More

  ಕಲಬುರಗಿ To ಬೆಳಗಾವಿ ವಿಮಾನ ಸಂಚಾರ ಆರಂಭ; ಟಿಕೆಟ್​ ಬೆಲೆ ಕೇಳಿದರೆ ನೀವು ಶಾಕ್​ ಆಗುವುದಂತು ಖಂಡಿತಾ

  ಬೆಂಗಳೂರು: ಕಲ್ಯಾಣ ಕರ್ನಾಟಕದ ಹೃದಯಭಾಗದಲ್ಲಿರುವ ಕಲಬುರಗಿ ಹಾಗೂ ಕುಂದಾನಗರಿ ಬೆಳಗಾವಿ ನಡುವೆ ಸಂಚರಿಸುವ ಜನರಿಗೆ ಶುಭಸುದ್ದಿಯೊಂದು ಹೊಬಿದ್ದಿದ್ದು, ಈ ಎರಡು ನಗರಗಳ ನಡುವೆ ವಾರದಲ್ಲಿ ನಾಲ್ಕು ದಿನ ವಿಮಾನ ಸಂಚಾರ ನಡೆಸಲಿದೆ. ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಬೆಳಗಾವಿ-ಕಲಬುರಗಿ ನಡುವೆ ವಿಮಾನ ಸಂಚಾರ ಘೋಷಣೆ ಮಾಡಿದೆ.

  ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಸುಮಾರು 3 ಗಂಟೆಯಲ್ಲಿ ಜನರು ಸೇಡಂ ರಸ್ತೆಯಲ್ಲಿರುವ ಕಲಬುರಗಿ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಪ್ರತಿದಿನ ಬೆಳಗಾವಿ-ಕಲಬುರಗಿ ನಡುವೆ ಸಂಚಾರ ನಡೆಸುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ವಿಮಾನ ಸಂಚಾರ ಘೋಷಿಸಲಾಗಿದ್ದು, ವಾರದಲ್ಲಿ 4 ದಿನ ವಿಮಾನ ಸೇವೆ ಇರಲಿದೆ.

  ಇದನ್ನೂ ಓದಿ: ಮತದಾನಕ್ಕೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದುಷ್ಕೃತ್ಯ; ಬಿಜೆಪಿ ನಾಯಕ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ

  ಸುದ್ದಿ ಮೂಲಗಳ ಪ್ರಕಾರ ಸೋಮವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಳಗಾವಿ-ಕಲಬುರಗಿ ನಡುವೆ ವಿಮಾನ ಹಾರಾಟ ನಡೆಸಲಿದೆ. ಈ ಮಾರ್ಗದಲ್ಲಿ ಎಸ್5-153 ಮತ್ತು ಎಸ್5-127 ಮಾದರಿಯ ವಿಮಾನ ಹಾರಾಡಲಿದೆ. ಬೆಳಗಾವಿಯಿಂದ ಹೊರಡುವ ವಿಮಾನ ತಿರುಪತಿ ಮೂಲಕ ಕಲಬುರಗಿಗೆ ಪ್ರಯಾಣಿಸಲಿದೆ. ಬೆಳಗಾವಿ-ಕಲಬುರಗಿ ನಡುವೆ ಎಸ್5-153 ವಿಮಾನ ಸಂಚಾರ ನಡೆಸಲಿದೆ. ಈ ವಿಮಾನ ಬೆಳಗಾವಿಯಿಂದ ಮಧ್ಯಾಹ್ನ 2.55ಕ್ಕೆ ಹೊರಟು, 4.05ಕ್ಕೆ ತಿರುಪತಿಯಲ್ಲಿ ಲ್ಯಾಂಡ್ ಆಗಲಿದೆ. ತಿರುಪತಿಯಿಂದ 4.30ಕ್ಕೆ ಹೊರಟು, 5.04ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದೆ.

  ಕಲಬುರಗಿ-ಬೆಳಗಾವಿ ನಡುವೆ ಎಸ್‌5-127 ವಿಮಾನ ಹಾರಾಟ ನಡೆಸಲಿದೆ. ಕಲಬುರಗಿಯಿಂದ ಸಂಜೆ 6.35ಕ್ಕೆ ಹೊರಡುವ ವಿಮಾನ 7.40ಕ್ಕೆ ತಿರುಪತಿಗೆ ತಲುಪಲಿದೆ. ತಿರುಪತಿಯಿಂದ 8.05ಕ್ಕೆ ಹೊರಡುವ ವಿಮಾನ ಬೆಳಗಾವಿಯನ್ನು 8.50ಕ್ಕೆ ತಲುಪಲಿದೆ. ಬೆಳಗಾವಿ-ಕಲಬುರಗಿ ನಡುವಿನ ಪ್ರಯಾಣ ದರ ಪ್ರಾಥಮಿಕವಾಗಿ 6000 ರೂ. ನಿಗದಿ ಮಾಡಲಾಗಿದೆ. ಈ ದರವನ್ನು ಕೇಳಿ ಪ್ರಯಾಣಿಕರು ಶಾಕ್​ ಆಗಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts