ತಂದೆಯ ಎದುರೇ ಬಸ್ಸಿನಲ್ಲಿ ಅನುಭವಿಸಿದ ಕರಾಳ ಘಟನೆಯನ್ನು ವಿವರಿಸಿದ ನಟಿ ಆಂಡ್ರಿಯಾ ಜರೆಮಿಯ!

Jeremai
Published on

ಚೆನ್ನೈ: ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿಭಾಯಿಸಿ ಕಾಲಿವುಡ್​ನಲ್ಲಿ ಒಳ್ಳೆಯ ಹೆಸರು ಮಾಡಿರುವ ಆಂಡ್ರಿಯಾ ಜರೆಮಿಯ ಸದ್ಯ "ಅನಾಲ್​ ಮೇಲೆ ಪಣಿತುಳಿ" ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಯೂಟ್ಯೂಬ್​ ಸಂದರ್ಶನವೊಂದರಲ್ಲಿ ಮಾತನಾಡುವಾಗ 11ನೇ ವರ್ಷದಲ್ಲಿ ಅನುಭವಿಸಿದ ಲೈಂಗಿಕ ದೌರ್ಜನ್ಯ ಬಗ್ಗೆ ವಿವರಿಸಿದ್ದಾರೆ.

ನಾನು ನಾಗಪಟ್ಟಿನಂನಿಂದ ವೇಲಾಂಗಣಿಗೆ ಬಸ್​ನಲ್ಲಿ ತೆರಳುತ್ತಿದ್ದೆ. ಆಗ ನನಗೆ 11 ವರ್ಷ. ನನ್ನ ಪಕ್ಕದಲ್ಲಿ ತಂದೆ ಕುಳಿತಿದ್ದರು. ಇದ್ದಕ್ಕಿದ್ದಂತೆ ನನ್ನು ಬೆನ್ನ ಹಿಂದೆ ಒಂದು ಕೈ ತೂರಿ ಬಂತು. ನನ್ನ ತಂದೆ ಇರಬಹುದೆಂದು ನಾನು ಭಾವಿಸಿದೆ. ದಿಢೀರನೇ ಕೈ ಟೀ ಶರ್ಟ್​ ಒಳಗೆ ಹೋಯಿತು. ನಾನು ನನ್ನ ತಂದೆಯನ್ನು ನೋಡಿದೆ. ಅವರ ಎರಡು ಕೈಗಳು ಮುಂದೆಯೇ ಇದ್ದವು. ಆದರೆ, ಅದರ ಬಗ್ಗೆ ನನ್ನ ತಂದೆಗೆ ಏನು ಹೇಳಿಲ್ಲ. ನನ್ನಷ್ಟು ನಾನು ಮುಂದಕ್ಕೆ ಸರಿದು ಸರಿಪಡಿಸಿಕೊಂಡೆ ಎಂದು ಆಂಡ್ರಿಯಾ ಹೇಳಿದ್ದಾರೆ.

ನಾನು ನನ್ನ ಪಾಲಕರಿಗೆ ಏಕೆ ಹೇಳಿಲಿಲ್ಲ ಎಂದು ನನಗೆ ಗೊತ್ತಿಲ್ಲ. ಒಂದು ವೇಳೆ ಹೇಳಿದ್ದರೆ, ಆತನಿಗೆ ಏನಾದರೂ ಮಾಡುತ್ತಿದ್ದರು. ಆದರೆ, ನಾನು ಹೇಳಲಿಲ್ಲ. ಏಕೆಂದರೆ ನಾವು ನಮ್ಮ ಸಮಾಜದಿಂದ ಆ ರೀತಿಯಲ್ಲಿ ಬೆಳೆದಿದ್ದೇವೆ. ನೀವು ಅದರ ಬಗ್ಗೆ ದೊಡ್ಡ ವ್ಯವಹಾರ ಮಾಡಬಾರದು ಎಂದು ಸಮಾಜ ಬಯಸುತ್ತದೆ" ಎಂದು ನಟಿ ಹೇಳಿದರು.

ಅದೇ ರೀತಿ ಆಂಡ್ರಿಯಾ ಒಮ್ಮೆ ಬಸ್ಸಿನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಇದೇ ರೀತಿಯ ಘಟನೆ ನಡೆದಿದೆ. ಅಂದಿನಿಂದಲೇ ಇನ್ನು ಮುಂದೆ ಬಸ್ಸು ಹೋಗುವುದಿಲ್ಲ ಎಂದು ಆಂಡ್ರಿಯಾ ನಿರ್ಧರಿಸಿದ್ದಾರೆ. ಅನೇಕ ಯುವತಿಯರಿಗೆ ಕಾಲೇಜಿಗೆ ಹೋಗುವಾಗ ಬಸ್​ನಲ್ಲಿ ಈ ರೀತಿಯ ಅನುಭವವಾಗಿದೆ. ಕಾಲೇಜಿಗೆ ಬಂದು ತರಗತಿಯಲ್ಲಿ ಕಣ್ಣೀರಿಟ್ಟಿದ್ದಾರೆ ಎಂದು ಆಂಡ್ರಿಯಾ ಹೇಳಿದ್ದಾರೆ. ಅನಲ್ ಮೇಲೆ ಪಣಿತುಲಿ ಸಿನಿಮಾದಲ್ಲೂ ಇಂತಹ ಘಟನೆಗಳನ್ನು ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net