More

  ಧೋನಿಗೆ ಹ್ಯಾಂಡ್ ಶೇಕ್​ ​ಮಾಡುವಷ್ಟು ಕನಿಷ್ಠ ಜ್ಞಾನ ಆರ್​ಸಿಬಿ ಆಟಗಾರರಿಗೆ ಇಲ್ಲ; ಕಿಡಿಕಾರಿದ ಮಾಜಿ ಕ್ರಿಕೆಟಿಗರು

  ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವಿನ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಗೆಲುವಿನ ನಗೆ ಬಿರಿದ್ದು, ಚೆನ್ನೈ ಸೂಪರ್​ಕಿಂಗ್ಸ್​ಗೆ ಸೋಲುಣಿಸುವ ಮೂಲಕ ಟೂರ್ನಿಯಿಂದ ಹೊರದಬ್ಬಿದೆ. ಟೂರ್ನಿಯ ಮೊದಲಾರ್ಧದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್​ಸಿಬಿ ದ್ವತಿಯಾರ್ಧದಲ್ಲಿ ಮಾಡಿದ ಕಮ್​ಬ್ಯಾಕ್​ ಐಪಿಎಲ್​ನ ಚಿತ್ರಣವನ್ನೇ ಬದಲಿಸಿತ್ತು. ಇನ್ನೂ ಪಂದ್ಯದ ವೇಳೆ ನಡೆದ ಘಟನೆಯೊಂದು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

  ಪಂದ್ಯ ಮುಗಿದ ಬಳಿಕ ಆರ್​ಸಿಬಿ ಆಟಗಾರರು ಸಿಎಸ್​ಕೆ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರಿಗೆ ಗೌರವ ಸೂಚಿಸಿಲ್ಲ. ಇದು ಅವರ ಕೊನೆಯ ಪಂದ್ಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಇದರ ಹೊರತಾಗಿಯೂ ಆಟಗಾರರು ಹ್ಯಾಂಡ್​ ಶೇಕ್​​​ ಸಹ ಮಾಡಿಲ್ಲ ಎಂದು ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.

  ಇದನ್ನೂ ಓದಿ: ಆರ್​ಸಿಬಿ ಮುಂದಿನ ಎದುರಾಳಿ ಯಾರು ಗೊತ್ತಾ?; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್

  ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಮೈಕೆಲ್​ ವಾಗನ್​ ಹಾಗೂ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ, ನೀವು ವಿಶ್ವಕಪ್​ ಗೆದ್ದರೂ ಪರ್ವಾಗಿಲ್ಲ. ಆದರೆ, ಪಂದ್ಯ ನಡೆದಾಗ ಎದುರಾಳಿ ತಂಡದ ಸದಸ್ಯನ ಜೊತೆ ಹ್ಯಾಂಡ್​ ಶೇಕ್​​ ಮಾಡುತ್ತೀರಿ. ಹೀಗೆ ಮಾಡಿದರೆ ಪಂದ್ಯ ಮುಗಿದಿದ್ದೆ ಮತ್ತು ನಮ್ಮ ನಡುವಿನ ಮುನಿಸು ಅಂತ್ಯವಾಗಿದೆ ಎಂದರ್ಥ. ಆರ್​ಸಿಬಿ ಆಟಗಾರರು ಧೋನಿ ಔಟಾದ ಬಳಿಕ ಅವರ ಬಳಿ ಹ್ಯಾಂಡ್​ ಶೇಖ್​ ಮಾಡಬಹುದಿತ್ತು. ಆದರೆ, ಆರ್​ಸಿಬಿ ಆಟಗಾರರು ಹಾಗೆ ಮಾಡಲಿಲ್ಲ ಈ ರೀತಿಯ ಕ್ರಮ ಸರಿಯಲ್ಲ ಎಂದು ಇವರಿಬ್ಬರು ಕಿಡಿಕಾರಿದ್ದಾರೆ.

  ಗಮನಾರ್ಹವೆಂದರೆ, ಧೋನಿ ಸಿಎಸ್​ಕೆ ಸೋಲಿನ ಬಳಿಕ ಆರ್​ಸಿಬಿ ಡಗೌಟ್​ಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ಹಸ್ತಲಾಘನ ಮಾಡಿದರು. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts