More

    ಈ ಮರದ ನಿರ್ವಹಣೆಗಾಗಿ ಸರ್ಕಾರ ವ್ಯಯಿಸುತ್ತಿದೆ 12 ಲಕ್ಷ ರೂ: ಎಲ್ಲಿದೆ? ಏನಿದರ ವಿಶೇಷತೆ?

    ಸಲ್ಮತ್‌ಪುರ: ಸ್ಥಳೀಯರಿಂದ ಭಾರತದ ಮೊದಲ ವಿವಿಐಪಿ (VVIP) ಮರವೆಂದು ಕರೆಯಿಸಿಕೊಳ್ಳುವ ಮರವನ್ನು ರಕ್ಷಿಸಲು ಸರ್ಕಾರವು ವರ್ಷಕ್ಕೆ 12 ಲಕ್ಷ ರೂಪಾಯಿಯನ್ನು ವ್ಯಯಿಸುತ್ತಿದೆ ಎಂದರೇ ನಂಬುತ್ತೀರಾ? ಆದರೆ ನಂಬಲೇ ಬೇಕಾದ ವಿಚಿತ್ರ ಘಟನೆ ಮಧ್ಯಪ್ರದೇಶದಿಂದ ಬೆಳಕಿಗೆ ಬಂದಿದೆ.

    ಭೋಪಾಲ್ ಮತ್ತು ವಿದಿಶಾ ಪಟ್ಟಣದ ನಡುವೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಸಾಂಚಿ ಬೌದ್ಧ ಸಂಕೀರ್ಣದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಸಲ್ಮತ್‌ಪುರದ ಬೆಟ್ಟದ ಮೇಲೆ ಒಂದು ಮರವಿದ್ದು, ಇದನ್ನು ಪೀಪಾಲ್​ ಮರ(peepal tree) ಎಂದು ಕರೆಯಲಾಗುತ್ತದೆ.

    ಇದನ್ನೂ ಓದಿ: 15 ದಿನದ ಹಸುಳೆಯನ್ನು ಛಾವಣಿಯಿಂದ ಬಿಸಾಕಿದ ಬೆಕ್ಕು: ಪಾಲಕರ ಕಣ್ಮುಂದೆಯೇ ನಡೆದ ಹೃದಯ ವಿದ್ರಾವಕ ಘಟನೆ

    ಮರದ ಸುತ್ತಲೂ 15 ಅಡಿ ಎತ್ತರದ ಕಬ್ಬಿಣದ ಗ್ರಿಲ್ ಅನ್ನು ಅದರ ಸುರಕ್ಷತೆಗಾಗಿ ಅಳವಡಿಸಲಾಗಿದೆ. ಮರವನ್ನು 24X7 ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಸ್ಥಳದಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಹೇಳಿದರು. ವಿವಿಐಪಿ ಮರವನ್ನು ರಕ್ಷಿಸಲು ಒಬ್ಬ ಸಿಬ್ಬಂದಿ ಯಾವಾಗಲೂ ಕರ್ತವ್ಯದಲ್ಲಿರುತ್ತಾರೆ.

    ಒಬ್ಬ ಸಿಬ್ಬಂದಿಗೆ ತಿಂಗಳಿಗೆ 26 ಸಾವಿರ ರೂ. ವೇತನ ನೀಡುತ್ತಿದ್ದು, ಒಟ್ಟು ನಾಲ್ವರು ಸಿಬ್ಬಂದಿ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಭದ್ರತೆಯ ಮೇಲಿನ ಮಾಸಿಕ ವೆಚ್ಚವು ಒಂದು ಲಕ್ಷಕ್ಕೂ ಹೆಚ್ಚು ಬರುತ್ತದೆ. ಇದಲ್ಲದೆ, ಜಿಲ್ಲಾ ನೀರಾವರಿ ಮತ್ತು ಸಂಚಿ ನಾಗರಿಕ ಇಲಾಖೆಯು ಸಮರ್ಪಕ ನೀರು ಪೂರೈಕೆಗಾಗಿ ವಿಶೇಷ ನೀರಿನ ಟ್ಯಾಂಕರ್​​ನ್ನು ನಿಯೋಜಿಸಿದೆ.

    ಇದನ್ನೂ ಓದಿ: ಸಮಾಲೋಚನೆ ವೇಳೆ ಡಾಕ್ಟರ್​​ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ: ಮುಂದೆ ನಡೆದದ್ದು..

    2012ರಲ್ಲಿ, ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಈ ಪೀಪಲ್ ಮರವನ್ನು ನೆಟ್ಟಿದ್ದಾರೆ, ಮರ ಇರುವ ಬೆಟ್ಟವನ್ನು ಸಾಂಚಿ ಬೌದ್ಧ ವಿಶ್ವವಿದ್ಯಾಲಯಕ್ಕೆ ನೀಡಲಾಗಿದ್ದು, ಬೌದ್ಧ ಧರ್ಮದ ಅನುಯಾಯಿಗಳಿಗೆ ಈ ಸ್ಥಳವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿರುವ ಕಾರಣ ಈ ಮರವನ್ನು ಇಲ್ಲಿ ನೆಡಲಾಗಿದೆ.

    ಮರದ ಇತಿಹಾಸ:
    ಬೌದ್ಧ ಧಾರ್ಮಿಕ ಶಿಕ್ಷಕ ಚಂದ್ರರತನ್ ಪ್ರಕಾರ, ಬುದ್ಧನು ಬೋಧಗಯಾದಲ್ಲಿ ಜ್ಞಾನೋದಯವನ್ನು ಪಡೆದ ಬೋಧಿ ವೃಕ್ಷವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ಪವಿತ್ರ ಮರದ ಸಸಿಯನ್ನು ಚಕ್ರವರ್ತಿ ಅಶೋಕನ ಮಗಳು ಸಂಘಮಿತ್ರ ಭಾರತದಿಂದ ಶ್ರೀಲಂಕಾಕ್ಕೆ ಕೊಂಡೊಯ್ದಳು. ನಂತರ ಅದನ್ನು ಅನುರಾಧಪುರದಲ್ಲಿ ಸಸಿ ನೆಡಲಾಗಿತ್ತು. ಸಾಂಚಿ ಬೌದ್ಧ ವಿಶ್ವವಿದ್ಯಾಲಯದ ಸ್ಥಳದಲ್ಲಿಯೂ ಕೂಡ ಅದೇ ಮರದ ಒಂದು ಭಾಗವನ್ನು ನೆಡಲಾಗಿದೆ ಎಂದಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts