More

    ಆ ರೀತಿಯ ಸಿನಿಮಾಗಳನ್ನು ನೋಡಲ್ಲ ಅವಕಾಶ ಸಿಕ್ಕರೆ ಬಿಡಲ್ಲ: ನಟಿ ಆಂಡ್ರಿಯಾ ಓಪನ್​ ಟಾಕ್​

    ಚೆನ್ನೈ: ನಟಿ ಆಂಡ್ರಿಯಾ ಜರೆಮಿಯ, ಕಾಲಿವುಡ್​ ಸಿನಿ ಪ್ರಿಯರಿಗೆ ಹೆಚ್ಚು ಪರಿಚಯವಿರುವ ಹೆಸರು. ನಾಯಕಿ ಮತ್ತು ಖಳನಾಯಕಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಆಂಡ್ರಿಯಾ, ತಮ್ಮ ಬೋಲ್ಡ್​ ಲುಕ್​ನಿಂದಲೇ ತುಂಬಾ ಖ್ಯಾತಿ ಪಡೆದಿದ್ದಾರೆ. ಅಲ್ಲದೆ, ಆಂಡ್ರಿಯಾ ಗಾಯಕಿಯೂ ಹೌದು. ಸಾಕಷ್ಟು ಹಾಡುಗಳಿಗೆ ಧ್ವನಿ ನೀಡಿದ್ದಾರೆ.

    ತಮಿಳಿನಲ್ಲಿ ಆಯಿರತಿ ಒರುವನ್​, ಮಂಗಾತ, ವಿಶ್ವರೂಪಂ, ವಾಡಚೆನ್ನೈ, ತುಪ್ಪರಿವಾಲನ್​, ಅನಲ್​ ಮೇಲೆ ಪಣಿತುಳಿ, ಅರಮನೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಆಂಡ್ರಿಯಾ ನಟಿಸಿದ್ದಾರೆ. ಇದೀಗ ಅವರ ನಟನೆಯ ‘ಕಾ-ದಿ ಫಾರೆಸ್ಟ್​” ಸಿನಿಮಾ ಇಂದು ಬಿಡುಗಡೆಯಾಗಿದೆ. ಇದೊಂದು ಥ್ರಿಲ್ಲರ್​ ಸಿನಿಮಾ.

    ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಆಂಡ್ರಿಯಾ ಅವರು ಅನೇಕ ಮಾಧ್ಯಮ ಸಂದರ್ಶನಗಳಲ್ಲಿ ಭಾಗವಹಿಸಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ಅಭಿರುಚಿಯನ್ನು ಆಂಡ್ರಿಯಾ ಹೇಳಿಕೊಂಡಿದ್ದಾರೆ. ಅವರಿಗೆ ಹಾರರ್​ ಮತ್ತು ಹಿಂಸೆಯೇ ತುಂಬಿರುವ ಸಿನಿಮಾಗಳು ಅಂದರೆ ಆಗುವುದಿಲ್ಲವಂತೆ. ಇಂತಹ ಸಿನಿಮಾಗಳನ್ನು ನೋಡುವುದೇ ಇಲ್ಲ ಎಂದಿದ್ದಾರೆ.

    ನಾನು ಹಾರರ್​ ಮತ್ತು ಹಿಂಸೆಯ ಸಿನಿಮಾಗಳನ್ನು ನೋಡುವುದಿಲ್ಲ. ಆದರೆ, ಇಂತಹ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕರೆ ಬೇಡ ಎಂದು ಹೇಳುವುದಿಲ್ಲ. ನೋಡುವುದೇ ಬೇರೆ ಮತ್ತು ನಟಿಸುವುದೇ ಬೇರೆ ಎಂದು ಆಂಡ್ರಿಯಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ಸಿನಿಮಾ ವಿಚಾರಕ್ಕೆ ಬಂದರೆ, ಕಾ-ದಿ ಫಾರೆಸ್ಟ್​ ಇಂದು ಬಿಡುಗಡೆಯಾಗಿದೆ. ಇದನ್ನು ಹೊರತುಪಡಿಸಿ ನೋ ಎಂಟ್ರಿ ಹಾಗೂ ಪಿಸಾಸು ಸಿನಿಮಾಗಳಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

    ಸ್ಟಾರ್​ ನಟಿಯ ಗಂಡನ ಜತೆ ಈ ಹೀರೋಯಿನ್​ಗಿತ್ತು ಅಫೇರ್! ಇಬ್ಬರಿಗೂ ಕೈಕೊಟ್ಟು 3ನೇಯವಳ ಕೈಹಿಡಿದ ಸೆಲೆಬ್ರಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts