More

    ನಾನೇನಾದ್ರೂ ಅಲ್ಲಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ: ಕಾಮೆಂಟರಿ ನಡುವೆ ಸ್ಟಾರ್​ ಕ್ರಿಕೆಟಿಗನ ವಿರುದ್ಧ ಭಜ್ಜಿ ಆಕ್ರೋಶ

    ನವದೆಹಲಿ: ಪ್ರಸಕ್ತ ಐಪಿಎಲ್ ಸೀಸನ್ ಸರಾಗವಾಗಿ ಸಾಗುತ್ತಿದೆ. ಟೂರ್ನಿ ಸಾಗುತ್ತಿರುವ ರೀತಿ ನೋಡಿದರೆ ಅಂತಿಮ ಹಂತದಲ್ಲಿ ಕುತೂಹಲ ಮೂಡುವುದು ಖಚಿತ. ಸತತ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್ ಖಾತೆಗೆ ಗೆಲುವು ಒಲಿದಿರುವುದು ಗೊತ್ತೇ ಇದೆ.

    ಇತ್ತೀಚೆಗೆ ನಡೆದ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ 6 ವಿಕೆಟ್​ಗಳ ಜಯ ಸಾಧಿಸಿತು. ಆದರೆ, ಈ ಪಂದ್ಯದಲ್ಲಿ ಡೆಲ್ಲಿ ಆಟಗಾರ ಕೆಟ್ಟ ಹೊಡೆತಕ್ಕೆ ಕೈಹಾಕಿ ಔಟಾದರು. ಈ ವೇಳೆ ಕಾಮೆಂಟರಿ ನೀಡುತ್ತಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಸಿಟ್ಟಿಗೆದ್ದಿದ್ದಾರೆ. ಈ ವೇಳೆ ನಾನು ಅಲ್ಲಿದ್ದಿದ್ದರೆ ಕೆನ್ನೆಗೆ ಬಾರಿಸುತ್ತದೆ ಎಂದಿದ್ದಾರೆ.

    ಈ ಪಂದ್ಯದಲ್ಲಿ ದೆಹಲಿಯ ಸ್ಟಾರ್ ಆಟಗಾರ ಪೃಥ್ವಿ ಶಾ ಮಿಂಚಿನ ವೇಗದಲ್ಲಿ ಆಡಿದರು. ಶಾ ಅವರು ಕೇವಲ 22 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 32 ರನ್​ ಗಳಿಸಿದರು. ಇದರೊಂದಿಗೆ ಪವರ್ ಪ್ಲೇನಲ್ಲಿ ಡೆಲ್ಲಿ 60 ರನ್ ಗಳಿಸಿದ್ದರಿಂದ ಗೆಲುವು ಖಚಿತವಾಯಿತು. ಆದರೆ ಈ ವೇಳೆ ರವಿ ಬಿಷ್ಣೋಯ್ ಬೌಲಿಂಗ್​ನಲ್ಲಿ ಪೃಥ್ವಿ ಶಾ ಕೆಟ್ಟ ಹೊಡೆತಕ್ಕೆ ಕೈಹಾಕಿ ಸುಲಭವಾಗಿ ವಿಕೆಟ್ ಒಪ್ಪಿಸಿದರು. ಇದೇ ವಿಚಾರವಾಗಿ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಪೃಥ್ವಿ ಶಾರನ್ನು ಟೀಕಿಸಿದ್ದಾರೆ.

    ಪೃಥ್ವಿ ಶಾಗೆ ತಾನು ಏನು ಮಾಡುತ್ತಿದ್ದೇನೆ ಎಂಬುದು ಅರ್ಥವಾಗಿದೆಯೇ? ವಾಸ್ತವವಾಗಿ ಆ ಶಾಟ್ ಆಡುವ ಅಗತ್ಯವಿರಲಿಲ್ಲ. ಅವರು ನಿರ್ಲಕ್ಷ್ಯದ ಹೊಡೆತದಿಂದ ತಂಡಕ್ಕೆ ತೊಂದರೆ ನೀಡಿದರು. ಪೃಥ್ವಿ ಶಾ ಅವರು ಕೆಟ್ಟ ಹೊಡೆತಗಳನ್ನು ಆಡುವ ಅಭ್ಯಾಸವನ್ನು ಹೊಂದಿದ್ದಾರೆ. ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಇದ್ದಿದ್ದರೆ ಶಾಗೆ ಕೆನ್ನಗೆ ಬಾರಿಸುತ್ತಿದ್ದೆ. ಅವರ ಶಾಟ್ ಆಯ್ಕೆ ಮತ್ತು ನಡವಳಿಕೆ ಬದಲಾಗಬೇಕು. ಇಲ್ಲವಾದಲ್ಲಿ ತಂಡ ಹಾಗೂ ಅವರ ವೃತ್ತಿ ಜೀವನಕ್ಕೆ ತೀವ್ರ ಧಕ್ಕೆಯಾಗುತ್ತದೆ ಎಂದು ಭಜ್ಜಿ ಹೇಳಿದ್ದಾರೆ.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಲಖನೌ ಅಗ್ರ ಕ್ರಮಾಂಕ ಕುಲದೀಪ್ ದಾಳಿಗೆ ಲಯ ತಪ್ಪಿತು. ಆಗ ಯುವ ಬ್ಯಾಟರ್ ಆಯುಷ್ ಬಡೋನಿ (55* ರನ್, 35 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಅರ್ಷದ್ ಖಾನ್ (20*) ಜೋಡಿ ದಿಟ್ಟ ಜತೆಯಾಟದ ನೆರವಿನಿಂದ ಲಖನೌ 7 ವಿಕೆಟ್‌ಗೆ 167 ರನ್‌ಗಳ ಪೈಪೋಟಿಯುತ ಮೊತ್ತ ಪೇರಿಸಿತು. ಪ್ರತಿಯಾಗಿ ಜೇಕ್ ರೇಸರ್ ಮೆಕ್‌ಗುರ್ಕ್- ನಾಯಕ ರಿಷಭ್ ಪಂತ್ (41) ಜತೆಯಾಟದ ಬಲದಿಂದ ಡೆಲ್ಲಿ,18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 170 ರನ್‌ಗಳಿಸಿ ಜಯದ ಹಳಿಗೆ ಮರಳಿತು. (ಏಜೆನ್ಸೀಸ್​)

    ಗುರುತು ಹಿಡಿಯಲಾರದಷ್ಟು ಬದಲಾದ್ರು ಸೌತ್​ ಬ್ಯೂಟಿ! ಏನಾಯಿತು ನಟಿ ಲಕ್ಷ್ಮೀ ಮೆನನ್​ಗೆ?

    ಈ ಊರಿನ ಜನರು ನಿತ್ಯವೂ ರೈಲು ಟಿಕೆಟ್​ ಖರೀದಿಸುತ್ತಾರೆ ಆದ್ರೆ ಎಂದಿಗೂ ಪ್ರಯಾಣಿಸಲ್ಲ: ಅಚ್ಚರಿಯ ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts