More

    ಕೋಟ್ಯಂತರ ಮೌಲ್ಯದ ಕಳವು ಪ್ರಕರಣ ಬಯಲಿಗೆ; 1.2 ಕೋಟಿ ಮೌಲ್ಯದ ಗೋಡಂಬಿ ವಶಕ್ಕೆ

    ಪಾಲ್ಘರ್: ಕರ್ನಾಟಕದಿಂದ ಗುಜರಾತ್‌ಗೆ ಸಾಗಣೆ ಮಾಡುತ್ತಿದ್ದ ಬರೋಬ್ಬರಿ 1.2 ಕೋಟಿ ರೂಪಾಯಿ ಮೌಲ್ಯದ ಗೋಡಂಬಿಯನ್ನು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಎಎಪಿಗೆ 25 ಕೋಟಿ ಕೊಡುವಂತೆ ಉದ್ಯಮಿಗೆ ಕೆ.ಕವಿತಾ ಬೆದರಿಕೆ: ಕೋರ್ಟ್​ಗೆ ಸಿಬಿಐ ಮಾಹಿತಿ

    ಉಡುಪಿ ಮೂಲದ ಪೂರೈಕೆದಾರರೊಬ್ಬರು ಏಪ್ರಿಲ್ 2 ರಂದು 24.63 ಮೆಟ್ರಿಕ್ ಟನ್ ಗೋಡಂಬಿಯನ್ನು ಗುಜರಾತ್‌ನ ಸೂರತ್ ಮತ್ತು ಅಹಮದಾಬಾದ್‌ಗೆ ಕಳುಹಿಸಿದ್ದರು. 2,469 ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾಗಿದ್ದ 1.21 ಕೋಟಿ ರೂಪಾಯಿ ಮೌಲ್ಯದ ಗೋಡಂಬಿಯು ತಲುಪಬೇಕಿದ್ದ ಜಾಗಕ್ಕೆ ತಲುಪದಿದ್ದಾಗ ಪೂರೈಕೆದಾರರು ಪೊಲೀಸರಿಗೆ ದೂರು ನೀಡಿದ್ದರು.

    ಈ ಸಂಬಂಧ ಕರ್ನಾಟಕ ಪೊಲೀಸರು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರ ಸಹಾಯವನ್ನು ಕೋರಿದ್ದರು. ಗೋಡಂಬಿಯು ನಲಸೋಪಾರಾ ಮತ್ತು ನವಿ ಮುಂಬೈನಲ್ಲಿನರುವ ಎರಡು ಗೋಡೌನ್‌ಗಳಲ್ಲಿ ಇರವುದನ್ನು ಪಾಲ್ಘರ್ ಜಿಲ್ಲೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‘

    92.7 ಲಕ್ಷ ಮೌಲ್ಯದ ಗೋಡಂಬಿಯನ್ನು ವಶಪಡಿಸಿಕೊಂಡಿದ್ದಾರೆ. ಹಾಗೂ ಆರೋಪಿಗಳ ಬಂಧನ ಮತ್ತು ಬಾಕಿಯಿರುವ ಗೋಡಂಬಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಮೀರಾ-ಭಯಂದರ್, ವಸೈ-ವಿರಾರ್ ಪೊಲೀಸ್ ಕೇಂದ್ರ ಅಪರಾಧ ವಿಭಾಗದ ಹಿರಿಯ ಇನ್ಸ್‌ಪೆಕ್ಟರ್ ರಾಹುಲ್ ರಖಾ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ‘ಆರೋಗ್ಯ ಪಾನೀಯ’ ಪಟ್ಟಿಯಿಂದ ಬೋರ್ನ್‌ವೀಟಾ ತೆಗೆದುಹಾಕುವಂತೆ ಕೇಂದ್ರ ಆದೇಶ! ಕಾರಣ ಹೀಗಿದೆ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts