

ಚೆನ್ನೈ: ಕಾಲಿವುಡ್ ಬ್ಯೂಟಿ ಲಕ್ಷ್ಮೀ ಮೆನನ್ ಎಸ್.ಆರ್. ಪ್ರಭಾಕರನ್ ನಿರ್ದೇಶನದ ಹಾಗೂ ನಟ ಎಂ. ಶಶಿಕುಮಾರ್ ನಟನೆಯ ಸೂಪರ್ ಹಿಟ್ ಸುಂದರಪಾಂಡಿಯನ್ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಕುಮ್ಕಿ, ಜಿಗರ್ಥಂಡ, ಕೊಂಬನ್, ಹಾಗೂ ಅಜಿತ್ ಅಭಿನಯದ ವೇದಾಳಂ ಸಿನಿಮಾ ಸೇರಿದಂತೆ ಅನೇಕ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಲಕ್ಷ್ಮೀ ಮೆನನ್ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡರು.
ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದ ಲಕ್ಷ್ಮೀ ಮೆನನ್, ಕಳೆದ ಎರಡು ವರ್ಷಗಳ ಕಾಲ ಸಿನಿಮಾಗಳಿಂದ ಅಂತರ ಕಾಯ್ದುಕೊಂಡರು. ಕೊನೆಯದಾಗಿ ಅವರು ರಾಘವ ಲಾರೆನ್ಸ್ ನಟನೆಯ ಚಂದ್ರಮುಖಿ-2 ಸಿನಿಮಾದಲ್ಲಿ ನಟಿಸಿದರು. ಪ್ರಸ್ತುತ ಯೋಗಿ ಬಾಬು ಜತೆ ಮಲೈ ಮತ್ತು ನಟ ಆದಿ ಜತೆ ಸಪ್ತಂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಪ್ತಂ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೀಗಿರುವಾಗ ಲಕ್ಷ್ಮೀ ಮೆನನ್ ಅವರ ಇತ್ತೀಚಿನ ಡ್ಯಾನ್ಸಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಏಕೆಂದರೆ, ತೆಳ್ಳಗೆ, ಬಳಕುವ ಬಳ್ಳಿಯಂತೆ ಇದ್ದ ಲಕ್ಷ್ಮೀ ಮೆನನ್ ಇದೀಗ ಹೂಕೋಸು ರೀತಿಯಾಗಿದ್ದಾರೆ. ಅಂದರೆ, ದಪ್ಪವಾಗಿದ್ದಾರೆ.
ಲಕ್ಷ್ಮೀ ಮೆನನ್ ಕೊಂಚ ತೂಕ ಹೆಚ್ಚಿಸಿಕೊಂಡಿದ್ದಾರೆ. ಹೀಗಾಗಿ ತಕ್ಷಣಕ್ಕೆ ಅವರನ್ನು ಪತ್ತೆಹಚ್ಚಲು ಆಗುವುದಿಲ್ಲ. ನಮ್ಮ ಸುಂದರಪಾಂಡಿಯನ್ ಸಿನಿಮಾದಲ್ಲಿ ನಟಿಸಿದ ಲಕ್ಷ್ಮಿ ಮೆನನ್ ಇವರೇನಾ? ಎಂದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)