More

    ಯೂಟ್ಯೂಬ್​​​ ಚಾನೆಲ್​​ ಸಬ್​ಸ್ಕ್ರೈಬ್​ ಮಾಡಿ ಜ್ಯೋತಿ ರೈ ವಿಡಿಯೋ ಅಪ್​ಲೋಡ್​ ಮಾಡ್ತೀನಿ ಎಂದ ಕಿಡಿಗೇಡಿ!

    ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಖ್ಯಾತ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಫೇಸ್​ಬುಕ್​, ಟ್ವಿಟರ್​ ಹಾಗೂ ಟೆಲಿಗ್ರಾಂ ಸೇರಿದಂತೆ ಜಾಲತಾಣ ವೇದಿಕೆಯಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಶೇರ್​ ಮಾಡಲಾಗುತ್ತಿದೆ. ಇದರ ನಡುವೆ ಎಕ್ಸ್​ ಬಳಕೆದಾರನೊಬ್ಬ ತನ್ನ ಯೂಟ್ಯೂಬ್​ ಚಾನೆಲ್​ ಅನ್ನು ಸಬ್​ಸ್ಕ್ರೈಬ್ ಮಾಡಿದರೆ ಜ್ಯೋತಿ ರೈ ವಿಡಿಯೋ ಕಳುಹಿಸುತ್ತೇನೆ ಎಂದಿರುವುದು ಸಾಮಾಜಿಕ ಜಾಲತಾಣ ದುರ್ಬಳಕೆಗೆ ಹಿಡಿದ ಕನ್ನಡಿಯಾಗಿದೆ.

    ಗಾಡ್ (ದೇವರು)​ ಎನ್ನುವ ಹೆಸರಿನಲ್ಲಿ ಎಕ್ಸ್​ ಖಾತೆ ಕ್ರಿಯೆಟ್​ ಮಾಡಿಕೊಂಡಿರುವ ಕಿಡಿಗೇಡಿ ರಾಕ್ಷಕನ ಕೃತ್ಯಕ್ಕೆ ಇಳಿದಿದ್ದಾನೆ. twitter.com/EDIT_BY_ABHI ಎನ್ನುವ ಖಾತೆಯಲ್ಲಿ  ಇದೀಗ ಜ್ಯೋತಿ ರೈ ವಿಡಿಯೋ ಲೀಕ್​ ಆಗಿದೆ ಎಂದು ಬರೆದುಕೊಂಡಿದ್ದಾನೆ. ನನ್ನ ಬಳಿ ನೇರವಾಗಿ ಮೆಸೇಜ್​ ಮಾಡಿ ಕೇಳಬೇಡಿ, ವಿಡಿಯೋ ಲಿಂಕ್​ಗಾಗಿ ನನ್ನ ಯೂಟ್ಯೂಬ್​ ಚಾನೆಲ್​ಗೆ ಸಬ್​ಸ್ಕ್ರೈಬ್​ ಆಗಿ. 1000 ಸಬ್​ಸ್ಕ್ರೈಬ್​ ಆದರೆ ವಿಡಿಯೋವನ್ನು ಅಪ್​ಲೋಡ್​ ಮಾಡುತ್ತೇನೆ ಎಂದಿದ್ದಾನೆ. ಬೇಗ ಬೇಗ ಸಬ್​ಸ್ಕ್ರೈಬ್​ ಆಗಿ ಎಂದು ಹೇಳಿದ್ದಾನೆ. ಪ್ರತಿಯೊಂದು ಟ್ವೀಟ್​ನಲ್ಲೂ ಜ್ಯೋತಿ ರೈ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾನೆ.

    Abhi 2

    ಎಕ್ಸ್​ ಬಳಕೆದಾರ ಯೂಟ್ಯೂಬ್​ ಚಾನೆಲ್​ ಲಿಂಕ್​ ಸಹ ಲಗತ್ತಿಸಿದ್ದು, ಅದರ ಮೇಲೆ ಕ್ಲಿಕ್​ ಮಾಡಿದರೆ, ಅಭಿ ಹೆಸರಿನ ಯೂಟ್ಯೂಬ್​ ಚಾನೆಲ್​ ತೆರೆದುಕೊಳ್ಳುತ್ತದೆ. ಈ ಚಾನೆಲ್​ ಈ ಕ್ಷಣದವರೆಗೂ 500 ಸಬ್​ಸ್ಕ್ರೈಬ್​ ಕೂಡ ದಾಟಿಲ್ಲ. ಒಟ್ಟು 7 ವಿಡಿಯೋಗಳನ್ನು ಅಪ್​ಲೋಡ್​ ಮಾಡಿದ್ದಾನೆ. ತನ್ನ ಸಬ್​ಸ್ಕ್ರೈಬ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ಇನ್ನೊಬ್ಬರ ಮಾನಹಾನಿ ಮಾಡುವ ಇಂಥವರನ್ನು ಹುಡುಕಿ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.

    Abhi 1

    ಇನ್ನೂ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪ್ರಕರಣದ ನಡುವೆಯೇ ಈ ವಿಡಿಯೋಗಳು ಹರಿದಾಡುತ್ತಿದ್ದು, ಕೆಲವರು ಈ ಪ್ರಕರಣಕ್ಕೆ ತಳುಕು ಹಾಕಿದ್ದಾರೆ. ಜ್ಯೋತಿ ರೈ ಅವರು ಪಕ್ಕದ ತೆಲುಗು ರಾಜ್ಯದಲ್ಲಿಯೂ ಕಿರುತೆರೆ ಲೋಕದಲ್ಲಿ ಪ್ರಸಿದ್ಧವಾಗಿದ್ದು, ಅಲ್ಲಿಯೂ ಫೋಟೋಗಳು ಹಾಗೂ ವಿಡಿಯೋಗಳು ಸದ್ದು ಮಾಡುತ್ತಿವೆ. ಆಕ್ಷೇಪಾರ್ಹ ಭಂಗಿಯಲ್ಲಿ ಇರುವ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದರ ನಡುವೆ ಇವು ಡೀಪ್‌ಫೇಕ್‌ ಫೋಟೋಗಳು ಹಾಗೂ ವಿಡಿಯೋಗಳು ಕೂಡ ಆಗಿರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ ಬರುತ್ತಿವೆ.

    ಜ್ಯೋತಿ ರೈ ಹೇಳಿದ್ದೇನು?
    ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಬಗ್ಗೆ ನಟಿ ಜ್ಯೋತಿ ರೈ ಮಾಧ್ಯಮಗಳ ಮುಂದೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಕೆಲ ದಿನಗಳ ಹಿಂದೆಯೇ ಈ ವಿಚಾರವಾಗಿ ಸೈಬರ್​ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಕೆಲವೊಂದು ಸಂದೇಶಗಳನ್ನು ಸ್ವೀಕರಿಸುವ ಮೂಲಕ ನಾನು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದೇನೆ. ನನ್ನ ಖ್ಯಾತಿ ಮತ್ತು ನನ್ನ ಕುಟುಂಬದ ಪ್ರತಿಷ್ಠೆ ಅಪಾಯದಲ್ಲಿರುವುದರಿಂದ ಈ ಸಾಮಾಜಿಕ ಬಳಕೆದಾರರು/ವ್ಯಕ್ತಿಗಳ ವಿರುದ್ಧ ಸರಿಯಾದ ಮತ್ತು ತ್ವರಿತ ಕ್ರಮವನ್ನು ತೆಗೆದುಕೊಳ್ಳುವಂತೆ ವಿನಂತಿಸುತ್ತೇನೆ. ಅಲ್ಲದೆ, ಈ ಬಳಕೆದಾರರು/ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ನಾನು ತುಂಬಾ ಹಾನಿ ಅನುಭವಿಸಬೇಕಾಗುತ್ತದೆ. ನಿಮ್ಮ ಪರಿಶೀಲನೆ ಮತ್ತು ತನಿಖೆಗಾಗಿ ನಾನು ಬಳಕೆದಾರರ ಎಲ್ಲ ಐಡಿಗಳ ಟಿಪ್ಪಣಿಯನ್ನು ಲಗತ್ತಿಸಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ನಂಬರ್‌ಗೆ ಕೆಲ ಮೆಸೇಜ್‌ಗಳು ಕೂಡ ಬಂದಿದ್ದವು ಅದನ್ನು ನೋಡಿ ನನಗೆ ಆಘಾತವಾಗಿದೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಿ ಎಂದು ಜ್ಯೋತಿ ರೈ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

    Actress Jyothi Rai 1

    ಅಂದಹಾಗೆ ಜ್ಯೋತಿ ರೈ ಅವರು ಈ ಹಿಂದೆಯೇ ಮದುವೆಯಾಗಿದ್ದರು. ಆದರೆ ಈಗ ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಎಂಗೇಜ್‌ಮೆಂಟ್ ಮಾಡಿಕೊಂಡಿರುವ ವಿಚಾರವನ್ನ ಈ ಹಿಂದೆ ಹಂಚಿಕೊಂಡಿದ್ದರು. ಇದೀಗ ಮದುವೆ ಸಹ ಮಾಡಿಕೊಂಡಿದ್ದಾರೆ. ಜ್ಯೋತಿ ಅವರು 20 ವರ್ಷ ವಯಸ್ಸಿನವರಾಗಿದ್ದಾಗ ಪದ್ಮನಾಭ್​​ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಅವರಿಬ್ಬರಿಗೂ ಒಬ್ಬ ಮಗನೂ ಇದ್ದಾನೆ. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದ ದಂಪತಿಗಳು ಬೇರ್ಪಟ್ಟಿದ್ದು, ಸುಕು ಪೂರ್ವಜ್ ಅವರನ್ನು ಭೇಟಿಯಾದ ನಂತರ, ಜ್ಯೋತಿ ರೈ ಮತ್ತೆ ಪ್ರೀತಿಯಲ್ಲಿ ಬಿದ್ದರು.

    ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್! ಕಿರುತೆರೆ ನಟಿ ಕೊಟ್ಟ ಸ್ಪಷ್ಟನೆ ಹೀಗಿದೆ…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts