More

    ಪೊಲೀಸ್​ ಠಾಣೆಗೆ ನುಗ್ಗಿ ಇನ್ಸ್​ಪೆಕ್ಟರ್​ಗೆ ಆರತಿ ಮಾಡಿ, ಹಾರ ಹಾಕಿ ಹಿಗ್ಗಾಮುಗ್ಗಾ ಥಳಿಸಿದ ದಂಪತಿ! ಕಾರಣ ಹೀಗಿದೆ…

    ಭೋಪಾಲ್: ಸಾಮಾನ್ಯವಾಗಿ ದೇವರಿಗೆ ಆರತಿಯನ್ನು ಅರ್ಪಿಸುತ್ತಾರೆ. ಹಾಗೆಯೇ ಯಾವುದೇ ಶುಭ ಕಾರ್ಯ ನಡೆದಾಗ ಅಲ್ಲಿ ಆರತಿ ಬೆಳಗಲಾಗುತ್ತದೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ದಂಪತಿ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ಪೊಲೀಸ್​ ಅಧಿಕಾರಿಗೆ ಆರತಿ ಬೆಳಗಿದ್ದಾರೆ. ಆದರೆ, ಅಧಿಕಾರಿ ಅದನ್ನು ನಿರಾಕರಿಸಿದಾಗ ದಂಪತಿ, ಪೊಲೀಸ್​ ಅಧಿಕಾರಿ ಜತೆ ವಾಗ್ವಾದಕ್ಕಿಳಿದು ಹಲ್ಲೆ ಸಹ ಮಾಡಿದ್ದಾರೆ. ಅಷ್ಟಕ್ಕೂ ದಂಪತಿ, ಪೊಲೀಸ್​ ಅಧಿಕಾರಿಗೆ ಆರತಿ ಬೆಳಗಿದ್ದೇಕೆ? ಅಧಿಕಾರಿ ಅಂಥದ್ದೇನು ಮಾಡಿದ್ರು? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    ಮಧ್ಯಪ್ರದೇಶದ ರೇವಾ ಪಟ್ಟಣದ ಕೊತ್ವಾಲಿ ಪೊಲೀಸ್ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ಜೆ.ಪಿ. ಪಟೇಲ್ ಅವರು ಠಾಣೆಯ ತಮ್ಮ ಕೊಠಡಿಯಲ್ಲಿ ಕುಳಿತಿದ್ದರು. ಈ ವೇಳೆ ಅನುರಾಧಾ ಸೋನಿ ಮತ್ತು ಕುಲದೀಪ್ ಸೋನಿ ಎಂಬ ದಂಪತಿ ತಮ್ಮ ಹೆಣ್ಣು ಮಕ್ಕಳ ಜತೆಗೆ ಆ ಕೋಣೆಗೆ ಬರುತ್ತಾರೆ. ಬರುವಾಗ ಅನುರಾಧ ಅವರ ಕೈಯಲ್ಲಿ ಆರತಿ ತಟ್ಟೆ ಮತ್ತು ಕುಲದೀಪ್ ಕೈಯಲ್ಲಿ ಹೂವಿನ ಹಾರ ಇತ್ತು. ಅನುರಾಧ, ಇನ್ಸ್​ಪೆಕ್ಟರ್​ ಕೊಠಡಿಗೆ ಹೋಗಿ ಜೆ.ಪಿ.ಪಟೇಲ್​ಗೆ ಆರತಿ ಮಾಡಲು ಮುಂದಾದಳು. ಆದರೆ, ಅದಕ್ಕೆ ನಿರಾಕರಿಸಿ, ಆರತಿ ತಟ್ಟೆಯನ್ನು ಇನ್ಸ್​ಪೆಕ್ಟರ್​ ಪಕ್ಕಕ್ಕೆ ಇಡುತ್ತಾರೆ. ಬಳಿಕ ಅನುರಾಧಾ ಪತಿ ಕುಲದೀಪ್, ಇನ್ಸ್​ಪೆಕ್ಟರ್​ ಕೊರಳಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಲು ಮುಂದಾಗುತ್ತಾರೆ. ಆದರೆ, ಇನ್ಸ್​ಪೆಕ್ಟ್​ ಇದೆಲ್ಲವನ್ನು ನಿರಾಕರಿಸುತ್ತಾರೆ. ಈ ಎಲ್ಲ ನಾಟಕೀಯ ದೃಶ್ಯವನ್ನು ದಂಪತಿ ಜತೆ ಬಂದಿದ್ದ ಕೆಲವರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

    ಮೊದಲಿಗೆ ಈ ವಿಡಿಯೋವನ್ನು ನೋಡಿ ಅನೇಕ ಜನರು ಆಶ್ಚರ್ಯಚಕಿತರಾದರು. ಇವರೇಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ, ಸತ್ಯವನ್ನು ತಿಳಿದುಕೊಂಡ ಬಳಿಕ ದಂಪತಿ ನಿಜಕ್ಕೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಅಷ್ಟಕ್ಕೂ ನಡೆದಿದ್ದೇನೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ಅಂದಹಾಗೆ ಅನುರಾಧಾ ಸೋನಿ ಮತ್ತು ಆಕೆಯ ಪತಿ ಕುಲದೀಪ್ ಸೋನಿ ಚಿನ್ನದ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ವರ್ಷದ ಜನವರಿಯಲ್ಲಿ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅರ್ಪಿತ್ ಮತ್ತು ಮುಖೇಶ್ ಎಂಬ ಇಬ್ಬರು ಉದ್ಯೋಗಿಗಳು ನಾಲ್ಕು ಕೆಜಿ ಬೆಳ್ಳಿಯನ್ನು ಕದ್ದಿದ್ದರು. ಈ ಕಳ್ಳತನದ ಬಗ್ಗೆ ಅನುರಾಧ ದಂಪತಿ ರೇವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಪತ್ತೆಯಾಗಿದ್ದ ಆರೋಪಿಗಳು ಬಂಧನದ ಬೆನ್ನಲ್ಲೇ ಹೈಕೋರ್ಟ್‌ ಮೆಟ್ಟಿಲೇರಿ, ಜಾಮೀನು ಪಡೆದು ಆರಾಮಾಗಿ ಓಡಾಡಿಕೊಂಡಿದ್ದಾರೆ. ಇತ್ತ ಕಳೆದು ಹೋದ ವಸ್ತುವು ಸಹ ದಂಪತಿಗೆ ಮರಳಿಲ್ಲ.

    ಈ ಪ್ರಕರಣದ ತನಿಖೆಗೆ ಪೊಲೀಸರು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಂಪತಿ ತೀವ್ರ ಅಸಹನೆ ವ್ಯಕ್ತಪಡಿಸಿದರು. ಹೀಗಾಗಿ ತಮ್ಮ ಪ್ರತಿಭಟನೆಯನ್ನು ಪೊಲೀಸರಿಗೆ ತಿಳಿಸಲು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ಸಿಐ ಜೆ.ಪಿ.ಪಟೇಲ್ ಅವರಿಗೆ ಆರತಿ ಮಾಡುವ ಮೂಲಕ ಆಕ್ರೊಶ ಹೊರಹಾಕಿದ್ದಾರೆ. ಪೊಲೀಸರು ತಮ್ಮ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಈ ರೀತಿ ಮಾಡಿದ್ದೇವೆ ಎಂದು ದಂಪತಿ ಹೇಳಿದ್ದಾರೆ. ಆದರೆ, ಕರ್ತವ್ಯದಲ್ಲಿರುವ ಪೊಲೀಸರನ್ನು ಅವಮಾನಿಸಲಾಗಿದೆ ಎಂದು ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದು, ದಂಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್​)

    ನಾನೇನಾದ್ರೂ ಅಲ್ಲಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ: ಕಾಮೆಂಟರಿ ನಡುವೆ ಸ್ಟಾರ್​ ಕ್ರಿಕೆಟಿಗನ ವಿರುದ್ಧ ಭಜ್ಜಿ ಆಕ್ರೋಶ

    ಹಿಟ್​ಮ್ಯಾನ್​ ರೋಹಿತ್​ ಶರ್ಮಗಾಗಿ ನನ್ನ ಜೀವನವನ್ನೇ ಪಣಕ್ಕಿಡುತ್ತೇನೆ ಅಂದಿದ್ದೇಕೆ ಪ್ರೀತಿ ಝಿಂಟಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts