More

    51 ವರ್ಷವಾದ್ರೂ ‘ಹಾಲುಂಡ ತವರು’ ನಟಿ ಸಿತಾರಾ ಇನ್ನೂ ಸಿಂಗಲ್​; ತಂದೆಯಿಂದಾಗಿ ಮದ್ವೆ ನಿರ್ಧಾರವನ್ನೇ ಕೈಬಿಟ್ಟಳ್ಳು…

    ಬೆಂಗಳೂರು: ನಟಿ ಸಿತಾರಾ ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿರೋ ಇವರ ಪೂರ್ತಿ ಹೆಸರು  ಸಿತಾರಾ ನಾಯರ್. ಕನ್ನಡದ ಸ್ಟಾರ್​ ನಟರ ಜತೆ  ನಟಿಸಿದ್ದ ಈ ನಟಿ ತಾಯಿ, ಹೆಂಡ್ತಿ, ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ತೆರೆ ಮೇಲೆ ಮಿಂಚಿದ್ದ ಈ ನಟಿ 51 ವರ್ಷವಾದ್ರೂ ಇನ್ನೂ ಮದುವೆ ಆಗದೆ ಒಂಟಿ ಜೀವನ ನಡೆಸುತ್ತಿದ್ದಾರೆ.

    ಸಿತಾರಾ ಸಂದರ್ಶನದಲ್ಲಿ, ‘ನನಗೆ ಮದುವೆ ಆಗಿಲ್ಲ, ಇದು ಬಹಳ ಜನರಿಗೆ ಗೊತ್ತಿಲ್ಲ. ಆದರೆ ನಾನೊಂದು ಮದುವೆ ಆದರೆ ಖಂಡಿತ ಅದನ್ನು ಗುಟ್ಟಾಗಿ ಇಡುವುದಿಲ್ಲ, ಎಲ್ಲರಿಗೂ ತಿಳಿಸುತ್ತೇನೆ’ ಎಂದಿದ್ದರು.

    ನಟಿ ಸಿತಾರಾ ಕೇರಳದ ಕಿಲಿಮನೂರ್ ಎಂಬಲ್ಲಿ ಜನಿಸಿದರು. ಪೋಷಕರ ಹೆಸರು ರಾಮೇಶ್ವರನ್ ನಾಯರ್ ಮತ್ತು ವಲ್ಸಲಾ ನಾಯರ್. ಕಾಲೇಜು ಓದುವಾಗಲೇ ಸಿನಿಮಾಕ್ಕೆ ಪ್ರವೇಶಿಸಿದರು ಸಿತಾರಾ. ಕೆಲವೇ ದಿನಗಳಲ್ಲಿ ಖ್ಯಾತರಾಗಿಬಿಟ್ಟರು. ಆ ಸಮಯದಲ್ಲೆಲ್ಲಾ ತಂದೆಯೊಂದಿಗೆ ಚಿತ್ರೀಕರಣಕ್ಕೆ ಹೋಗುವುದು ಬರುವುದು ಮಾಡುತ್ತಿದ್ದರು. ತಂದೆ ರಾಮೇಶ್ವರನ್ ನಾಯರ್ ಅವರನ್ನು ಬಹುವಾಗಿ ಹಚ್ಚಿಕೊಂಡಿದ್ದರು ಸಿತಾರಾ. ಅವರ ನೆರಳಲ್ಲೇ ಸಿತಾರಾ ಇದ್ದರು. ನಾಲ್ಕೂ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಅವರು ಮಾಡುತ್ತಿದ್ದರು. ಆದರೆ ಅಪ್ಪ ತೀರಿಕೊಂಡಾಗ ತೀವ್ರ ಆಘಾತಕ್ಕೆ ಒಳಗಾದ ಸಿತಾರಾ ಸಿನಿಮಾಗಳಿಂದಲೂ ದೂರ ಉಳಿದುಬಿಟ್ಟರು. ಅಷ್ಟೆ ಅಲ್ಲ ಮದುವೆ ಬಗ್ಗೆ ಯೋಚನೆ ಸಹ ಅವರು ಮಾಡಲಿಲ್ಲ. ತನ್ನ ಜೀವನದ ಗುರು, ಸರ್ವಸ್ವವಾಗಿದ್ದ ಅಪ್ಪ ನಿಧನದ ಬಳಿಕ ತನ್ನ ಬದುಕಿಗೆ ಮತ್ತೊಬ್ಬ ವ್ಯಕ್ತಿಯ ಅಗತ್ಯವಿಲ್ಲ ಎನ್ನಿಸಿತು. ಹಾಗಾಗಿ ಮದುವೆ ನಿರ್ಧಾರ ಕೈಬಿಟ್ಟೆ ಎನ್ನುತ್ತಾರೆ ಸಿತಾರಾ. ಈಗಲೂ ತನಗೆ ಮದುವೆಯಾಗುವ ಆಸಕ್ತಿ ಇಲ್ಲ ಎಂದುಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts