More

    ಹೈದರಾಬಾದ್‌ನಿಂದ ಬಂದ ಮತಯಂತ್ರ

    ಮೈಸೂರು: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಮತಯಂತ್ರಗಳನ್ನು ಜಿಲ್ಲೆಗೆ ಭಾನುವಾರ ತರಲಾಗಿದೆ.


    ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ರಾಜ್ಯ ಚುನಾವಣಾ ಆಯೋಗವು ಮೈಸೂರು ಜಿಲ್ಲೆಗೆ ಹೈದರಾಬಾದ್‌ನಲ್ಲಿರುವ ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಿಂದ ಮತಯಂತ್ರಗಳನ್ನು ತರಲು ನಿರ್ದೇಶನ ನೀಡಿತ್ತು.


    ಈ ಹಿನ್ನೆಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತಯಂತ್ರಗಳ ನೋಡಲ್ ಅಧಿಕಾರಿಯಾಗಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಇ.ದಿನೇಶ್‌ಕುಮಾರ್ ಅವರನ್ನು ನಿಯೋಜಿಸಲಾಗಿತ್ತು. ಇವರು ಚುನಾವಣಾ ಸಿಬ್ಬಂದಿ, ತಾಲೂಕು ಆಡಳಿತ, , ಮುಡಾ ಸಿಬ್ಬಂದಿಯೊಂದಿಗೆ ಹೈದರಾಬಾದ್‌ಗೆ ತೆರಳಿದ್ದರು. ತಲಾ 1500 ಮಂತ್ರಯಂತ್ರ, ವಿವಿ ಪ್ಯಾಟ್‌ಗಳನ್ನು ಮೂರು ಕಂಟೇನರ್‌ಗಳಲ್ಲಿ ತುಂಬಿಸಿಕೊಂಡು ಅಲ್ಲಿಯಿಂದ ಬರಲಾಗಿದೆ.


    ಜಿಪಿಎಸ್ ವ್ಯವಸ್ಥೆ ಅಳವಡಿಕೆಯೊಂದಿಗೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಭಾನುವಾರ ಮಧ್ಯಾಹ್ನ ಮತಯಂತ್ರ ತುಂಬಿದ್ದ ವಾಹನ ನಗರಕ್ಕೆ ಆಗಮಿಸಿದೆ. ಕಂಟೇನರ್‌ಗಳಿದ್ದ ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್‌ಗಳನ್ನು ಸಿದ್ದಾರ್ಥನಗರದಲ್ಲಿರುವ ಜಿಲ್ಲಾ ಆಡಳಿತ ಭವನದ ಸಮೀಪವಿರುವ ಗೋದಾಮಿನಲ್ಲಿ ಇರಿಸಲಾಗಿದೆ. ಪ್ರತಿಯೊಂದು ಮತಯಂತ್ರವನ್ನು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಬಳಿಕ ಗೋದಾಮಿನ ಬಾಗಿಲು ಭದ್ರಪಡಿಸಲಾಗಿದೆ.


    ಈ ಗೋದಾಮಿನ ಭದ್ರತೆಗಾಗಿ ಮೂರು ಪಾಳಿಯಲ್ಲಿ ಪೊಲೀಸರು ಕಾರ್ಯನಿರ್ವಹಿಸಲಿದ್ದು, ಮುಂದಿನ ವಾರ ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನ ಇಂಜಿನಿಯರ್‌ಗಳು ಆಗಮಿಸಿ ಇವುಗಳನ್ನು ಪರಿಶೀಲನೆ ಮಾಡಲಿದ್ದಾರೆ. ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯಲ್ಲಿ 5,594 ಬ್ಯಾಲೆಟ್ ಯೂನಿಟ್, 3,901 ಕಂಟ್ರೋಲ್ ಯೂನಿಟ್, 4,138 ವಿವಿ ಪ್ಯಾಟ್‌ಗಳನ್ನು ಬಳಸಲು ಉದ್ದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts