More

  ಆರ್​ಸಿಬಿ ಮುಂದಿನ ಎದುರಾಳಿ ಯಾರು ಗೊತ್ತಾ?; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್

  ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 68ನೇ ಐಪಿಎಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 27 ರನ್​ಗಳ ಭರ್ಜರಿ ಜಯ ಸಾಧಿಸಿದ್ದು, ನಿರಾಯಸವಾಗಿ ಪ್ಲೇಆಫ್​ ಪ್ರವೇಶಿಸಿದೆ. ಮಹತ್ವದ ಪಂದ್ಯದಲ್ಲಿ ಗೆದ್ದು ಬೀಗಿದ ಆರ್​ಸಿಬಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

  ಯಾವುದೇ ಫೈನಲ್​ ಪಂದ್ಯಕ್ಕೂ ಕಡಿಮೆ ಇಲ್ಲದಂತೆ ನಡೆದ ಮ್ಯಾಚ್​ನಲ್ಲಿ ಗೆದ್ದು ಬೀಗಿದ ಆರ್​ಸಿಬಿ ಫಲಿತಾಂಶದ ಬಳಿಕ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದು ಹೇಳಬಹುದಾಗಿದೆ. ಆರ್​ಸಿಬಿ ಗೆಲುವಿಗೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಆರ್​ಸಿಬಿ ತಂಡ ಕಣಕ್ಕಿಳಿಯಬೇಕಿರುವುದು ಎಲಿಮಿನೇಟರ್ ಪಂದ್ಯದಲ್ಲಿ. ಈ ಮ್ಯಾಚ್​ನಲ್ಲಿ ಫಾಫ್ ಪಡೆಯ ಎದುರಾಳಿ ಯಾರು ಎಂಬುದೇ ಈಗ ಕುತೂಹಲ ಮೂಡಿದೆ.

  RCB

  ಇದನ್ನೂ ಓದಿ: ಐಪಿಎಲ್​ನಲ್ಲಿ ಮತ್ತೊಂದು ವಿವಾದಾತ್ಮಕ ತೀರ್ಪು; ನಾಟೌಟ್​ ಇದ್ದರೂ ಔಟ್​ ಎಂದ ಅಂಪೈರ್​

  ಏಕೆಂದರೆ ಆರ್​ಸಿಬಿ ತಂಡಕ್ಕೆ ಮುಂದಿನ ಎದುರಾಳಿಯಾಗಿ ರಾಜಸ್ಥಾನ್ ರಾಯಲ್ಸ್ ಅಥವಾ ಸನ್​ರೈಸರ್ಸ್ ಹೈದರಾಬಾದ್ ತಂಡ ಸಿಗಬಹುದು. ಇಲ್ಲಿ ಉಭಯ ತಂಡಗಳಿಗೂ ಒಂದೊಂದು ಪಂದ್ಯ ಬಾಕಿಯಿದ್ದು, ಈ ಪಂದ್ಯಗಳ ಫಲಿತಾಂಶದ ಬಳಿಕ ಇದು ನಿರ್ಧಾರವಾಗಲಿದೆ. ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋತು, ಪಂಜಾಬ್ ಕಿಂಗ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಗೆದ್ದರೆ, ಆರ್​ಸಿಬಿ ತಂಡಕ್ಕೆ ಆರ್​ಆರ್​ ಎದುರಾಳಿಯಾಗಿ ಸಿಗಲಿದೆ.

  ಒಂದು ವೇಳೆ ವೇಳೆ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಇಂದಿನ ಪಂದ್ಯದಲ್ಲಿ ಸೋತರೆ, ಆರ್​ಸಿಬಿ ತಂಡದ ಎದುರಾಳಿ ಎಸ್​ಆರ್​ಹೆಚ್​ ತಂಡ. ಇನ್ನು ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆದ್ದರೆ ಆರ್​ಸಿಬಿ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಎಲಿಮಿನೇಟರ್​ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಹೀಗಾಗಿ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳ ಫಲಿತಾಂಶದೊಂದಿಗೆ ಆರ್​ಸಿಬಿ ತಂಡದ ಮುಂದಿನ ಎದುರಾಳಿ ಯಾರು ಎಂಬುದು ನಿರ್ಧಾರವಾಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts