More

  ಕೆಲವೇ ರೈತರಿಗೆ ಬರ ಪರಿಹಾರ, ನೆರವಿನ ನಿರೀಕ್ಷೆಯಲ್ಲಿದ್ದ ಅನ್ನದಾತರು ಸಂಕಷ್ಟದಲ್ಲಿ

  ಹುಬ್ಬಳ್ಳಿ: ವರ್ಷದ ನಂತರವಾದರೂ ಪರಿಹಾರ ಸಿಗುತ್ತಿದೆ ಎಂಬ ಖುಷಿಯಲ್ಲಿದ್ದ ಬರಗಾಲ ಪೀಡಿತ ಧಾರವಾಡ ಜಿಲ್ಲೆಯ ರೈತರಿಗೆ ಸರ್ಕಾರ ಮತ್ತೆ ಅನ್ಯಾಯ ಮಾಡಿದ್ದು, “ಬರ’ಸಿಡಿಲು ಬಡಿದಂತಾಗಿದೆ.

  2023ರ ಮುಂಗಾರು ಹಾಗೂ ಹಿಂಗಾರು ಎರಡೂ ಹಂಗಾಮಿನಲ್ಲಿ ಮಳೆ ಕೊರತೆಯಿಂದ ಉಂಟಾದ ಬರಗಾಲದಿಂದಾಗಿ ಜಿಲ್ಲೆಯಲ್ಲಿ ಸಮರ್ಪಕವಾಗಿ ಬೆಳೆ ಬರಲಿಲ್ಲ. ಕೇಂದ್ರದ ತಂಡ ಬಂದು ವೀಕ್ಷಣೆ ಮಾಡಿ ಹೋಗಿದೆ. ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಣೆಯನ್ನೂ ಮಾಡಿತ್ತು.

  ವರ್ಷದ ಹೋರಾಟದ ನಂತರ ಇದೀಗ ಪರಿಹಾರ ವಿತರಣೆ ಮಾಡುವ ಸಂದರ್ಭದಲ್ಲಿ ಕೆಲವೇ ರೈತರನ್ನು ಪರಿಗಣಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಇನ್ಪುಟ್ ಸಬ್ಸಿಡಿಯಾಗಿ 108 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಬಹಳಷ್ಟು ರೈತರ ಖಾತೆಗಳಿಗೆ ಹಣ ಜಮಾ ಆಗಿಲ್ಲ. ಈ ಹಿಂದೆ ಎರಡು ಸಾವಿರ ರೂ. ಮಧ್ಯಂತರ ಪರಿಹಾರ ಕೂಡ ಬಂದಿಲ್ಲ ಎಂದು ಶಿರಗುಪ್ಪಿ ಹೋಬಳಿ, ಮೊರಬ ಹೋಬಳಿ ರೈತರು ದೂರಿದ್ದಾರೆ.

  ಇದೇ ರೀತಿ ಜಿಲ್ಲೆಯ ಬಹಳಷ್ಟು ರೈತರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.

  ಸಮಸ್ಯೆ ಏನು:
  ನಿಯಮಾವಳಿ ಪ್ರಕಾರ ಬರಗಾಲವಿದ್ದರೂ ಜಮೀನು ಬಿತ್ತನೆ ಮಾಡಿರಬೇಕು. ಅದರಲ್ಲಿ ಶೇ. 33ರಷ್ಟು ಬೆಳೆ ಹಾನಿಯಾಗಿರಬೇಕು. ಅಂದರೆ ಮಾತ್ರ ಪರಿಹಾರಕ್ಕೆ ಪರಿಗಣಿಸಲಾಗುತ್ತದೆ. ಆದರೆ, ಮಳೆಯಾಗದೇ ಹದವಿಲ್ಲ ಎಂದು ಅನೇಕ ರೈತರು ಬಿತ್ತನೆ ಮಾಡಿಲ್ಲ. ಬಿತ್ತನೆಗಾಗಿ ತಂದಿಟ್ಟುಕೊಂಡಿದ್ದ ಬೀಜ, ಗೊಬ್ಬರ ನಷ್ಟವಾಗಿ ಹೋದವು. ಇಷ್ಟಿದ್ದರೂ ಇಂತಹ ರೈತರಿಗೆ ಪರಿಹಾರದಿಂದ ದೂರವಾಗಿದೆ.

  ತಪ್ಪು ಸಮೀಕ್ಷೆ:
  ಇನ್ನು ಕೆಲ ರೈತರ ಜಮೀನಿನಲ್ಲಿ ಸಮೀೆ ಮಾಡಿರುವ ಅಧಿಕಾರಿಗಳು ಆಪ್ನಲ್ಲಿ ತಪು$್ಪ ಮಾಹಿತಿ ಭತಿರ್ ಮಾಡಿದ್ದಾರೆ. ಹೊಲದಲ್ಲಿ ಬೆಳೆ ಇದ್ದರೂ ಖಾಲಿ ಜಮೀನು ತೋರಿಸಲಾಗಿದೆ. ಇಂತಹ ಅನೇಕ ಪ್ರಸಂಗಗಳು ನವಲಗುಂದ ತಾಲೂಕಿನ ಮೊರಬ ಹೋಬಳಿಯಲ್ಲಿ ನಡೆದಿವೆ ಎಂದು ಅಲ್ಲಿನ ರೈತರು ದೂರಿದ್ದಾರೆ.

  ಬೆಳೆ ಪರಿಹಾರ ಮಾತ್ರ:
  ಬರಗಾಲ ಘೋಷಣೆಯಾದ ಮೇಲೆ ಎಲ್ಲ ರೈತರಿಗೂ ಪರಿಹಾರ ನೀಡಬೇಕು. ಆದರೆ, ಈಗ ಬಿತ್ತನೆ ಮಾಡಿದ ಜಮೀನಿಗೆ ಮಾತ್ರ ಪರಿಹಾರ ಎಂದು ಹೇಳುತ್ತಿರುವುದು ಅನ್ನದಾತರಿಗೆ ಮಾಡಿದ ಅನ್ಯಾಯ. ಅನೇಕ ರೈತರು ಇದು ಬೆಳೆ ಪರಿಹಾರವೋ, ಬರ ಪರಿಹಾರವೋ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  ಜಿಲ್ಲಾಡಳಿತಕ್ಕೆ ಮನವಿ:
  ಹುಬ್ಬಳ್ಳಿ ತಾಲೂಕಿನ ರೈತರಿಗೆ ಪರಿಹಾರ ಸಿಕ್ಕಿಲ್ಲ. ಹೊಲದಲ್ಲಿ ಬೆಳೆ ಇದ್ದರೂ ಸಂರಕ್ಷಣ ಆಪ್ನಲ್ಲಿ ಡಾಟಾ ಎಂಟ್ರಿ ತೋರಿಸುತ್ತಿಲ್ಲ. ಇಲಾಖೆ ಸಿಬ್ಬಂದಿಯಿಂದ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಶಿರಗುಪ್ಪಿ ಹೋಬಳಿಯ ರೈತರಾದ ರಾಜು ಕಂಪ್ಲಿ, ಸುಭಾಸ ಸೋಸವಿರ್, ಜಿ.ಎನ್. ಪಾಟೀಲ, ಹನುಮಂತಪ್ಪ ಕಂಬಳಿ, ಸುಭಾಸ ಬೂದಿಹಾಳ, ಶಂಭು ಅಂಗಡಿ, ಪ್ರವಿಣ ನಾಗರಳ್ಳಿ, ವೀರಭದ್ರಪ್ಪ ಮಡಿವಾಳರ, ನಾಗನಗೌಡ ಪಾಟೀಲ, ಚಂದ್ರಶೇಖರ ಅಲ್ಲಾಪುರ, ಶಿವಪ್ಪ ವಾಲಿ ಇತರ ರೈತರು ಆಗ್ರಹಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts