More

    ಸಿಗಡಿ ತಿನ್ನುವಾಗ ಈ ತಪ್ಪುಗಳನ್ನು ಮಾಡ್ಬೇಡಿ: ಮಾಡಿದ್ರೆ ಸಾವು ಖಚಿತ, ಈ ದುರಂತ ಘಟನೆಯೇ ಸಾಕ್ಷಿ!

    ಮಾಂಸಾಹಾರ ಬಹುತೇಕರಿಗೆ ಪ್ರಿಯವಾದ ಆಹಾರ. ಕೆಲವರಂತೂ ಒಂದು ತುಂಡ ಮಾಂಸ ತಿನ್ನದಿದ್ದರೆ ಆ ದಿನ ಕಂಪ್ಲೀಟ್​ ಆಗುವುದಿಲ್ಲ ಅಂತಾರೆ. ಅಷ್ಟರಮಟ್ಟಿಗೆ ಮಾಂಸವನ್ನು ಅಚ್ಚಿಕೊಂಡಿರುವವರು ಇದಾರೆ. ಇನ್ನೂ ಚಿಕನ್, ಮಟನ್ ಜೊತೆಗೆ ಸೀ ಫುಡ್ ತಿನ್ನುವವರೂ ಹೆಚ್ಚು. ಮೀನು, ಸೀಗಡಿ ಮತ್ತು ಏಡಿಗಳೆಂದರೆ ಕೆಲವರು ಹೆಚ್ಚು ಒಲವು ತೋರುತ್ತಾರೆ. ಕೋಳಿಗಳಿಗೆ ವೈರಸ್ ಅಥವಾ ಹಕ್ಕಿಜ್ವರ ತಗುಲುತ್ತದೆ ಎಂದು ಕೇಳಿದ್ದೇವೆ. ಹೀಗಾಗಿಯೇ ಕೆಲವರು ದಿನಗಟ್ಟಲೆ ಚಿಕನ್ ತಿನ್ನುವುದನ್ನು ನಿಲ್ಲಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಚಿಕನ್ ತಿಂದು ಪ್ರಾಣ ಕಳೆದುಕೊಂಡವರನ್ನೂ ನೋಡಿದ್ದೇವೆ. ಅದೇ ರೀತಿ ಈಗ ಸೀಗಡಿ ತಿನ್ನುವುದು ಸಹ ಕೆಲವೊಮ್ಮೆ ಮಾರಕವಾಗಬಹುದು.

    ಇತ್ತೀಚೆಗಷ್ಟೇ ಇಪ್ಪತ್ತು ವರ್ಷದ ಯುವತಿಯೊಬ್ಬಳು ಸಿಗಡಿ ತಿಂದು ಸಾವಿಗೀಡಾಗಿದ್ದಾಳೆ. ಸಿಗಡಿ ಜೀವಕ್ಕೂ ಹಾನಿ ಮಾಡಬಹುದೇ ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಉತ್ತರ ಹೌದು. ಸಿಗಡಿಗಳನ್ನು ಬೇಯಿಸುವಾಗ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ಸಿಗಡಿ ತಿಂದರೆ ಅಲರ್ಜಿ ಇರುವುದನ್ನು ಅದನ್ನು ತಪ್ಪಿಸುವುದೇ ಒಳಿತು ಎನ್ನುತ್ತಾರೆ.

    ಕೇರಳದ ಪಲಕ್ಕಾಡ್ ಮೂಲದ ಗೋಪಾಲ ಕೃಷ್ಣನ್ ಮತ್ತು ಪತ್ನಿ ನಿಶಾ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗಳು ನಿಕಿತಾ ಏಳು ವರ್ಷಗಳಿಂದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಿಖಿತಾಗೆ ಸಿಗಡಿ ಅಲರ್ಜಿ ಇತ್ತು. ಆದರೆ ಇತ್ತೀಚೆಗೆ ರಾತ್ರಿ ಹಾಸ್ಟೆಲ್​ನಲ್ಲಿ ಸಿಗಡಿ ತಿಂದಿದ್ದಳು. ಇದಾದ ಸ್ವಲ್ಪ ಸಮಯದ ನಂತರ ಅಸ್ವಸ್ಥಳಾಗಿದ್ದಳು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ. ಇದರಿಂದ ಆಕೆಯ ಕುಟುಂಬ ಮತ್ತು ಸ್ನೇಹಿತರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

    ಅಂದಹಾಗೆ ನಿಜವಾಗಿಯೂ ಸಿಗಡಿ ತಿನ್ನುವುದು ಅಲರ್ಜಿಯನ್ನು ಉಂಟುಮಾಡುತ್ತದೆಯೇ? ಸಿಗಡಿಗಳನ್ನು ತಿನ್ನುವುದು ನಮ್ಮ ದೇಹಕ್ಕೆ ನಿಜವಾಗಿಯೂ ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ನಾವೀಗ ನೋಡೋಣ.

    ತಜ್ಞರ ಪ್ರಕಾರ ಸಿಗಡಿಗಳನ್ನು ಬೇಯಿಸುವಾಗ, ಅವುಗಳ ಮೇಲಿನ ಕಪ್ಪು ರಕ್ತನಾಳಗಳನ್ನು ಸರಿಯಾಗಿ ತೆಗೆದುಹಾಕಬೇಕು. ಇದು ಸಿಗಡಿಗಳಲ್ಲಿ ತ್ಯಾಜ್ಯ ಸಂಗ್ರಹವಾಗುವ ಕರುಳಿನ ಪ್ರದೇಶವಾಗಿದೆ. ಇದನ್ನು ತೆಗೆಯದೆ ತಿಂದರೆ ದೇಹಕ್ಕೆ ಹಾನಿಯಾಗುತ್ತದೆ. ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು. ಸಿಗಡಿ ತಿಂದಾಗ ದೇಹದ ಚರ್ಮದ ಮೇಲೆ ತುರಿಕೆ ಮತ್ತು ಕಂದು ಕಲೆಗಳು ಕಂಡು ಬಂದರೆ, ಅದು ಅಲರ್ಜಿಯ ಸಂಕೇತವಾಗಿದೆ. ಅದೂ ಅಲ್ಲದೆ ಸಿಗಡಿ ತಿಂದಾಗ ಸುಸ್ತು ಎನಿಸಿದರೂ, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡರೂ ತಡಮಾಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎನ್ನುತ್ತಾರೆ ತಜ್ಞರು.

    ಸಿಗಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ತಿಂದರೆ ಜೀವಕ್ಕೆ ಅಪಾಯವಿಲ್ಲ. ಇನ್ನು ಮುಂದೆ ಸಿಗಡಿಗಳನ್ನು ತಿನ್ನುವಾಗ ಅವುಗಳ ಮೇಲಿನ ರಕ್ತನಾಳಗಳನ್ನು ತೆಗೆದುಹಾಕುವುದನ್ನು ಮರೆಯಬೇಡಿ. (ಏಜೆನ್ಸೀಸ್​)

    ಇದಕ್ಕಿಂತ ಕೆಟ್ಟದ್ದು ಮತ್ತೊಂದಿಲ್ಲ: ಕೆಲ ಬಾಲಿವುಡ್​ ಸೆಲೆಬ್ರಿಟಿ ದಂಪತಿಯ ಮದ್ವೆ ಹಿಂದಿನ ಗುಟ್ಟು ಬಿಚ್ಚಿಟ್ಟ ನೋರಾ!

    ಡಿಕೆ ಆರ್ಭಟ ಕಂಡು ಕೀಟಲೆ ಮಾಡಿದ ರೋಹಿತ್! ಸ್ಟಂಪ್​ ಮೈಕ್‌ನಲ್ಲಿ ಸೆರೆಯಾದ ಮಾತುಗಳು ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts