More

    10 ಶಾಸಕರ ಸಸ್ಪೆಂಡ್​: ಕಲಾಪ ಬಹಿಷ್ಕರಿಸಿ ಸ್ಪೀಕರ್​ ವಿರುದ್ಧ ಬಿಜೆಪಿ, ಜೆಡಿಎಸ್​ನಿಂದ ರಾಜ್ಯಪಾಲರಿಗೆ ದೂರು

    ಬೆಂಗಳೂರು: ಸದನದಲ್ಲಿ ಅಶಿಸ್ತು ತೋರಿದ್ದಾರೆ ಎಂದು ನಿನ್ನೆ (ಜು. 19) ಬಿಜೆಪಿಯ 10 ಶಾಸಕರನ್ನು ಸ್ಪೀಕರ್​​ ಸಸ್ಪೆಂಡ್​ ಮಾಡಿರುವುದನ್ನು ವಿರೋಧಿಸಿ ಇಂದು ಬಿಜೆಪಿ ನಡೆಸುತ್ತಿರುವ ಧರಣಿಗೆ ಜೆಡಿಎಸ್​ ಕೂಡ ಸಾಥ್​ ನೀಡಿದೆ. ಅಲ್ಲದೆ, ಎರಡೂ ವಿಪಕ್ಷಗಳು ಸದನದಲ್ಲಿ ಪಾಲ್ಗೊಳ್ಳುವುದನ್ನು ಬಹಿಷ್ಕರಿಸಿವೆ. ಇದರ ಜೊತೆಗೆ ರಾಜ್ಯಪಾಲರಿಗೂ ವಿಪಕ್ಷಗಳು ದೂರು ನೀಡಿವೆ.

    ನಿನ್ನೆ ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ, ಯಶ್ ಪಾಲ್ ಸುವರ್ಣ, ಆರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್, ಧಿರಜ್ ಮುನಿರಾಜು, ಭರತ್ ಶೆಟ್ಟಿ, ಆರ್. ಅಶೋಕ್, ಅರವಿಂದ್ ಬೆಲ್ಲದ, ಉಮಾನಾಥ್ ಕೊಟ್ಯಾನ್ ಹಾಗೂ ಸುನಿಲ್ ಕುಮಾರ್ ಎಂಬುವರನ್ನು ಅಧಿವೇಶನ ಮುಗಿಯುವವರೆಗೂ ಸ್ಪೀಕರ್​ ಯು.ಟಿ. ಖಾದರ್​ ಅಮಾನತು ಮಾಡಿದ್ದಾರೆ.

    ಇದನ್ನೂ ಓದಿ: ನಗು ಮುಖದ ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ: ಅಲಂಕಾರವಿಲ್ಲದಿದ್ದರೆ ಹಸನ್ಮುಖಿ, ಶೃಂಗಾರ ಮಾಡಿದರೆ ರೌದ್ರರೂಪ

    ಸ್ಪೀಕರ್​ ಅವರ ಈ ನಿಲುವಿನ ವಿರುದ್ಧ ಇಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯಪಾಲರಿಗೆ ಈ ಸಂಬಂಧ ದೂರು ಸಹ ನೀಡಿದೆ. ಇದಕ್ಕೆ ಜೆಡಿಎಸ್​ ಸಹ ಸಾಥ್​ ನೀಡುವ ಮೂಲಕ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟ್ಟಿನ ಹೋರಾಟ ನಡೆಸುತ್ತಿದೆ. ಸದನದ ಒಳಗಡೆ ಹಾಗು ಹೊರಗೆ ಉಭಯ ಪಕ್ಷ ಒಗ್ಗಟ್ಟಾಗಿದ್ದು, ಕಾಂಗ್ರೆಸ್ ವಿರುದ್ಧ ಜಂಟಿಯಾಗಿ ಹೋರಾಟಕ್ಕಿಳಿದಿದೆ. ಮೈತ್ರಿಯ ಸುದ್ದಿ ಬೆನ್ನಲ್ಲೇ ಇಬ್ಬರ ಹೊಂದಾಣಿಕೆ ಹೋರಾಟ ರಾಜಕೀಯ ಮಹತ್ವ ಪಡೆದುಕೊಂಡಿದೆ.

    ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸುನೀಲ್ ಕುಮಾರ್, ರಮೇಶ್ ಜಾರಕಿಹೊಳಿ ಹಾಗೂ ಪ್ರಭು ಚೌಹಾಣ್ ಸೇರಿದಂತೆ ಬಿಜೆಪಿ ಪರಿಷತ್ ಸದಸ್ಯರು ಸಹ ರಾಜಭವನಕ್ಕೆ ತೆರಳಿ ಸ್ಪೀಕರ್​ ವಿರುದ್ಧ ದೂರು ನೀಡಿದ್ದಾರೆ.

    ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಎಚ್​.ಡಿ. ರೇವಣ್ಣ ಸೇರಿದಂತೆ ಜೆಡಿಎಸ್​ ಶಾಸಕರು ಸಹ ಬಿಜೆಪಿ ಜತೆಗೂಡಿ ಕಲಾಪ ಸುಗಮವಾಗಿ, ನಿಷ್ಪಕ್ಷಪಾತವಾಗಿ ನಡೆಸಲು ಸ್ಪೀಕರ್ ವಿಫಲವಾಗಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

    ನಿನ್ನೆ ನಡೆದ ಘಟನೆ ಮತ್ತು ಮೊನ್ನೆ ನಡೆದ ಕೇಂದ್ರ ಆಡಳಿತಾರೂಢ ಎನ್​ಡಿಎ ವಿರುದ್ಧ ವಿಪಕ್ಷಗಳ ಸಭೆಯಲ್ಲಿ IAS ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್​ ದೂರು ನೀಡಿವೆ.

    ನಿನ್ನೆ ನಡೆದಿದ್ದೇನು?

    ನಿನ್ನೆ ಊಟಕ್ಕೂ ಬಿಡದೆ ಕಲಾಪ ಮುಂದುವರಿಸಿ ಬಜೆಟ್ ಮೇಲೆ ಚರ್ಚೆಗೆ ಅವಕಾಶ ನೀಡಿದ್ದಕ್ಕೆ ಬಿಜೆಪಿ ಸದಸ್ಯರು ಸ್ಪೀಕರ್​ ವಿರುದ್ಧ ಪ್ರತಿಭಟನೆ ನಡೆಸಿದರು. ವಿಪಕ್ಷದ ನಾಯಕರು ಸ್ಪೀಕರ್ ಪೀಠದ ಬಳಿ ಜಮಾಯಿಸಿ ಹರಿದ ವಿಧೇಯಕಗಳ ಪ್ರತಿಗಳನ್ನು ಸ್ಪೀಕರ್ ಪೀಠದಲ್ಲಿ ಕುಳಿತಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮೇಲೆ ಎಸೆದರು. ಈ ವೇಳೆ ಮಾರ್ಷಲ್​ಗಳು ಸ್ಪೀಕರ್ ರಕ್ಷಣೆಗೆ ಬಂದು ನಿಂತರು. ಬಳಿಕ ಬಿಜೆಪಿ ಸದಸ್ಯರ ಕಿರಿಕಿರಿ ತಡೆಯದೇ ಸದನವನ್ನು ಮುಂದೂಡಲಾಯಿತು.

    ಇದನ್ನೂ ಓದಿ: ಮಕ್ಕಳ ವೆಂಟಿಲೇಟರ್ ಆಂಬುಲೆನ್ಸ್ ಇಲ್ಲದೇ ಮಗು ಸಾವು- ಶವದೊಂದಿಗೆ ಪಾಲಕರ ಪ್ರತಿಭಟನೆ

    ಸದನಕ್ಕೆ ಅಗೌರವ ತಂದವರ ಹೆಸರನ್ನು ಸ್ಪೀಕರ್​ ಖಾದರ್​ ಅವರು ಪ್ರಸ್ತಾಪಿಸಿದರು. 10 ಶಾಸಕರನ್ನು ಅಮಾನತು ಮಾಡಿದರು. ಸದನದ ನಡುವಳಿಕೆ ನಿಯಮದ ಪ್ರಕಾರ ಕಾನೂನು ಎಚ್.ಕೆ ಪಾಟೀಲರು ಅಮಾನತು ಮಾಡಿದರು. 348 ನಿಯಮ ಹಕ್ಕನ್ನು ಖಾದರ್​ ಚಲಾಯಿಸಿದರು. ಎಚ್. ಕೆ. ಪಾಟೀಲ್ ಅವರು ಮಂಡಿಸಿದ ಪ್ರಸ್ತಾಪ ಧ್ವನಿ ಮತದ ಮೂಲಕ ಅಂಗೀಕಾರವಾಯಿತು.

    Shivarajkumar’s Advice On Sudeep-Kumar Feud | ನಟರಿಗಷ್ಟೇ ಅಲ್ಲ, ನಿರ್ಮಾಪಕರಿಗೂ ಗೌರವ ಕೊಡಬೇಕು | BENGALURU

    ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು 15 ಕಿ.ಮೀ ಕಾಲ್ನಡಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು!

    ವಿಧಾನಸೌಧದ ಮೊದಲ ಮಹಡಿಯಲ್ಲಿ ಹಾವು ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts