More

    ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ ಯುವತಿಗೆ ಸೂರಿಲ್ಲ! ಹಸಿವಿನಿಂದ ಕಂಗೆಟ್ಟ ಮಹಿಳೆ ಫೋಟೊ ವೈರಲ್!

    ಹೈದರಾಬಾದ್: ಜೀವನದಲ್ಲಿ ವಿಧಿ ಕೆಲವೊಮ್ಮೆ ಯೂ-ಟರ್ನ್ ಹೊಡೆದಾಗ ಎಂತಹವರೂ ಒಮ್ಮೆಗಂತೂ ಕಂಗಾಲಾಗುವುದು ಸಹಜ. ಅಂತಹದೇ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಹೈದರಾಬಾದ್​ನಿಂದ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಯುವತಿ ಹಸಿವಿನಿಂದ ಕಂಗೆಟ್ಟು ರಸ್ತೆ ಬದಿಯಲ್ಲಿ ಭಿಕ್ಷೆ ಎತ್ತುವ ಕಥೆ ಬೆಳಕಿಗೆ ಬಂದಿದೆ.

    ಈ ಯುವತಿ, ಡೆಟ್ರಾಯಿಟ್​ನ ಟ್ರೈನ್ ವಿಶ್ವವಿದ್ಯಾಲಯದಿಂದ ತನ್ನ ಎಂಎಸ್ ಅನ್ನು ಮುಂದುವರಿಸಲು ಹೋದ ಹೈದರಾಬಾದ್ ನ ಮಹಿಳೆ ಚಿಕಾಗೋದಲ್ಲಿ ಹಸಿವಿನಿಂದ ಬಳಲುತ್ತಾ ರಸ್ತೆ ಬದಿಯಲ್ಲಿ ಕುಳಿತಿರುವುದು ಕಂಡು ಬಂದಿದೆ.

    ಇದನ್ನೂ ಓದಿ: ಹೈದರಾಬಾದ್‌ನಿಂದ ಬಂದ ಮತಯಂತ್ರ

    ಮಜ್ಲಿಸ್ ಬಚಾವೊ ತೆಹ್ರೀಕ್ ( MBT ) ಟ್ವಿಟರ್ ನಲ್ಲಿ ಅಮ್ಜದುಲ್ಲಾ ಖಾನ್ ಅವರ ವಕ್ತಾರರು ಹಂಚಿಕೊಂಡ ವೀಡಿಯೊ ಮಹಿಳೆಯನ್ನು ಸಂಪೂರ್ಣವಾಗಿ ದುರಂತ ಸ್ಥಿತಿಯಲ್ಲಿ ತೋರಿಸುತ್ತಿದೆ. ಆಕೆ ಅಮೆರಿಕದ ಪ್ರಸಿದ್ಧ ನಗರವಾದ ಚಿಕಾಗೋದ ಬೀದಿಯ ಒಂದು ಮೂಲೆಯಲ್ಲಿ ಕುಳಿತಿರುವುದು ಕಂಡುಬಂದಿದೆ.

    ಈ ವಿಡಿಯೋದಲ್ಲಿ ಆ ಮಹಿಳೆ, ತನ್ನ ಹೆಸರನ್ನು ಸೈದಾ ಲುಲು ಮಿನ್ಹಾಜ್ ಜೈಡಿ ಎಂದು ಹೇಳಿದ್ದು, ತಾನು ಹೈದರಾಬಾದ್​ಗೆ ಸೇರಿದವಳು ಎಂದು ಹೇಳಿಕೊಂಡಿದ್ದಾರೆ.

    ಮಹಿಳೆಯ ಸ್ಥಿತಿಯ ಬಗ್ಗೆ ತಿಳಿದಾಗ, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆಯ ದೇಹದಿಂದ ಪರೀಕ್ಷೆಗೆಂದು ರಕ್ತದ ಮಾದರಿಗಳನ್ನು ಹೊರತೆಗೆದಾಗ ಆ ಮಹಿಳೆ ಇನ್ನಷ್ಟು ದುರ್ಬಲರಾದರು.

    ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಚಿನ್ನದ ಬಣ್ಣದ ರೇಂಜ್ ರೋವರ್ ಕಾರ್​​ ಹೊಂದಿರುವ ಏಕೈಕ ನಟ ಮಹೇಶ್ ಬಾಬು

    ವೀಡಿಯೊದಲ್ಲಿರುವ ವ್ಯಕ್ತಿಯು ಮಹಿಳೆಗೆ ದಾಲ್-ರೋಟಿಯನ್ನು ರಾತ್ರಿಯ ಊಟಕ್ಕೆ ನೀಡುತ್ತಾನೆ. ಜತೆಗೆ ಆಕೆಗೆ ಸಹಾಯ ಮಾಡುವ ಭರವಸೆಯನ್ನೂ ನೀಡುತ್ತಾನೆ. ಅವನು ಆಕೆಯಲ್ಲಿ ಭಾರತಕ್ಕೆ ಹಿಂತಿರುಗಲು ಕೇಳಿಕೊಳ್ಳುತ್ತಾನೆ.

    ಈ ನಡುವೆ, ಟ್ವಿಟರ್​ನಲ್ಲಿ ಮಹಿಳೆಯ ಫೋಟೊ ಹಾಗೂ ದಾಖಲೆಗಳು ವೈರಲ್ ಆಗಿದ್ದು, ಸುದ್ದಿ ಶರವೇಗದೊಂದಿಗೆ ಹೈದರಾಬಾದ್ ತಲುಪಿದೆ. ಮಹಿಳೆಯ ತಾಯಿ ತನ್ನ ಮಗಳನ್ನು ಭಾರತಕ್ಕೆ ಮರಳಿ ಕರೆತರಲು ಸಹಾಯ ಕೋರಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಪವನ್ ಕಲ್ಯಾಣ್, ಪ್ರಭಾಸ್​ಗೆ ಸಂಭಾವನೆ ಕೊಡುವಷ್ಟು ಹಣ ನನ್ನ ಬಳಿ ಇಲ್ಲ; ಸಿನಿಮಾ ನಿರ್ಮಾಣ ಮಾಡ್ತಾರಾ ಧೋನಿ ಪತ್ನಿ?

    ಈ ವೀಡಿಯೊದಿಂದ ದಿಗ್ಭ್ರಮೆಗೊಂಡ ನೆಟ್ಟಿಗರು, ಆಕೆಯನ್ನು ಮತ್ತೆ ಹೈದರಾಬಾದ್ ಗೆ ತರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್ ಬಳಕೆದಾರರಲ್ಲಿ ಒಬ್ಬರು, “ಅವರ ಸ್ಥಿತಿಯನ್ನು ನೋಡಿ ನನಗೆ ಆಘಾತವಾಗಿದೆ. ನನಗೆ ಅವರು ಬಾಲ್ಯದಿಂದಲೂ ಪರಿಚಿತರು. ಅವರು ಸ್ಟೂಡಿಯಸ್ ವಿದ್ಯಾರ್ಥಿಯಾಗಿದ್ದರು” ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts