ಸ್ಟಾರ್​ ನಟಿಯ ಗಂಡನ ಜತೆ ಈ ಹೀರೋಯಿನ್​ಗಿತ್ತು ಅಫೇರ್! ಇಬ್ಬರಿಗೂ ಕೈಕೊಟ್ಟು 3ನೇಯವಳ ಕೈಹಿಡಿದ ಸೆಲೆಬ್ರಿಟಿ

Andrea Jeremiah

ಚೆನ್ನೈ: ನಟಿ ಆಂಡ್ರಿಯಾ ಜರೆಮಿಯ, ಕಾಲಿವುಡ್​ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯವಿರುವ ಹೆಸರು. ನಾಯಕಿ ಮತ್ತು ಖಳನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಂಡ್ರಿಯಾ, ತಮ್ಮ ಬೋಲ್ಡ್​ ಲುಕ್​ನಿಂದಲೇ ತುಂಬಾ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಆಂಡ್ರಿಯಾ ಗಾಯಕಿಯೂ ಹೌದು. ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಆಂಡ್ರಿಯಾ, ಒಮ್ಮೆ ತನ್ನ ಅಫೇರ್​ನಿಂದಲೇ ಬಹಳ ಸುದ್ದಿಯಾಗಿದ್ದರು.

ಹೌದು, ವಿವಾಹಿತ ನಿರ್ದೇಶಕನ ಜತೆ ಆಂಡ್ರಿಯಾ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದರು. ಇದು ಅವರ ಜೀವನದ ಅತ್ಯಂತ ಕಹಿ ಕ್ಷಣಗಳೆಂದು ಆಂಡ್ರಿಯಾ ಹಿಂದೊಮ್ಮೆ ಟಿವಿ ಸಂದರ್ಶನದಲ್ಲಿ ಹೆಸರೇಳದೆ ಪರೋಕ್ಷವಾಗಿ ಹೇಳಿದ್ದರು. ಅಂದಹಾಗೆ ಆ ನಿರ್ದೇಶಕ ಬೇರೆ ಯಾರೂ ಅಲ್ಲ ತಮಿಳಿನ ಖ್ಯಾತ ನಿರ್ದೇಶಕ ಸೆಲ್ವರಾಘವನ್​.

7ಜಿ ರೈನ್​ಬೋ ಕಾಲನಿ, ಯಾರಡಿ ನೀ ಮೋಹಿನಿ, ಆಯಿರಥಿಲ್​ ಒರುವನ್​, ಎನ್​ಜಿಕೆ ಮತ್ತು ನಾನೇ ವರುವನ್​ ಸೇರಿದಂತೆ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲದೆ, ವಿಜಯ್​ ಅಭಿನಯದ ಬೀಸ್ಟ್​ ಹಾಗೂ ವಿಶಾಲ್​ ನಟನೆಯ ಮಾರ್ಕ್​ ಆಂಟೋನಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಪ್ರತಿಭೆಯಿಂದಲೇ ತಮಿಳು ಇಂಡಸ್ಟ್ರಿಯಲ್ಲಿ ಸೆಲ್ವರಾಘವನ್​ ಹೆಸರು ಮಾಡಿದ್ದಾರೆ. 2006ರಲ್ಲಿ ನಟಿ ಸೋನಿಯಾ ಅಗರವಾಲ್​ ಅವರನ್ನು ಮದುವೆಯಾಗಿದ್ದರು. ಆದರೆ, 2010ರಲ್ಲಿ ಇಬ್ಬರು ಡಿವೋರ್ಸ್​ ಪಡೆದುಕೊಂಡರು. 2011ರಲ್ಲಿ ಗೀತಾಂಜಲಿ ಎಂಬುವರನ್ನು ಮದುವೆಯಾದರು.

Selva 1

ಸೆಲ್ವರಾಘವನ್​ ನಿರ್ದೇಶನದ ಆಯಿರಥಿಲ್​ ಒರುವನ್​ ಚಿತ್ರದಲ್ಲಿ ಆಂಡ್ರಿಯಾ ಜೆರಮಿಯಾ ಸಹ ನಟಿಸಿದ್ದಾರೆ. ಸೆಲ್ವರಾಘವನ್​ ಜತೆಗಿನ ಸಂಬಂಧದ ಬಗ್ಗೆ ಈ ಹಿಂದೆಯೇ ಸಾಕಷ್ಟು ಸುದ್ದಿಗಳು ಹರಿದಾಡಿದರೂ ಸಹ ಅದು ವದಂತಿಯಾಗಿಯೇ ಉಳಿದಿತ್ತು. ಆದರೆ, ಯಾವಾಗ ಆಂಡ್ರಿಯಾ ಅವರು “ಬ್ರೋಕನ್​ ವಿಂಗ್ಸ್​” ಹೆಸರಿನಲ್ಲಿ ಪುಸ್ತಕ ಬರೆದು, ಅದರಲ್ಲಿ ತಮ್ಮ ಸಂಬಂಧದ ಬಗ್ಗೆ ಮಾತನಾಡಿದರೋ ಆಗ ವದಂತಿಗಳೆಲ್ಲ ನಿಜವಾಯಿತು.

ವಿವಾಹಿತ ವ್ಯಕ್ತಿಯ ಜತೆ ದೀರ್ಘಕಾಲದವರೆಗೆ ಅಫೇರ್​ ಇಟ್ಟುಕೊಂಡಿದ್ದೆ. ಆತನಂದ್ರೆ ನನಗೆ ತುಂಬಾ ಇಷ್ಟ ಇತ್ತು. ಆದರೆ, ಆತ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿದನು. ಇದು ನನ್ನನ್ನು ಖಿನ್ನತೆಗೆ ದೂಡಿತು. ಈ ಸಂಕಷ್ಟದಿಂದ ಹೊರಬರಲು ನಾನು ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಯಿತು ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಆಂಡ್ರಿಯಾ ಹೇಳಿಕೊಂಡಿದ್ದರು. ಇದು ಕಾಲಿವುಡ್​ನಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು.

Selva 2

ಆಂಡ್ರಿಯಾ​ ಜತೆಗಿನ ಅಫೇರ್​ ಕಾರಣದಿಂದಲೇ ಸೋನಿಯಾ ಅಗರ್ವಾಲ್,​ ಸೆಲ್ವರಾಘವನ್​ನಿಂದ ಡಿವೋರ್ಸ್​ ಪಡೆದುಕೊಂಡರು ಎಂದು ಹೇಳಲಾಗಿದೆ. ಸೆಲ್ವರಾಘವನ್​ನಿಂದ ದೂರಾದ ಬಳಿಕ ಆಂಡ್ರಿಯಾ, ಸಂಗೀತ ನಿರ್ದೇಶಕ ಅನಿರುದ್ಧ್​ ಜತೆ ಸಂಬಂಧ ಇಟ್ಟುಕೊಂಡಿದ್ದರು. ಆದರೆ, ಅದು ಕೂಡ ಹೆಚ್ಚು ದಿನ ಉಳಿಯಲಿಲ್ಲ. ಸೆಲ್ವರಾಘವನ್​, ಗೀತಾಂಜಲಿ ಎಂಬುವರನ್ನು ವರಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ಕಾ, ನೋ ಎಂಟ್ರಿ ಹಾಘೂ ಪಿಸಾಸು ಸಿನಿಮಾಗಳಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

ಬೋಲ್ಡ್ ಬ್ಯೂಟಿ ಆಂಡ್ರಿಯಾ ಜರೆಮಿಯ ಬೆತ್ತಲೆ ದೃಶ್ಯಕ್ಕೆ ಸೆನ್ಸಾರ್​ ಕತ್ತರಿ! ನಿರ್ದೇಶಕ ಕೊಟ್ಟ ಸ್ಪಷ್ಟನೆ ಹೀಗಿದೆ…

ತಂದೆಯ ಎದುರೇ ಬಸ್ಸಿನಲ್ಲಿ ಅನುಭವಿಸಿದ ಕರಾಳ ಘಟನೆಯನ್ನು ವಿವರಿಸಿದ ನಟಿ ಆಂಡ್ರಿಯಾ ಜರೆಮಿಯ!

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…