More

    ಪ್ರಭಾಸ್​​, ಜೂ. ಎನ್​​ಟಿಆರ್​ ಕೂಡ ಇಂಥಾ ರಿಸ್ಕ್​ ತೆಗೆದುಕೊಂಡಿಲ್ಲ! ಹೊಸ ಸಾಹಸಕ್ಕೆ ಕೈಹಾಕಿದ ನಟ ಯಶ್​​

    ಮುಂಬೈ: ರಾಕಿಂಗ್​ ಸ್ಟಾರ್​​ ಯಶ್ ‘ಕೆಜಿಎಫ್’ ಸರಣಿ ಚಿತ್ರಗಳ ಮೂಲಕ ದೇಶಾದ್ಯಂತ ಕ್ರೇಜ್ ಗಳಿಸಿದರು. ಈ ಎರಡು ಸಿನಿಮಾಗಳು ಕನ್ನಡ ಜೊತೆಗೆ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಹಿಟ್ ಆದವು. ಹಿಂದಿಯಲ್ಲೂ ಕೂಡ ದೊಡ್ಡ ಕಲೆಕ್ಷನ್ ಗಳಿಸಿದೆ. ಹೀಗಾಗಿ ಯಶ್​ ಜತೆ ಸಿನಿಮಾ ಮಾಡಲು ಬಾಲಿವುಡ್ ನಿರ್ಮಾಪಕರು ಸಹ ಸಾಲುಗಟ್ಟಿ ನಿಂತಿದ್ದಾರೆ. ಆದರೆ, ಎಲ್ಲರಿಗೂ ನೋ ಎನ್ನುತ್ತಿದ್ದ ರಾಕಿಂಗ್ ಸ್ಟಾರ್ ಕೊನೆಗೂ ಒಂದು ಪ್ರಾಜೆಕ್ಟ್​ಗೆ ಯೆಸ್ ಹೇಳಿದ್ದಾರೆ. ಅದುವೇ ರಾಮಾಯಣ. ರಣಬೀರ್ ಕಪೂರ್ ಅಭಿನಯದ ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಯಶ್ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ಯಾನ್ ವರ್ಲ್ಡ್ ಪ್ರಾಜೆಕ್ಟ್ ಆಗಿ ಲಾಂಚ್ ಆಗಲಿರುವ ‘ರಾಮಾಯಣ’ ಮೂಲಕ ಪ್ರೇಕ್ಷಕರಿಗೆ ಹಿಂದೆಂದೂ ಕಾಣದ ಸಿನಿಮಾ ಅನುಭವ ನೀಡಲಿದೆ ಎನ್ನುತ್ತಾರೆ ನಿರ್ಮಾಪಕರು. ಆದರೆ ಈ ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿರುವ ಯಶ್ ಭಾರೀ ಸಾಹಸವನ್ನೇ ಮಾಡುತ್ತಿದ್ದಾರೆ.

    ಯಶ್ ‘ರಾಮಾಯಣ’ ಚಿತ್ರದಲ್ಲಿ ನಟಿಸುವುದು ಮಾತ್ರವಲ್ಲದೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಯಶ್​ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ‘ರಾಮಾಯಣ’ ನಿರ್ಮಿಸುತ್ತಿರುವ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್‌ನೊಂದಿಗೆ ಕೆಲಸ ಮಾಡುತ್ತದೆ. ಚಿತ್ರಕ್ಕೆ ಬಂಡವಾಳ ಹೂಡಲು ರಾಕಿಂಗ್ ಸ್ಟಾರ್ ಸಿದ್ಧರಾಗಿದ್ದಾರೆ. ಸಿನಿಮಾದ ವ್ಯಾಪಾರ ಮತ್ತು ಲಾಭದಲ್ಲಿ ಪಾಲು ಪಡೆಯುವುದು ಅವರ ಯೋಚನೆಯಂತೆ. ಇನ್ನು ಸೌತ್ ಸ್ಟಾರ್​ಗಳಾದ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಯಂಗ್ ಟೈಗರ್ ಜೂ. ಎನ್​ಟಿಆರ್ ಕೂಡ ಹಿಂದಿ ನಟರ ಜೊತೆ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರೆಂದು ನಿರ್ಮಾಣದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ. ಆದರೆ, ಯಶ್ ಧೈರ್ಯ ಮಾಡಿ ಹಣ ಹೂಡಲು ಸಿದ್ಧರಾಗಿದ್ದಾರೆ. ಅದು ಕೂಡ ಬಜೆಟ್​ ಅಂದಾಜು ಇಲ್ಲದ ಸಿನಿಮಾದಲ್ಲಿ ಎಂಬುದು ಗಮನಾರ್ಹ ಸಂಗತಿ.

    ರಾಮಾಯಣ ಸಿನಿಮಾ ನಿರ್ಮಾಣದಲ್ಲಿ ಪಾಲ್ಗೊಳ್ಳದೆ ಸುಮ್ಮನೆ ನಟಿಸಿದ್ದರೆ ಯಶ್ ಸುಲಭವಾಗಿ 80 ರಿಂದ 100 ಕೋಟಿ ಗಳಿಸಬಹುದು ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ನಟಿಸಿ, ಅವರ ಸಂಭಾವನೆ ತೆಗೆದುಕೊಂಡು ಹೋಗಬಹುದಿತ್ತು. ನಿರ್ಮಾಣದಲ್ಲಿ ಕೈ ಹಾಕಬಾರದಿತ್ತು. ಯಶ್ ಯಾಕಿಷ್ಟು ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

    ರಾಮಾಯಣ’ ನಿರ್ಮಾಣದಲ್ಲಿ ವಾರ್ನರ್ ಬ್ರದರ್ಸ್‌ನಂತಹ ಅಂತಾರಾಷ್ಟ್ರೀಯ ನಿರ್ಮಾಣ ಸಂಸ್ಥೆಯೂ ಕೂಡ ಪಾಲ್ಗೊಳ್ಳುತ್ತಿದೆ. ಇದರ ಆಧಾರದ ಮೇಲೆ ಚಿತ್ರದ ಬಜೆಟ್​ ಬಗ್ಗೆ ಯಾರಾದರೂ ಊಹಿಸಬಹುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಲಾಭ ಬಂದರೆ ಸರಿ, ಸ್ವಲ್ಪ ವ್ಯತ್ಯಾಸವಾದರೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಇದೆಲ್ಲ ಗೊತ್ತಿದ್ದೂ ಯಶ್ ‘ರಾಮಾಯಣ’ ವಿಷಯದ ಮೇಲಿನ ನಂಬಿಕೆಯಿಂದ ನಿರ್ಮಾಣಕ್ಕೆ ಎಂಟ್ರಿ ಕೊಡುತ್ತಿದ್ದಾರಂತೆ.

    ಅಂದಹಾಗೆ ಯಶ್ ನಿರ್ಮಾಪಕರಾಗಿ ನಟಿಸುವುದರ ಜೊತೆಗೆ ರಾಮಾಯಣದ ಮೂಲಕ ತಾವು ಬಯಸಿದ್ದನ್ನು ಸಾಧಿಸುತ್ತಾರಾ ಎಂಬುದನ್ನು ಕಾದು ನೋಡಬೇಕು. ಈ ಚಿತ್ರಕ್ಕಾಗಿ ನೀವು ಎಷ್ಟು ಕಾತುರದಿಂದ ಕಾಯುತ್ತಿದ್ದೀರಿ ಎಂಬುದನ್ನು ಕಾಮೆಂಟ್‌ಗಳ ರೂಪದಲ್ಲಿ ನಮಗೆ ತಿಳಿಸಿ. (ಏಜೆನ್ಸೀಸ್​​)

    ಯಾವುದೇ ಸನ್ನಿವೇಶಕ್ಕೂ ನಾವು ರೆಡಿ: ಇರಾನ್​ ಡ್ರೋನ್​​ ದಾಳಿ ಬೆನ್ನಲ್ಲೇ ಗುಡುಗಿದ ಇಸ್ರೇಲ್​ ಪ್ರಧಾನಿ

    ಬಾಗಲಕೋಟೆಯಲ್ಲಿ ಹಳೇ ಬೇರು ಹೊಸ ಚಿಗುರು ಕದಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts