ಅರ್ಹತೆ ಪಡೆದಿರುವ ಆರ್​ಸಿಬಿ ಪಾಲಿಗೆ ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯ ಎದುರಾಗಿದೆ. ಮೇ 22 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​ಸಿಬಿ ರಾಜಸ್ಥಾನ ವಿರುದ್ಧ ಗೆದ್ದರೆ ಕ್ವಾಲಿಫೈಯರ್-2 ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್​ಗೇರಲಿದೆಯಾ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts