More

    ಆಂಡ್ರಿಯಾ-ಅನಿರುದ್ಧ್ ಖಾಸಗಿ ಫೋಟೋ ಲೀಕ್​! ಕೊನೆಗೂ ಮೌನ ಮುರಿದ ಖ್ಯಾತ ಸಂಗೀತ ನಿರ್ದೇಶಕ

    ಚೆನ್ನೈ: ಕಾಲಿವುಡ್​ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್​, ನಟಿ ಹಾಗೂ ಗಾಯಕಿ ಆಂಡ್ರಿಯಾ ಜರೆಮಿಯ ಜತೆಗಿದ್ದ ತನ್ನ ರೊಮ್ಯಾಂಟಿಕ್​ ಸಂಬಂಧದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ.

    ಅನಿರುದ್ಧ್​ ಅವರು ತಮಿಳು ಸಿನಿಮಾ ರಂಗದ ಮುಂಚೂಣಿ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಐಶ್ವರ್ಯಾ ರಜಿನಿಕಾಂತ್​ ನಿರ್ದೇಶನದ ಹಾಗೂ ಧನುಷ್​ ನಟನೆಯ 3 ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಚಿತ್ರದಲ್ಲೇ ಅನಿರುದ್ಧ್​ ಮ್ಯೂಸಿಕ್​ ಭಾರಿ ಸದ್ದು ಮಾಡಿತು. ಇದಾದ ಬಳಿಕ ಸಾಲು ಸಾಲು ಸಿನಿಮಾ ಆಫರ್​ಗಳು ಬಂದವು. ವಿಜಯ್​ ಹಾಗೂ ರಜಿನಿಕಾಂತ್​ ಸೇರಿದಂತೆ ಸ್ಟಾರ್​ ನಟರಿಗೆ ಮ್ಯೂಸಿಕ್​ ಕಂಪೋಸ್​ ಮಾಡಿದ್ದಾರೆ. ಅಲ್ಲದೆ, ಶಾರುಖ್​ ಖಾನ್​ ಅಭಿನಯದ ಜವಾನ್​ ಸಿನಿಮಾಗೂ ಅನಿರುದ್ಧ್​ ಮ್ಯೂಸಿಕ್​ ನೀಡುವ ಮೂಲಕ ಬಾಲಿವುಡ್​ಗೂ ಪದಾರ್ಪಣೆ ಮಾಡಿದ್ದಾರೆ.

    ಸದ್ಯ ಅನಿರುದ್ಧ್​ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಇದರ ನಡುವೆ ನಟಿ ಆಂಡ್ರಿಯಾ ಜರೆಮಿಯ ಜತೆಗಿದ್ದ ಪ್ರೇಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇಬ್ಬರು ಲಿಪ್​ಲಾಕ್​ ಮಾಡಿರುವ ಫೋಟೋಗಳು ಸುಚಿ ಲೀಕ್ಸ್​ನಿಂದ ಸೋರಿಕೆಯಾದ ಬಳಿಕ ಕಾಲಿವುಡ್​ನಲ್ಲಿ ಇಬ್ಬರ ಪ್ರೇಮ ಪ್ರಕರಣ ಬಹಳಷ್ಟು ಸದ್ದು ಮಾಡಿತ್ತು.

    Anirudh 1

    ಇದೀಗ ಸಂದರ್ಶನವೊಂದರಲ್ಲಿ ಅನಿರುದ್ಧ ಮೌನ ಮುರಿದಿದ್ದಾರೆ. ನೀವು ಪ್ರೀತಿಸಿದ ನಟಿ ಯಾರು? ಅವರ ಹೆಸರು ಮತ್ತು ಪ್ರೇಮ ವೈಫಲ್ಯಕ್ಕೆ ಕಾರಣವನ್ನು ಏಕೆ ಬಹಿರಂಗಪಡಿಸಲಿಲ್ಲ ಎಂಬ ಪ್ರಶ್ನೆ ಎದ್ದಿದೆ ಎಂದು ಆ್ಯಂಕರ್​, ಅನಿರುದ್ಧ್​ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಅನಿರುದ್ಧ್ ಗೆಳತಿಯ ಹೆಸರು ಆಂಡ್ರಿಯಾ ಎಂದರು.

    ನನಗೆ 19 ವರ್ಷ ವಯಸ್ಸಾಗಿದ್ದಾಗ ಆಕೆಯ ಪ್ರೀತಿಯ ಬಲೆಯಲ್ಲಿ ಬಿದ್ದೆ. ಅದೇ ನನ್ನ ಮೊದಲ ಲವ್​. ಆ ಸಮಯದಲ್ಲಿ ಆಂಡ್ರಿಯಾಗೆ 25 ವರ್ಷ ವಯಸ್ಸಾಗಿತ್ತು. ನಮ್ಮ ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣವೇನೆಂದರೆ, ವಯಸ್ಸಿನ ಅಂತರ. ನನ್ನ ಮತ್ತು ಆಂಡ್ರಿಯಾ ನಡುವೆ 6 ವರ್ಷ ವಯಸ್ಸಿನ ವ್ಯತ್ಯಾಸವಿದೆ. ಆಂಡ್ರಿಯಾ ನನಗಿಂತ 6 ವರ್ಷ ದೊಡ್ಡವಳು. ಹೀಗಾಗಿ ನಾವಿಬ್ಬರು ಸಂಬಂಧವನ್ನು ಮುಂದುರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವಿಬ್ಬರು ಬೇರೆಯಾದೆವು ಎಂದು ಅನಿರುದ್ಧ್​ ಹೇಳಿದ್ದಾರೆ.

    ಸ್ಟಾರ್​ ನಿರ್ದೇಶಕನ ಜತೆ ಆಂಡ್ರಿಯಾ ಸಂಬಂಧ
    ನಟಿ ಆಂಡ್ರಿಯಾ ವಿವಾಹಿತ ನಿರ್ದೇಶಕನ ಜತೆ ವಿವಾಹೇತರ ಸಂಬಂಧ ಇಟ್ಟುಕೊಳ್ಳುವ ಮೂಲಕ ಹಿಂದೊಮ್ಮೆ ಬಹಳ ಸುದ್ದಿಯಾಗಿದ್ದರು. ಇದು ಅವರ ಜೀವನದ ಅತ್ಯಂತ ಕಹಿ ಕ್ಷಣಗಳೆಂದು ಆಂಡ್ರಿಯಾ ಹಿಂದೊಮ್ಮೆ ಟಿವಿ ಸಂದರ್ಶನದಲ್ಲಿ ಹೆಸರೇಳದೆ ಪರೋಕ್ಷವಾಗಿ ಹೇಳಿದ್ದರು. ಅಂದಹಾಗೆ ಆ ನಿರ್ದೇಶಕ ಬೇರೆ ಯಾರೂ ಅಲ್ಲ ತಮಿಳಿನ ಖ್ಯಾತ ನಿರ್ದೇಶಕ ಸೆಲ್ವರಾಘವನ್​. 7ಜಿ ರೈನ್​ಬೋ ಕಾಲನಿ, ಯಾರಡಿ ನೀ ಮೋಹಿನಿ, ಆಯಿರಥಿಲ್​ ಒರುವನ್​, ಎನ್​ಜಿಕೆ ಮತ್ತು ನಾನೇ ವರುವನ್​ ಸೇರಿದಂತೆ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲದೆ, ವಿಜಯ್​ ಅಭಿನಯದ ಬೀಸ್ಟ್​ ಹಾಗೂ ವಿಶಾಲ್​ ನಟನೆಯ ಮಾರ್ಕ್​ ಆಂಟೋನಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಪ್ರತಿಭೆಯಿಂದಲೇ ತಮಿಳು ಇಂಡಸ್ಟ್ರಿಯಲ್ಲಿ ಸೆಲ್ವರಾಘವನ್​ ಹೆಸರು ಮಾಡಿದ್ದಾರೆ. 2006ರಲ್ಲಿ ನಟಿ ಸೋನಿಯಾ ಅಗರವಾಲ್​ ಅವರನ್ನು ಮದುವೆಯಾಗಿದ್ದರು. ಆದರೆ, 2010ರಲ್ಲಿ ಇಬ್ಬರು ಡಿವೋರ್ಸ್​ ಪಡೆದುಕೊಂಡರು. 2011ರಲ್ಲಿ ಗೀತಾಂಜಲಿ ಎಂಬುವರನ್ನು ಮದುವೆಯಾದರು.

    ಸೆಲ್ವರಾಘವನ್​ ನಿರ್ದೇಶನದ ಆಯಿರಥಿಲ್​ ಒರುವನ್​ ಚಿತ್ರದಲ್ಲಿ ಆಂಡ್ರಿಯಾ ಜೆರಮಿಯಾ ಸಹ ನಟಿಸಿದ್ದಾರೆ. ಸೆಲ್ವರಾಘವನ್​ ಜತೆಗಿನ ಸಂಬಂಧದ ಬಗ್ಗೆ ಈ ಹಿಂದೆಯೇ ಸಾಕಷ್ಟು ಸುದ್ದಿಗಳು ಹರಿದಾಡಿದರೂ ಸಹ ಅದು ವದಂತಿಯಾಗಿಯೇ ಉಳಿದಿತ್ತು. ಆದರೆ, ಯಾವಾಗ ಆಂಡ್ರಿಯಾ ಅವರು “ಬ್ರೋಕನ್​ ವಿಂಗ್ಸ್​” ಹೆಸರಿನಲ್ಲಿ ಪುಸ್ತಕ ಬರೆದು, ಅದರಲ್ಲಿ ತಮ್ಮ ಸಂಬಂಧದ ಬಗ್ಗೆ ಮಾತನಾಡಿದರೋ ಆಗ ವದಂತಿಗಳೆಲ್ಲ ನಿಜವಾಯಿತು. ವಿವಾಹಿತ ವ್ಯಕ್ತಿಯ ಜತೆ ದೀರ್ಘಕಾಲದವರೆಗೆ ಅಫೇರ್​ ಇಟ್ಟುಕೊಂಡಿದ್ದೆ. ಆತನಂದ್ರೆ ನನಗೆ ತುಂಬಾ ಇಷ್ಟ ಇತ್ತು. ಆದರೆ, ಆತ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿದನು. ಇದು ನನ್ನನ್ನು ಖಿನ್ನತೆಗೆ ದೂಡಿತು. ಈ ಸಂಕಷ್ಟದಿಂದ ಹೊರಬರಲು ನಾನು ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಯಿತು ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಆಂಡ್ರಿಯಾ ಹೇಳಿಕೊಂಡಿದ್ದರು. ಇದು ಕಾಲಿವುಡ್​ನಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು.

    ಆಂಡ್ರಿಯಾ​ ಜತೆಗಿನ ಅಫೇರ್​ ಕಾರಣದಿಂದಲೇ ಸೋನಿಯಾ ಅಗರ್ವಾಲ್,​ ಸೆಲ್ವರಾಘವನ್​ನಿಂದ ಡಿವೋರ್ಸ್​ ಪಡೆದುಕೊಂಡರು ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಆ ರೀತಿಯ ಸಿನಿಮಾಗಳನ್ನು ನೋಡಲ್ಲ ಅವಕಾಶ ಸಿಕ್ಕರೆ ಬಿಡಲ್ಲ: ನಟಿ ಆಂಡ್ರಿಯಾ ಓಪನ್​ ಟಾಕ್​

    ಸ್ಟಾರ್​ ನಟಿಯ ಗಂಡನ ಜತೆ ಈ ಹೀರೋಯಿನ್​ಗಿತ್ತು ಅಫೇರ್! ಇಬ್ಬರಿಗೂ ಕೈಕೊಟ್ಟು 3ನೇಯವಳ ಕೈಹಿಡಿದ ಸೆಲೆಬ್ರಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts