More

    ಹೋಟೆಲ್​ನ ಒಂದೇ ರೂಮಿನಲ್ಲಿ 6 ಯುವಕರು ಒಬ್ಬಳೇ ಯುವತಿ! ಒಳಗಿನ ದೃಶ್ಯ ಕಂಡು ದಂಗಾದ ಪೊಲೀಸರು

    ಭೋಪಾಲ್​: ಆರು ಯುವಕರ ಜತೆ ಯುವತಿಯೊಬ್ಬಳು ಒಂದೇ ಹೋಟೆಲ್​ ಕೋಣೆಯಲ್ಲಿ ಇಡೀ ರಾತ್ರಿ ಉಳಿದುಕೊಂಡಿದ್ದ ಆಘಾತಕಾರಿ ಪ್ರಕರಣ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಹೋಟೆಲ್​ ಮೇಲೆ ದಾಳಿ ನಡೆಸಿದ ಪೊಲೀಸರು ಒಳಗಿನ ದೃಶ್ಯ ಕಂಡು ಒಂದು ಕ್ಷಣ ದಂಗಾಗಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.

    ಮಧ್ಯಪ್ರದೇಶದ ಗ್ವಾಲಿಯರ್‌ ಮಾಧವ್​ ನಗರದಲ್ಲಿ ಘಟನೆ ಬೆಳಕಿಗೆ ಬಂದಿದೆ. ಝಾನ್ಸಿ ರಸ್ತೆಯಲ್ಲಿರುವ ಆಶೀರ್ವಾದ್​ ಹೋಟೆಲ್​ನ ಎರಡನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಆರೋಪಿಗಳು ಕಾಲ್ ಸೆಂಟರ್ ನಡೆಸುತ್ತಿದ್ದಾರೆ ಎಂದು ಮಾಹಿತಿದಾರರೊಬ್ಬರಿಂದ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳು ವಾಸ್ತವವಾಗಿ ಕಾಲ್ ಸೆಂಟರ್‌ ಮೂಲಕ ವಿದೇಶಿ ನಾಗರಿಕರನ್ನು ವಂಚಿಸುತ್ತಿದ್ದರು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಗ್ವಾಲಿಯರ್​ನ ಹೋಟೆಲ್​ನಲ್ಲೇ ಕುಳಿತು ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ದೇಶಗಳ ಪ್ರಜೆಗಳನ್ನು ಈ ಗ್ಯಾಂಗ್​ ವಂಚಿಸುತ್ತಿತ್ತು. ಹೋಟೆಲ್​ ಕೋಣೆಯೊಳಗೆ ಕಾಲ್ ಸೆಂಟರ್ ಸ್ಥಾಪಿಸಿ ಮೈಕ್ರೋಸಾಫ್ಟ್ ಕಂಪನಿಯ ಏಜೆಂಟರಂತೆ ನಟಿಸಿ, ಕಂಪ್ಯೂಟರ್‌ನಲ್ಲಿ ವೈರಸ್ ಇದೆ ಎಂದು ಬಿಂಬಿಸಿ ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಮಾಹಿತಿ ಪಡೆದ ಪೊಲೀಸರು ಹೋಟೆಲ್ ಆಶೀರ್ವಾದ್‌ನ ಎರಡನೇ ಮಹಡಿಗೆ ತಲುಪಿ ಕೊಠಡಿ ಸಂಖ್ಯೆ 204ರ ಬಾಗಿಲು ತೆರೆದರು. ಒಳಗೆ 6 ಹುಡುಗರು ಮತ್ತು ಒಬ್ಬಳೇ ಹುಡುಗಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಹೆಡ್‌ಫೋನ್ ಧರಿಸಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿವುದು ಕಂಡುಬಂದಿತು

    ಈ ಬಗ್ಗೆ ಗ್ವಾಲಿಯರ್ ಐಜಿ ಅರವಿಂದ್ ಸಕ್ಸೇನಾ ಮಾತನಾಡಿ, ಬಂಧಿತರು ಕಂಪ್ಯೂಟರ್ ಪರದೆಯಲ್ಲಿ ಕಂಡುಬಂದಿರುವ ಎಲ್ಲ ಮೊಬೈಲ್​ ಸಂಖ್ಯೆಗಳು ವಿದೇಶಿಗರದ್ದು ಎಂದು ಹೇಳಿದ್ದಾರೆ. ಬಂಧಿತರ ವಿಚಾರಣೆ ವೇಳೆ 7 ದಿನಗಳ ಹಿಂದೆಯಷ್ಟೇ ಗ್ವಾಲಿಯರ್‌ಗೆ ಬಂದಿರುವುದು ಬೆಳಕಿಗೆ ಬಂದಿದೆ. ಈ ಆರೋಪಿಗಳು ಆ ದಿನದಿಂದಲೇ ಕೆಲಸ ಮಾಡುತ್ತಿದ್ದರು. ರೂಮಿನಲ್ಲಿ ಕೆಲಸ ಮಾಡಲು ಸ್ಥಳಾವಕಾಶ ಮತ್ತು ಪೀಠೋಪಕರಣಗಳನ್ನು ಮೊರೆನಾದ ಸಂಜಯ್ ಭದೌರಿಯಾ ಒದಗಿಸಿದ್ದಾರೆ. ಕರ್ಣ ಎಂಬ ವ್ಯಕ್ತಿ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ವಿದ್ಯುತ್ ಉಪಕರಣಗಳನ್ನು ಒದಗಿಸಿದ್ದಾನೆ.

    ಈ ಪ್ರಕರಣದಲ್ಲಿ ಸಿಕ್ಕಿಬಿದ್ದವರು ವಿದೇಶಿ ಹೆಸರುಗಳನ್ನು ಹೇಳಿ ಜನರನ್ನು ವಂಚಿಸುತ್ತಿದ್ದರು. ತಮ್ಮ ಹೆಸರನ್ನು ಮಿಸ್ಟರ್ ಪಾಲ್ (ಅಭಯ್ ರಾಜಾವತ್), ಮಾರ್ಟಿನ್ (ನಿತೇಶ್), ಜಾನ್ (ಸುರೇಶ್), ರಿಯಾನ್ (ದೀಪಕ್), ಸೈಬರ್ ಎಕ್ಸ್‌ಪರ್ಟ್ (ರಾಜ್), ಡೆವಿಲ್ (ಸುರೇಶ್) ಹಾಗೂ ನ್ಯಾನ್ಸಿ (ಶ್ವೇತಾ) ಮುಂತಾದ ನಕಲಿ ಹೆಸರುಗಳನ್ನು ಬಳಸಿ ಮಾತನಾಡುತ್ತಿದ್ದರು.

    ಹೋಟೆಲ್‌ನಿಂದ 8 ಲ್ಯಾಪ್‌ಟಾಪ್, ಮೌಸ್, 15 ಮೊಬೈಲ್ ಫೋನ್, ಫೈಬರ್ ಮೋಡೆಮ್-ಅಡಾಪ್ಟರ್, ಕಾಲಿಂಗ್ ಸ್ಕ್ರಿಪ್ಟ್ ಹಾಗೂ ಡೇಟಾ ಸೀಟ್ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಕೇರಳಿಗರು ಕಾಮದಲ್ಲಿ… ರೀಲ್ಸ್​ನಿಂದಲೇ ಸಿನಿಮಾ ಅವಕಾಶ ಗಿಟ್ಟಿಸಿದ ಮಲಯಾಳಿ ಯುವತಿಯ ಶಾಕಿಂಗ್ ಹೇಳಿಕೆ!

    ಕೇವಲ ಮೂರೇ ತಿಂಗಳಲ್ಲಿ ನಿಜವಾಯ್ತು ಬಾಬಾ ವಂಗಾ ನುಡಿದ ಈ ವರ್ಷದ 5 ಭವಿಷ್ಯವಾಣಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts