More

    ಈ ಊರಿನ ಜನರು ನಿತ್ಯವೂ ರೈಲು ಟಿಕೆಟ್​ ಖರೀದಿಸುತ್ತಾರೆ ಆದ್ರೆ ಎಂದಿಗೂ ಪ್ರಯಾಣಿಸಲ್ಲ: ಅಚ್ಚರಿಯ ಕಾರಣ ಹೀಗಿದೆ…

    ಹೈದರಾಬಾದ್​: ಭಾರತ ಹಲವು ಅಚ್ಚರಿಗಳ ತಾಣ ಎಂಬುದಕ್ಕೆ ಇದು ಕೂಡ ಒಂದು ಉದಾಹರಣೆ. ತೆಲಂಗಾಣದಲ್ಲಿ ಒಂದು ರೈಲು ನಿಲ್ದಾಣವಿದೆ. ಇಲ್ಲಿ ಪ್ರತಿದಿನ ಸುಮಾರು 60 ಟಿಕೆಟ್‌ಗಳು ಮಾರಾಟವಾಗುತ್ತವೆ. ಆದರೆ, ಯಾವೊಬ್ಬ ಪ್ರಯಾಣಿಕರು ಸಹ ರೈಲು ಹತ್ತುವುದಿಲ್ಲ. ಹೀಗೇಕು ಎಂದು ಆಶ್ಚರ್ಯಪಡುತ್ತೀರಾ? ಉತ್ತರ ಏನೆಂದರೆ, ಈ ರೈಲು ನಿಲ್ದಾಣವನ್ನು ಚಾಲ್ತಿಯಲ್ಲಿಡುವ ಉದ್ದೇಶದಿಂದ ಸ್ಥಳೀಯ ನಿವಾಸಿಗಳು ಈ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ.

    ನಾವು ಹೇಳುತ್ತಿರುವುದು ನೆಕೊಂಡ ರೈಲ್ವೇ ನಿಲ್ದಾಣದ ಬಗ್ಗೆ. ಇಲ್ಲಿನ ಸ್ಥಳೀಯ ನಿವಾಸಿಗಳು ರೈಲ್ವೆ ನಿಲ್ದಾಣದಲ್ಲಿನ ಆದಾಯವನ್ನು ತೋರಿಸಲು ಪ್ರತಿದಿನ ಸುಮಾರು 60 ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಇದರ ಹಿಂದೆ ಒಂದು ಉದ್ದೇಶವಿದೆ. ಅದೇನೆಂದರೆ, ತೆಲಂಗಾಣದ ವಾರಂಗಲ್ ಜಿಲ್ಲೆಯ ನರಸಂಪೇಟ್ ಕ್ಷೇತ್ರಕ್ಕೆ ಇರುವ ಒಂದೇ ಒಂದು ನಿಲ್ದಾಣವೆಂದರೆ, ಅದು ನೆಕೊಂಡಾ ನಿಲ್ದಾಣ ಮಾತ್ರ. ಆದಾಗ್ಯೂ, ತಿರುಪತಿ, ಹೈದರಾಬಾದ್, ದೆಹಲಿ ಮತ್ತು ಶಿರಡಿಯಂತಹ ನಗರಗಳಿಂದ ಬರುವ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಇದರಿಂದ ಈ ಮಾರ್ಗದಲ್ಲಿ ಸಂಚರಿಸಲು ಇಚ್ಛಿಸುವ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ. ಇದಲ್ಲದೆ, ಪದ್ಮಾವತಿ ಎಕ್ಸ್‌ಪ್ರೆಸ್‌ನ ರಿಟರ್ನ್ ಪ್ರಯಾಣದ ನಿಲುಗಡೆಗಳನ್ನು ಸಹ ರದ್ದುಗೊಳಿಸಲಾಗಿದೆ. ಇದು ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.

    ಇತ್ತೀಚೆಗೆ, ಈ ಪ್ರದೇಶದ ಜನರ ಸಾಕಷ್ಟು ವಿನಂತಿಗಳನ್ನು ಮಾಡಿದರು. ಬಳಿಕ ಭಾರತೀಯ ರೈಲ್ವೇ ಇಲಾಖೆಯು ಈ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಸಿಕಂದರಾಬಾದ್‌ನಿಂದ ಗುಂಟೂರಿಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಹಸಿರು ನಿಶಾನೆಯನ್ನು ನೀಡಿತು. ಆದಾಗ್ಯೂ, ಈ ವ್ಯವಸ್ಥೆ ಮಾಡಲು ರೈಲ್ವೆ ಇಲಾಖೆ ಒಂದು ಷರತ್ತನ್ನು ಮುಂದಿಟ್ಟತು. ಅದೇನೆಂದರೆ, ಮೂರು ತಿಂಗಳವರೆಗೆ ಈ ನಿಲ್ದಾಣದಲ್ಲಿ ಆದಾಯ ಬಂದರೆ ಮಾತ್ರ ನಿಲ್ದಾಣದಲ್ಲಿ ಸಂಪೂರ್ಣ ನಿಲುಗಡೆ ಮಾಡುವುದಾಗಿ ರೈಲ್ವೆ ಇಲಾಖೆ ಭರವಸೆ ನೀಡಿದೆ ಎನ್ನಲಾಗಿದೆ. ಈ ಷರತ್ತನ್ನು ಪೂರೈಸದಿದ್ದರೆ, ರೈಲು ನಿಲುಗಡೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

    ತಮ್ಮ ರೈಲು ನಿಲ್ದಾಣವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಈ ಷರತ್ತುಗಳನ್ನು ಪೂರೈಸಲು, ಸ್ಥಳೀಯ ನಿವಾಸಿಗಳು ‘ನೆಕೊಂಡ ಟೌನ್ ರೈಲ್ವೇ ಟಿಕೆಟ್ ಫೋರಂ’ ಎಂಬ ವಾಟ್ಸಾಪ್ ಗುಂಪನ್ನು ರಚಿಸಿದರು ಮತ್ತು ದೇಣಿಗೆ ಮೂಲಕ 25,000 ಸಂಗ್ರಹಿಸಿದರು. ಈ ಹಣದಿಂದ ಅವರು ನೆಕೊಂಡದಿಂದ ಖಮ್ಮಂ, ಸಿಕಂದರಾಬಾದ್ ಇತ್ಯಾದಿಗಳಿಗೆ ದೈನಂದಿನ ರೈಲು ಟಿಕೆಟ್‌ಗಳನ್ನು ಖರೀದಿಸುತ್ತಾರೆ ಮತ್ತು ನಿಲ್ದಾಣದಲ್ಲಿ ಆದಾಯವಿದೆ ಎಂಬುದನ್ನು ತೋರಿಸುತ್ತಿದ್ದಾರೆ. ಈ ಸಣ್ಣ ಹಂತಗಳು ಹೆಚ್ಚಿನ ರೈಲುಗಳನ್ನು ನಿಲ್ದಾಣದಲ್ಲಿ ನಿಲ್ಲಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಲು ಸಹಾಯ ಮಾಡುತ್ತದೆ ಎಂದು ಸ್ಥಳೀಯ ಹೇಳಿದ್ದಾರೆ.

    ನೆಕೊಂಡಾ ರೈಲು ನಿಲ್ದಾಣದ ಬಳಿಯ ನಿವಾಸಿಗಳ ಆತ್ಮವಿಶ್ವಾಸವು ನೆಟ್ಟಿಗರನ್ನು ಸಾಕಷ್ಟು ಪ್ರಭಾವಿತಗೊಳಿಸಿದೆ. ಸ್ಥಳೀಯ ಜನರ ನಡೆಯನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ ಮತ್ತು ರೈಲ್ವೆ ಇಲಾಖೆ ಅಲ್ಲಿನ ಜನರ ಆಸೆಯನ್ನು ಈಡೇರಿಸಬೇಕೆಂದು ಧ್ವನಿಗೂಡಿಸಿದ್ದಾರೆ. (ಏಜೆನ್ಸೀಸ್​)

    ಗುರುತು ಹಿಡಿಯಲಾರದಷ್ಟು ಬದಲಾದ್ರು ಸೌತ್​ ಬ್ಯೂಟಿ! ಏನಾಯಿತು ನಟಿ ಲಕ್ಷ್ಮೀ ಮೆನನ್​ಗೆ?

    ಇದು ಬರೀ ಟ್ರೈಲರ್ ಅಷ್ಟೇ..; ನಟ ಸಲ್ಮಾನ್ ಮನೆ ಮೇಲೆ ದಾಳಿ ಹೊಣೆ ಹೊತ್ತ ಬಿಷ್ಣೋಯಿ ಗ್ಯಾಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts