More

    ಡಿಕೆ ಆರ್ಭಟ ಕಂಡು ಕೀಟಲೆ ಮಾಡಿದ ರೋಹಿತ್! ಸ್ಟಂಪ್​ ಮೈಕ್‌ನಲ್ಲಿ ಸೆರೆಯಾದ ಮಾತುಗಳು ವೈರಲ್​

    ಮುಂಬೈ: ನಿನ್ನೆ (ಏಪ್ರಿಲ್​ 11) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಹಾಗೂ ಮುಂಬೈ ಇಂಡಿಯನ್ಸ್​ (ಎಂಐ) ನಡುವೆ ನಡೆದ ಐಪಿಎಲ್​ ಪಂದ್ಯವು ಒಳ್ಳೆಯ ಮನರಂಜನೆಯನ್ನು ನೀಡಿತು. ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ 197 ರನ್​ಗಳ ಬೃಹತ್​ ಟಾರ್ಗೆಟ್​ ನೀಡಿದರೂ ಮುಂಬೈ ಸುಲಭವಾಗಿ ಗುರಿಮುಟ್ಟಿತು. ಈ ಪಂದ್ಯದ ನಡುವೆ ಮುಂಬೈ ಮಾಜಿ ನಾಯಕ ರೋಹಿತ್​ ಶರ್ಮ, ಆರ್​ಸಿಬಿ ಸ್ಫೋಟಕ ಆಟಗಾರ ದಿನೇಶ್​ ಕಾರ್ತಿಕ್​ ಅವರನ್ನು ಕೀಟಲೆ ಮಾಡಿದ ಕ್ಷಣ ಗಮನ ಸೆಳೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಮುಂಬೈ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ ಅವರಲ್ಲಿ ಹಲವು ಬದಲಾವಣೆಗಳಾಗಿವೆ. ಅಭ್ಯಾಸ ಪಂದ್ಯದಲ್ಲಿ ಮೋಜು ಮಸ್ತಿ ಮಾಡುತ್ತಾ ಸಹ ಆಟಗಾರರನ್ನು ಚುಡಾಯಿಸುತ್ತಾ ಅಭಿಮಾನಿಗಳಿಗೆ ಬೇಕಾದಷ್ಟು ಮನರಂಜನೆ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಚುಡಾಯಿಸಿದ ರೀತಿ ಮಾತ್ರ ನೆಕ್ಸ್ಟ್​ ಲೆವೆಲ್​ ಎನ್ನುತ್ತಾರೆ ಕ್ರಿಕೆಟ್ ಪ್ರೇಮಿಗಳು. ಈ ಪಂದ್ಯದಲ್ಲಿ ಡಿಕೆ ಬ್ಯಾಟಿಂಗ್​ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕೊನೆಯ ಹಂತದಲ್ಲಿ ರನ್​ ಮಳೆಯನ್ನೇ ಹರಿಸಿದರು. ಕೇವಲ 23 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 53 ರನ್ ಗಳಿಸಿ ಅಜೇಯರಾಗಿ ಉಳಿದರು.

    ಮುಖ್ಯವಾಗಿ 16ನೇ ಓವರ್​ನಲ್ಲಿ ಆಕಾಶ್ ಮಧ್ವಲ್​ಗೆ ಸಿಡಿಸಿದ ನಾಲ್ಕು ಬೌಂಡರಿಗಳು ಐಪಿಎಲ್​ನ ಹೈಲೈಟ್​. ಒಂದೇ ಏರಿಯಾದಲ್ಲಿ 4 ಬೌಂಡರಿಗಳನ್ನು ಬಾರಿಸಿದರು. ಅಲ್ಲದೆ, ಬುಮ್ರಾ ಎಸೆದ 19ನೇ ಓವರ್​ನಲ್ಲಿ ಡಿಕೆ ಕೊನೆಯ ಎಸೆತವನ್ನು ಸಿಕ್ಸರ್​ಗೆ ಅಟ್ಟಿದರು. ಇದನ್ನು ನೋಡಿದ ರೋಹಿತ್, ಡಿಕೆ ಆಟವನ್ನು ಮೆಚ್ಚಿ, ಅವರ ಬಳಿ ಬಂದು ತಮ್ಮದೇ ಶೈಲಿಯಲ್ಲಿ ಚುಡಾಯಿಸಿದರು. ಹಿಟ್​ಮ್ಯಾನ್‌ ಆಡಿದ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿವೆ. ಹಾಗಾದರೆ ರೋಹಿತ್​ ಹೇಳಿದ್ದೇನು ಎಂದು ನೋಡುವುದಾದರೆ, ಶಹಬ್ಬಾಷ್​ ಡಿಕೆ, ಟಿ20 ವಿಶ್ವಕಪ್ ಆಡುವುದಕ್ಕಾಗಿಯೇ ಈ ರೀತಿ ಸ್ಫೋಟಕ ಆಟವನ್ನು ಆಡುತ್ತಿದ್ದೀಯಾ? ಎಂದು ನಗುತ್ತಾ ಕೀಟಲೆ ಮಾಡಿದ್ದಾರೆ. ಇದೀಗ ಈ ಮಾತುಗಳು ವೈರಲ್ ಆಗಿವೆ.

    ದಿನೇಶ್ ಕಾರ್ತಿಕ್ ಕೂಡ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಡುಪ್ಲೆಸಿಸ್ (61), ರಜತ್ ಪಾಟಿದಾರ್ (50), ಡಿಕೆ (53*) ರನ್ ಗಳಿಸಿ ಮಿಂಚಿದರು. ಬಳಿಕ 197 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ 15.3 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ಗಳ ಪೈಕಿ ಇಶಾನ್ ಕಿಶನ್ (69), ರೋಹಿತ್ (38) ಮತ್ತು ಸೂರ್ಯಕುಮಾರ್ (52) ರನ್‌ಗಳೊಂದಿಗೆ ಮಿಂಚಿದರು. (ಏಜೆನ್ಸೀಸ್​)

    ಆಂಡ್ರಿಯಾ-ಅನಿರುದ್ಧ್ ಖಾಸಗಿ ಫೋಟೋ ಲೀಕ್​! ಕೊನೆಗೂ ಮೌನ ಮುರಿದ ಖ್ಯಾತ ಸಂಗೀತ ನಿರ್ದೇಶಕ

    ಮೊಬೈಲ್​​ ರಿಪೇರಿ ಮಾಡಿಸಿಕೊಡಲಿಲ್ಲ ಅಂತ ಬದುಕನ್ನೇ ಕೊನೆಗೊಳಿಸಿದ ಯುವತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts