More

    ಬೋಲ್ಡ್ ಬ್ಯೂಟಿ ಆಂಡ್ರಿಯಾ ಜರೆಮಿಯ ಬೆತ್ತಲೆ ದೃಶ್ಯಕ್ಕೆ ಸೆನ್ಸಾರ್​ ಕತ್ತರಿ! ನಿರ್ದೇಶಕ ಕೊಟ್ಟ ಸ್ಪಷ್ಟನೆ ಹೀಗಿದೆ…

    ಚೆನ್ನೈ: ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿಭಾಯಿಸಿರುವುದಲ್ಲದೆ, ತಮ್ಮ ಬೋಲ್ಡ್​ ಲುಕ್​ನಿಂದಲೇ ಕಾಲಿವುಡ್​ನಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಆಂಡ್ರಿಯಾ ಜರೆಮಿಯ, ಮಸ್ಕಿನ್​ ನಿರ್ದೇಶನದ ಪಿಸಾಸು​-2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    15 ನಿಮಿಷ ಬೆತ್ತಲೆ ದೃಶ್ಯ

    ಪಿಸಾಸು-2 ಹಾರರ್​ ಸಿನಿಮಾವಾಗಿದ್ದು, 2014ರಲ್ಲಿ ತೆರೆಕಂಡ ಬ್ಲಾಕ್​ಬಸ್ಟರ್​ ಪಿಸಾಸು ಸಿನಿಮಾದ ಮುಂದುವರಿದ ಭಾಗವಾಗಿದೆ. ಹೀಗಾಗಿ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಈ ಚಿತ್ರದ ಟೀಸರ್​ ಕಳೆದ ವರ್ಷವಷ್ಟೇ ಬಿಡುಗಡೆಯಾಗಿ ಭಾರೀ ಸುದ್ದಿಯಾಗಿತ್ತು. ಈ ಚಿತ್ರದಲ್ಲಿ 15 ನಿಮಿಷಗಳ ಬೆತ್ತಲೆ ದೃಶ್ಯವಿದ್ದು, ಆಂಡ್ರಿಯಾ ಬೆತ್ತಲೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹರಿದಾಡಿತು. ಆದರೆ, ಆ ರೀತಿ ಏನೂ ಇಲ್ಲ. ಕೆಲವೇ ಕೆಲವು ದೃಶ್ಯಗಳಲ್ಲಿ ಬಟ್ಟೆ ಇಲ್ಲದೆ ಕಾಣಿಸಿಕೊಳ್ಳುತ್ತಾರೆ. ಅದಕ್ಕೆ ಆಂಡ್ರಿಯಾ ಅನುಮತಿ ಸಹ ನೀಡಿದ್ದಾರೆ ಎಂದು ನಿರ್ದೇಶಕ ಮಸ್ಕಿನ್​ ಸ್ಪಷ್ಟನೆ ನೀಡಿದ್ದರು.

    ಇದನ್ನೂ ಓದಿ: ಜುಲೈ 19ರಿಂದ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆ ಆರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

    ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಲ್ಲ

    ಈ ಚಿತ್ರದ ಕುರಿತು ತಾಜಾ ಸುದ್ದಿಯೊಂದು ಹೊರಬಿದ್ದಿದ್ದು, ಚಿತ್ರದಲ್ಲಿ ಸೆರೆಹಿಡಿದಿರುವ ಬೆತ್ತಲೆ ದೃಶ್ಯಗಳನ್ನು ಚಿತ್ರತಂಡ ಸೆನ್ಸಾರ್​ ಬೋರ್ಡ್​ಗೆ ಹೆದರಿ ತೆಗೆದುಹಾಕಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಸ್ಕಿನ್​, ಇದೀಗ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಕ್ಕೆ ಕತ್ತರಿ ಹಾಕಿಲ್ಲ ಮತ್ತು ಚಿತ್ರದಲ್ಲಿ ಯಾವುದನ್ನೂ ಮ್ಯೂಟ್ ಮಾಡಿಲ್ಲ. ನಾನು ಯಾವುದೇ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಲ್ಲ. ಆದರೆ, ಕೆಲವು ಕಾಮಪ್ರಚೋದಕ ಸುಂದರ ದೃಶ್ಯಗಳನ್ನು ಸೆರೆಹಿಡಿದಿದ್ದೇನೆ ಎಂದಿದ್ದಾರೆ.

    ಇದನ್ನೂ ಓದಿ: ಲಂಚ ಪಡೆದು ಎಸ್ಕೇಪ್​ ಆಗುತ್ತಿದ್ದ ಭ್ರಷ್ಟನನ್ನು ಸಿನಿಮಾ ಸ್ಟೈಲ್​ನಲ್ಲಿ ಚೇಸ್​ ಮಾಡಿ ಹಿಡಿದ ಲೋಕಾಯುಕ್ತ ಅಧಿಕಾರಿಗಳು!

    ಈ ಚಿತ್ರದಲ್ಲಿ ವಿಜಯ್​ ಸೇತುಪತಿ, ಪೂರ್ಣಾ ಹಾಗೂ ಸಂತೋಷ್​ ಪ್ರತಾಪ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಟಿ ಮುರುಗನಾಥಂ ಅವರು ನಿರ್ಮಾಣ ಮಾಡಿದ್ದಾರೆ.​ ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

    ತಂದೆಯ ಎದುರೇ ಬಸ್ಸಿನಲ್ಲಿ ಅನುಭವಿಸಿದ ಕರಾಳ ಘಟನೆಯನ್ನು ವಿವರಿಸಿದ ನಟಿ ಆಂಡ್ರಿಯಾ ಜರೆಮಿಯ!

    ಬೆತ್ತಲೆಯಾಗಿ ಕಾಣಿಸಿಕೊಂಡರಾ ಆಂಡ್ರಿಯಾ ಜರೆಮಿಯ? ಟೀಸರ್​ ಬಿಡುಗಡೆ ಬೆನ್ನಲ್ಲೇ ಬಿಸಿ ಬಿಸಿ ಚರ್ಚೆ ಶುರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts