More

    ಬಾಗಲಕೋಟೆಯಲ್ಲಿ ಹಳೇ ಬೇರು ಹೊಸ ಚಿಗುರು ಕದಾಟ!

    | ಅಶೋಕ ಶೆಟ್ಟರ ಬಾಗಲಕೋಟೆ

    ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ದಾಖಲೆ ಬರೆಯಲು ಬಿಜೆಪಿ, ಕಾಂಗ್ರೆಸ್ ನಡುವೆ ಸಮರ ಜೋರಾಗಿದೆ. ಬಿಜೆಪಿ ಅಭ್ಯರ್ಥಿ ಗೆದ್ದರೆ ಸತತ ಐದು ಸಲ ಜಯಿಸಿದ ದಾಖಲೆ, ಕಾಂಗ್ರೆಸ್ ಅಭ್ಯರ್ಥಿ ಗೆದ್ದರೆ ಕ್ಷೇತ್ರದಲ್ಲಿ ಮೊದಲ ಮಹಿಳಾ ಸಂಸದೆ ಎನ್ನುವ ವಿನೂತನ ದಾಖಲೆಗೆ ಸಾಕ್ಷಿ ಆಗಲಿದೆ. ಸತತ ನಾಲ್ಕು ಸಲ ಗೆದ್ದು ಬೀಗಿದ್ದ ಸಂಸದ ಪಿ.ಸಿ.ಗದ್ದಿಗೌಡರ ಉತ್ಸಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಹಿಂದುತ್ವವೇ ಗಟ್ಟಿ ತಳಪಾಯ. ಕಾಂಗ್ರೆಸ್ ಸತತ

    ನಾಲ್ಕು ಚುನಾವಣೆಯಿಂದ ಅಭ್ಯರ್ಥಿಗಳನ್ನು ಬದಲಿಸಿದರೂ ಸೋಲಿನ ಸರಪಣಿಯಿಂದ ಹೊರಬರಲು ಆಗದೇ ಮತ್ತೆ ಹೊಸಮುಖವನ್ನು ಕಣಕ್ಕಿಳಿಸಿದೆೆ. ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಅಭ್ಯರ್ಥಿಯಾಗಿರುವುದರಿಂದ ರಣಕಣ ಮತ್ತಷ್ಟು ರಂಗು ಪಡೆದುಕೊಂಡಿದ್ದು, ಸಚಿವರಿಗೆ ಪುತ್ರಿಯನ್ನು ಗೆಲ್ಲಿಸುವ ಸವಾಲು ಎದುರಾಗಿದೆ.

    ಬಾಗಲಕೋಟೆ ಜಿಲ್ಲೆಯ 7 ಹಾಗೂ ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಸಂಸತ್ ಕ್ಷೇತ್ರ ಬಿಜೆಪಿಯ 5ನೇ ಗೆಲುವಿಗೆ ಸಾಕ್ಷಿಯಾಗುತ್ತಾ ಅಥವಾ 20 ವರ್ಷಗಳ ನಂತರ ಕಾಂಗ್ರೆಸ್ ವಿಜಯಮಾಲೆಯನ್ನು ಮತ್ತೆ ಹಾಕಿಕೊಳ್ಳುತ್ತಾ ಎನ್ನುವ ಕುತೂಹಲ ಮೂಡಿಸಿದೆ.

    ಕೈಗೆ ವೀಣಾ, ಕಮಲಕ್ಕೆ ಪಟ್ಟಣಶೆಟ್ಟಿ ತಲೆಬಿಸಿ: ಕಾಂಗ್ರೆಸ್ ಟಿಕೆಟ್ ಸಿಕ್ಕಿಲ್ಲ ಎಂದು ಕಳೆದ ಸಲದ ಪರಾಜಿತ ಅಭ್ಯರ್ಥಿ ವೀಣಾ ಕಾಶಪ್ಪನವರ ಮುನಿಸಿಕೊಂಡಿದ್ದು, ಆಕ್ರೋಶ ಇನ್ನೂ ತಗ್ಗಿಲ್ಲ. ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿಯಲ್ಲ ಎಂದು ಹೇಳುತ್ತಿದ್ದಾರೆ. ಅತ್ತ ಬಿಜೆಪಿಯಲ್ಲಿ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಮೈತ್ರಿ ಲಾಭದಾಯಕ ಎನಿಸಿದ್ದರೂ ಬಿಜೆಪಿ ಮುಖಂಡ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಅವರ ಅಳಿಯ ಮಹಾಂತೇಶ್ ಮಮದಾಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರ ಜನಾಲಿ ಅವರ ಅಸಮಾಧಾನ ಬಗೆಹರಿದಿಲ್ಲ.

    ಅನುಭವಿ VS ಯುವತಿ: 73 ವಯಸ್ಸಿನ ಪಿ.ಸಿ.ಗದ್ದಿಗೌಡರಗೆ 40 ವರ್ಷಗಳ ರಾಜಕೀಯ ಅನುಭವ ಇದೆ. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲಗೆ 30 ವಯಸ್ಸು. ಲೋಕ ಕಣದಲ್ಲಿ ಹಳೇ ಬೇರು ಹಾಗೂ ಹೊಸ ಚಿಗುರಿನ ಕಾದಾಟ ಕುತೂಹಲ ಗರಿಗೆದರುವಂತೆ ಮಾಡಿದೆ.

    ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರದ್ದೇ ಪ್ರಾಬಲ್ಯ. ನಂತರದಲ್ಲಿ ದಲಿತರು, ಕುರುಬ, ಅಲ್ಪಸಂಖ್ಯಾತರು, ಕ್ಷತ್ರೀಯ ಸಮಾಜಗಳ ಮತದಾರರು ಅಧಿಕವಾಗಿದ್ದು, ಫಲಿತಾಂಶ ಉಲ್ಟಾ ಮಾಡುವ ತಾಕತ್ತು ಹೊಂದಿದ್ದಾರೆ. ಗದ್ದಿಗೌಡರ ಲಿಂಗಾಯತ ಗಾಣಿಗ ಸಮುದಾಯದವರಾಗಿದ್ದರೆ, ಸಂಯುಕ್ತ ಪಾಟೀಲ ಲಿಂಗಾಯತ ಪಂಚಮಸಾಲಿ. ದಲಿತ, ಕುರುಬ, ಅಲ್ಪಸಂಖ್ಯಾತ, ಕ್ಷತ್ರೀಯ ಮತದಾರರ ಒಲವಿನ ಮೇಲೆ ಫಲಿತಾಂಶ ಅಡಗಿದೆ.

    ಪಿ.ಸಿ. ಗದ್ದಿಗೌಡರ ಪ್ಲಸ್-ಮೈನಸ್

    1. ಸರಳ, ಮೃಧು ಸ್ವಭಾವ, ಎಲ್ಲ ರೊಂದಿಗೆ ಉತ್ತಮ ಸಂಬಂಧ

    2. ಸತತ ನಾಲ್ಕು ಸಲ ಗೆಲುವು ದಾಖಲಿಸಿರುವುದು

    3. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಕೂಗು, ಹಿಂದುತ್ವದ ಅಲೆ

    4. ನಾಲ್ಕು ಸಲ ಸಂಸದರಾದರೂ ಕ್ಷೇತ್ರಕ್ಕೆ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ

    5. ಪಕ್ಷದ ಮುಖಂಡರಲ್ಲಿ ಅಭ್ಯರ್ಥಿ ಬಗ್ಗೆ ಒಲವು ಕಡಿಮೆ ಆಗಿರುವುದು

    ಸಂಯುಕ್ತಾ ಪಾಟೀಲ ಪ್ಲಸ್-ಮೈನಸ್

    1. 5 ಕಡೆ ಕಾಂಗ್ರೆಸ್ ಶಾಸಕರು, ಜಾತಿಬಲ, ಹಣಬಲ

    2. ತಂದೆ ಶಿವಾನಂದ ಪಾಟೀಲ ಸಚಿವರಾಗಿರುವುದು

    3.  ಕ್ಷೇತ್ರದಲ್ಲಿ ಮಹಿಳಾ ಮತ ದಾರರು ಅಧಿಕವಾಗಿರು ವುದು, ಗ್ಯಾರಂಟಿ ಯೋಜನೆಗಳ ಲಾಭ

    4. ಹೊರಗಿನ ಜಿಲ್ಲೆಯವರು ಎನ್ನುವ ಅಸಮಾಧಾನ

    5. ಕಾಂಗ್ರೆಸ್​ನಲ್ಲಿನ ಆಂತರಿಕ ಭಿನ್ನಮತ ಸವಾಲು

    40 ವರ್ಷಗಳ ರಾಜಕೀಯ ಬದುಕಿನಲ್ಲಿ ಎಲ್ಲ ವರ್ಗದವರ ವಿಶ್ವಾಸ ಪಡೆದಿದ್ದೇನೆ. ನಾಲ್ಕು ಸಲ ಸಂಸದನಾಗಿ ಹಲವು ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ. ದೇಶದ ಪ್ರಗತಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಜನರು ನಿರ್ಧಾರ ಮಾಡಿದ್ದಾರೆ. ಈ ಸಲವೂ ಗೆಲ್ಲುವ ವಿಶ್ವಾಸವಿದೆ.

    | ಪಿ.ಸಿ. ಗದ್ದಿಗೌಡರ, ಬಿಜೆಪಿ ಅಭ್ಯರ್ಥಿ

    20 ವರ್ಷ ಅಧಿಕಾರ ಕೊಟ್ಟರೂ ಸಂಸದರು ನಿರೀಕ್ಷಿತ ಕೆಲಸ ಮಾಡಿಲ್ಲ ಎನ್ನುವ ಮತದಾರರ ಬೇಸರ ದೊಡ್ಡಮಟ್ಟದಲ್ಲಿದೆ. ನನಗೊಂದು ಅವಕಾಶ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ. ಕಾಂಗ್ರೆಸ್ ಗೆಲುವ ಭರವಸೆ ಇದೆ.

    | ಸಂಯುಕ್ತಾ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ

    6,6,6,6,6,6…ಒಂದೇ ಓವರ್’ನಲ್ಲಿ 6 ಸಿಕ್ಸರ್: ಯುವರಾಜ್ ಸಿಂಗ್ ಕ್ಲಬ್ ಸೇರಿದ ನೇಪಾಳ ಬ್ಯಾಟರ್, ಇಲ್ಲಿದೆ ವಿಡಿಯೋ..!

    ಕೋಟ್ಯಂತರ ಮೌಲ್ಯದ ಕಳವು ಪ್ರಕರಣ ಬಯಲಿಗೆ; 1.2 ಕೋಟಿ ಮೌಲ್ಯದ ಗೋಡಂಬಿ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts