More

    ಹಿಟ್​ಮ್ಯಾನ್​ ರೋಹಿತ್​ ಶರ್ಮಗಾಗಿ ನನ್ನ ಜೀವನವನ್ನೇ ಪಣಕ್ಕಿಡುತ್ತೇನೆ ಅಂದಿದ್ದೇಕೆ ಪ್ರೀತಿ ಝಿಂಟಾ?

    ನವದೆಹಲಿ: ಇಂಡಿಯನ್ ಪ್ರೀಮಿಯರ್​ ಲೀಗ್ (ಐಪಿಎಲ್​) 2024 ರಲ್ಲಿ ಮುಂಬೈ ಇಂಡಿಯನ್ಸ್ ತನ್ನ ಆರನೇ ಸೋಲನ್ನು ದಾಖಲಿಸಿದೆ. ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ 20 ರನ್‌ಗಳಿಂದ ಸೋಲುಂಡಿತು. ಈ ಪಂದ್ಯದಲ್ಲಿ ರೋಹಿತ್​ ಶರ್ಮಾ ಶತಕ ಸಿಡಿಸಿ ಅಜೇಯರಾಗಿ ಉಳಿದರು. ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. ಸುಮಾರು 12 ವರ್ಷಗಳ ನಂತರ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಗಳಿಸಿದ ಶತಕವೂ ವ್ಯರ್ಥವಾಯಿತು. ಈ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಮತ್ತೊಮ್ಮೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

    ಗುಜರಾತ್ ಟೈಟಾನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಅವರನ್ನು ಖರೀದಿ ಮಾಡಿದ ಮುಂಬೈ ಫ್ರಾಂಚೈಸಿ, ರೋಹಿತ್​ರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್​ಗೆ ನಾಯಕತ್ವ ಜವಾಬ್ದಾರಿ ನೀಡಿದ ವಿಚಾರ ಸಾಕಷ್ಟು ಟೀಕೆಗೆ ಗುರಿಯಾಯಿತು. ತಂಡಕ್ಕೆ ಐದು ಬಾರಿ ಕಪ್ ತಂದುಕೊಟ್ಟ ರೋಹಿತ್​ರನ್ನು ಫ್ರಾಂಚೈಸಿ ನಡೆಸಿಕೊಂಡ ರೀತಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯಿತು. ಹೀಗಾಗಿ ಹಾರ್ದಿಕ್ ಪಾಂಡ್ಯ ಎಲ್ಲಿ ನೋಡಿದರೂ ಅಭಿಮಾನಿಗಳಿಂದ ನಗೆಪಾಟಲಿಗೆ ಈಡಾಗುತ್ತಿದ್ದಾರೆ. ಮುಂಬೈ ಫ್ರಾಂಚೈಸಿಯ ನಿರ್ಧಾರದಿಂದ ರೋಹಿತ್ ಶರ್ಮಾ ಕೂಡ ಅಸಮಾಧಾನಗೊಂಡಿದ್ದು, ಮುಂದಿನ ವರ್ಷ ತಂಡವನ್ನು ತೊರೆಯಲಿದ್ದಾರೆ ಎಂಬ ವರದಿಗಳಿವೆ.

    ತಮ್ಮ ಹಳೆಯ ತಂಡ ಸನ್ ರೈಸರ್ಸ್ ಪರ ಆಡಲಿದ್ದಾರೆ ಎಂದು ಹೈದರಾಬಾದ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ರೋಹಿತ್ ಶರ್ಮರನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂಬ ವದಂತಿಯೂ ಇದೆ. ಇತ್ತೀಚೆಗೆ, ಮತ್ತೊಂದು ತಂಡವು ಹಿಟ್‌ಮ್ಯಾನ್ ಅನ್ನು ಖರೀದಿ ಮಾಡಲು ಆಸಕ್ತಿ ಹೊಂದಿದೆ ಎಂದು ಹೇಳಲಾಗಿದೆ. ರೋಹಿತ್ ಹರಾಜಿಗೆ ಬಂದರೆ ನಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುವುದಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಸಹ-ಮಾಲಕಿ ಪ್ರೀತಿ ಝಿಂಟಾ ಹೇಳಿದ್ದಾರೆ ಎನ್ನಲಾಗಿದೆ.

    ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಬಂದರೆ, ನಾನು ಅವರನ್ನು ನಮ್ಮ ತಂಡಕ್ಕೆ ಪಡೆಯಲು ನನ್ನ ಜೀವನವನ್ನು ಬೇಕಾದರೂ ಪಣಕ್ಕಿಡುತ್ತೇನೆ. ಯಾರೂ ತಂಡದಲ್ಲಿ ಸ್ಥಿರತೆ ಮತ್ತು ಚಾಂಪಿಯನ್ ಮನಸ್ಥಿತಿಯನ್ನು ತರುತ್ತಾರೋ ಅಂತಹ ಉತ್ತಮ ನಾಯಕತ್ವವನ್ನು ನಮ್ಮ ತಂಡದಲ್ಲಿ ಮಿಸ್​ ಮಾಡಿಕೊಳ್ಳುತ್ತಿದ್ದೇವೆ. ಈ ಗುಣ ರೋಹಿತ್​ ಶರ್ಮರಲ್ಲಿದೆ. ಹೀಗಾಗಿ ರೋಹಿತ್​ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಪ್ರೀತಿ ಝಿಂಟಾ ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾದ ಪೋಸ್ಟರ್​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಇದನ್ನು ನೋಡಿದ ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿದ್ದು, ಇದು ನಿಜವೇ ಆಗಿದ್ದರೆ, ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಮತ್ತೊಮ್ಮೆ ಜತೆಯಾಗಿ ಓಪನಿಂಗ್ ಮಾಡುವುದನ್ನು ನಾವು ನೋಡಬಹುದು. ಇದಲ್ಲದೆ, ಮತ್ತೆ ಹಳೆಯ ದಿನಗಳು ಬರಲಿವೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಪ್ರೀತಿ ಝಿಂಟಾ ಈ ರೀತಿ ಎಲ್ಲೂ ಹೇಳಿಲ್ಲ. ಇದೆಲ್ಲ ಸುಳ್ಳು ಸುದ್ದಿ ಎಂದು ನಿರಾಕರಿಸುತ್ತಿದ್ದಾರೆ. ಅದೇನೇ ಇರಲಿ, ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತೊರೆಯುತ್ತಾರಾ? ಮೆಗಾ ಹರಾಜಿಗೆ ಬರುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ನಾನೇನಾದ್ರೂ ಅಲ್ಲಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ: ಕಾಮೆಂಟರಿ ನಡುವೆ ಸ್ಟಾರ್​ ಕ್ರಿಕೆಟಿಗನ ವಿರುದ್ಧ ಭಜ್ಜಿ ಆಕ್ರೋಶ

    ಹೆಂಡ್ತಿ ಎಚ್ಚರಿಕೆಗೂ ಬಗ್ಗದ ರವೀಂದರ್​! ಮದ್ವೆಯಾದ 2 ವರ್ಷದಲ್ಲಿ ಮಹಾಲಕ್ಷ್ಮೀ ದಾಂಪತ್ಯದಲ್ಲಿ ಬಿರುಗಾಳಿ?

    ಗುರುತು ಹಿಡಿಯಲಾರದಷ್ಟು ಬದಲಾದ್ರು ಸೌತ್​ ಬ್ಯೂಟಿ! ಏನಾಯಿತು ನಟಿ ಲಕ್ಷ್ಮೀ ಮೆನನ್​ಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts