More

  ಆರ್​ಸಿಬಿ ಗೆಲುವಿಗೆ ಕಾರಣವಾಯ್ತು ಧೋನಿ ಸಿಡಿಸಿದ ಆ ಒಂದು ಸಿಕ್ಸರ್!

  ಬೆಂಗಳೂರು: ಮೇ 18ರಂದು ಸಿಎಸ್​ಕೆ ವಿರುದ್ಧ ನಡೆದ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಭರ್ಜರಿ ಜಯಗಳಿಸಿದ್ದು, ಐದು ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡವನ್ನು ಪ್ಲೇಆಫ್​ ರೇಸ್​ನಿಂದ ಹೊರದಬ್ಬುವಲ್ಲಿ ಯಶಸ್ವಿಯಾಗಿದೆ. ಹಾಲಿ ಟೂರ್ನಿಯಲ್ಲಿ ಆರ್​​ಸಿಬಿಗೆ ಇದು ಆರನೇ ಗೆಲುವಾಗಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.

  ಈ ಬಾರಿ ಎಂಎಸ್ ಧೋನಿ ಕೂಡ ಬೆಂಗಳೂರಿನ ಈ ಗೆಲುವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಅಚ್ಚರಿ ಎಂದರೆ, ಒಂದು ಲೆಕ್ಕದಲ್ಲಿ ಆರ್​ಸಿಬಿ ತಂಡ ಪ್ಲೇ ಆಫ್​ಗೇರಲು ಕಾರಣವಾಗಿದ್ದೇ ಮಹೇಂದ್ರ ಸಿಂಗ್ ಧೋನಿ ಎಂದು ಹೇಳಲಾಗಿದೆ. ಈ ಬಗ್ಗೆ ಆರ್​ಸಿಬಿ ಆಟಗಾರ ಖಚಿತಪಡಿಸಿದ್ದು, ಈ ಸುದ್ದಿ ಸಖತ್​ ವೈರಲ್​ ಆಗುತ್ತಿದೆ.

  ಪ್ಲೇ ಆಫ್ ತಲುಪಲು ಬೆಂಗಳೂರು ಈ ಪಂದ್ಯದಲ್ಲಿ ಕನಿಷ್ಠ 18 ರನ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಬೇಕಿತ್ತು. ಮೊದಲು ಬ್ಯಾಟ್ ಆರ್​ಸಿಬಿ 218 ರನ್ ಗಳಿಸಿತ್ತು. 219 ರನ್​ಗಳ ಗುರಿ ಬೆನ್ನತ್ತಿದ್ದ ಸಿಎಸ್​ಕೆ ಬ್ಯಾಟ್ಸ್​ಮನ್​ಗಳು ಬಿರುಸಿನ ಆಟವಾಡಿ ಆರ್​ಸಿಬಿ ಬೌಲರ್​ಗಳಿಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ನತ್ತ ಮುಖ ಮಾಡಿದರು. ಅಂತಿಮ ಹಂತದಲ್ಲಿ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಅತ್ಯುತ್ತಮ ಜೊತೆಯಾಟವನ್ನು ನಿರ್ಮಿಸಿ ತಂಡವನ್ನು ಪ್ಲೇ ಆಫ್​ಗೇರಿಸಲು ಹತ್ತಿರಕ್ಕೆ ತಂದರು. ಕೊನೆಯ ಓವರ್‌ನಲ್ಲಿ ಚೆನ್ನೈ 17 ರನ್ ಗಳಿಸಿದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಹೊಂದಿತ್ತು.

  ಇದನ್ನೂ ಓದಿ: ಆರ್​ಸಿಬಿ ಮುಂದಿನ ಎದುರಾಳಿ ಯಾರು ಗೊತ್ತಾ?; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್

  ಯಶ್​ ದಯಾಳ್ ಎಸೆದ ಅಂತಿಮ ಓವರ್​ನ ಮೊದಲ ಎಸೆತವನ್ನು ಧೋನಿ ಲಾಂಗ್ ಲೆಗ್ ಬೌಂಡರಿಯತ್ತ ಸಿಕ್ಸರ್​ ಬಾರಿಸಿದರು. ಅದು ಬೌಂಡರಿಯಿಂದ ಹೊರಗೆ ಹೋಗಿದ್ದಲ್ಲದೆ, ಸ್ಟೇಡಿಯಂ ಛಾವಣಿಯನ್ನೂ ದಾಟಿ ಕ್ರೀಡಾಂಗಣದ ಹೊರಗೆ ತಲುಪಿತು. ಇದು 110 ಮೀಟರ್ ಉದ್ದದ ಸಿಕ್ಸರ್ ಆಗಿದ್ದು, ಈ ಋತುವಿನಲ್ಲಿ ದಾಖಲಾದ ಅತಿ ದೊಡ್ಡ ಸಿಕ್ಸರ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  ಆದರೆ ಇಲ್ಲಿ ಧೋನಿಯ ಈ ಸಿಕ್ಸರ್ ಆರ್​ಸಿಬಿ ಜಯಕ್ಕೆ ನೆರವಾಯಿತು. ಇದು ಹೇಗೆ ಎಂದರೆ, ಧೋನಿ ಹೊಡೆತದಿಂದ ಚೆಂಡು ಸ್ಟೇಡಿಯಂನಿಂದ ಹೊರಬಿತ್ತು. ಹೀಗಾಗಿ, ಅಂಪೈರ್‌ಗಳು ಎರಡನೇ ಎಸೆತಕ್ಕೆ ನೂತನ ಚೆಂಡಿನ ಮೊರೆಹೋದರು. ಇದು ದಯಾಳ್‌ಗೆ ಅನುಕೂಲಕರವಾಯಿತು. ಯಾಕೆಂದರೆ ಹಿಂದಿನ ಚೆಂಡು ಅದಾಗಲೇ ಸಾಕಷ್ಟು ಒದ್ದೆಯಾಗಿತ್ತು, ಬೌಲಿಂಗ್‌ ಮಾಡಲು ತುಂಬಾ ಕಷ್ಟಕರವಾಗುತ್ತಿತ್ತು. ಇದನ್ನು ಬದಲಾಯಿಸುವಂತೆ ಆರ್​ಸಿಬಿ ನಾಯಕ ಹಲವು ಬಾರಿ ಅಂಪೈರ್ ಬಳಿ ಮನವಿ ಮಾಡಿದ್ದರೂ ತಿರಸ್ಕರಿಸುತ್ತಿದ್ದರು. ಈಗ ಬದಲಾದ ಚೆಂಡು ಸಂಪೂರ್ಣ ಒಣಗಿದ್ದು, ಸ್ಲೋ ಬಾಲ್ ಮತ್ತು ಯಾರ್ಕರ್ ಅನ್ನು ನಿಖರವಾಗಿ ಬಳಸಿ ದಯಾಳ್ ತಂಡಕ್ಕೆ ಗೆಲುವನ್ನು ದಕ್ಕಿಸಿಕೊಟ್ಟರು.

  ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ದಿನೇಶ್​ ಕಾರ್ತಿಕ ಕೂಡ ಇದರ ಬಗ್ಗೆ ಮಾತನಾಡಿದ್ದು, ಧೋನಿ ಸಿಡಿಸಿದ ಆ ಒಂದು ಸಿಕ್ಸರ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸಿಕ್ಸರ್ ನಂತರ, ದಯಾಳ್ ಮುಂದಿನ ಚೆಂಡನ್ನು ನಿಧಾನವಾಗಿ ಎಸೆತದರು, ಧೋನಿ ಹೊಡೆತವು ನೇರವಾಗಿ ಫೀಲ್ಡರ್ ಕೈಗೆ ಹೋಯಿತು. ಉಳಿದ 4 ಎಸೆತಗಳಲ್ಲಿ ದಯಾಳ್ ಅದೇ ಬೌಲಿಂಗ್ ಮಾಡಿದರು ಮತ್ತು ಕೇವಲ 1 ರನ್ ನೀಡುವ ಮೂಲಕ ಆರ್​ಸಿಬಿ ಪಂದ್ಯವನ್ನು ಗೆದ್ದುಕೊಂಡಿದ್ದು ಮಾತ್ರವಲ್ಲದೆ, ಪ್ಲೇ ಆಫ್‌ಗೆ ತಲುಪಿತು ಎಂದು ಹೇಳಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts