More

    ಕಾಂಗ್ರೆಸ್ಸಿನಿಂದ ಯುವನ್ಯಾಯ ಗ್ಯಾರಂಟಿ: ಗಡ್ಡದೇವರಮಠ

    ವಿಜಯವಾಣಿ ಸುದ್ದಿಜಾಲ ಗದಗ
    ಯುವ ಶಕ್ತಿ ಈ ದೇಶದ ಶಕ್ತಿ. ಅವರಿಗೆ ಸೂಕ್ತ ಸೌಲಭ್ಯಗಳು ಹಾಗೂ ಅನುಕೂಲಕರ ಯೋಜನೆಗಳನ್ನು ನೀಡಿ ಅವರನ್ನು ಮೇಲೆತ್ತಬೇಕು. ಈ ಕಾರಣದಿಂದಾಗಿಯೇ ಕಾಂಗ್ರೆಸ್​ ಸರ್ಕಾರ ಯುವನ್ಯಾಯ ಗ್ಯಾರಂಟಿಯನ್ನು ಘೋಷಿಸಿದೆ ಎಂದು ಕಾಂಗ್ರೆಸ್​ ಅಭ್ಯಥಿರ್ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.
    ನಗರದ ಕೆ.ಎಚ್​. ಪಾಟೀಲ ಸಭಾಭವನದಲ್ಲಿ ಜರುಗಿದ ಕಾಂಗ್ರೆಸ್ಸಿನಿಂದ ಜರುಗಿದ ಯುವ ಚೈತನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವನ್ಯಾಯ ಗ್ಯಾರಂಟಿ ಇದು ದೇಶದ ಯುವ ಜನತೆಯ ಪಾಲಿಗೆ ಕ್ರಾಂತಿಕಾರಕವಾಗಲಿದೆ. ದೇಶದ ಜನರು ಒಟ್ಟಾಗಿ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತಂದು ನಿಮ್ಮ ಸೇವೆ ಮಾಡಿಕೊಡಲು ಅನುಕೂಲ ಮಾಡಿಕೊಡಬೇಕು ಎಂದರು.
    ಬಿಜೆಪಿ ವಿರುದ್ಧ ಹರಿಹಾಯ್ದ ಗಡ್ಡದೇವರಮಠ, ಹತ್ತು ವರ್ಷಗಳ ಹಿಂದೆಯೇ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿಸುವ ಬದಲಾಗಿ ಉದ್ಯೋಗಗಳನ್ನು ಯುವಜನರಿಂದ ಕಸಿದುಕೊಂಡಿದ್ದಾರೆ. ಉದ್ಯೋಗ ಕೇಳಿದ ಯುವಕರಿಗೆ ಚಹಾ ಮಾರಲು, ವಡಾ ಮಾರಲು ಪ್ರಧಾನಿ ಸಲಹೆ ನೀಡುತ್ತಾರೆ ಎಂದು ಟೀಕಿಸಿದರು.
    ಎಚ್​. ಕೆ. ಪಾಟೀಲ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಲ್ಲಿ ನಿರುದ್ಯೋಗಿ ಯುವಕರಿಗೆ ಸ್ಟೆಂಡ್​ ನೀಡಲಾಗುತ್ತಿದ್ದು, ನೌಕರಿಗೆ ಅಜಿರ್ ಹಾಕಲು ಸೇರಿದಂತೆ ತಮ್ಮ ಖಚಿರ್ಗೆ, ಮನೆ ಖಚಿರ್ಗೆ ಸಹಾಯವಾಗಿದೆ. ಯುವಜನರ ಆತ್ಮವಿಶ್ವಾಸ ಹೆಚ್ಚಿಸಿದೆ. ಉಳಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳು ಸಂಕಷ್ಟದ ಕಾಲದಲ್ಲಿ ಜನರಿಗೆ ಆಸರೆಯಾಗಿವೆ. ಇದೇ ಮಾದರಿಯಲ್ಲಿ ಕೇಂದ್ರದಲ್ಲಿಯೂ ಕಾಂಗ್ರೆಸ್​ ಪಕ್ಷ ಆಡಳಿತಕ್ಕೆ ಬಂದರೆ ಪಂಚನ್ಯಾಯ ಗ್ಯಾರಂಟಿ ಯೋಜನೆಗಳು ಜಾರಿಗೆ ಬರಲಿವೆ. ಇದು ದೇಶದ ಸಾಮಾನ್ಯ ಜನರ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ. ಆದ್ದರಿಂದ ಈ ಬಾರಿ ಕಾಂಗ್ರೆಸ್​ ಅಭ್ಯಥಿರ್ ಆನಂದಸ್ವಾಮಿ ಗಡ್ಡದೇವರಮಠರಿಗೆ ಮತ ನೀಡುವ ಮೂಲಕ ಸಾಮಾಜಿಕ ನ್ಯಾಯ, ಸಮಸಮಾಜದ ನಿರ್ಮಾಣ, ಬಡವರ ಕಲ್ಯಾಣ, ಸಂವಿಧಾನ ರಕ್ಷಣೆಗೆ ಬೆಂಬಲಿಸಿ ಎಂದು ಕರೆ ನೀಡಿದರು.

    ಸಮಾವೇಶದಲ್ಲಿ ವಿಧಾನ ಪರಿಷತ್​ ಮುಖ್ಯ ಸಚೇತಕ ಸಲೀಂ ಅಹ್ಮದ್​, ಶಾಸಕ ಜಿ.ಎಸ್​.ಪಾಟೀಲ, ಡಿ.ಆರ್​.ಪಾಟೀಲ, ಜಿ. ಎಸ್​. ಗಡ್ಡದೇವರಮಠ, ಬಿ.ಬಿ. ಶ್ರೀನಿವಾಸ, ಮಹಮ್ಮದ್​ ನಲಪಾಡ್​, ಬಿ.ಬಿ.ಅಸೂಟಿ, ಸಿದ್ದು ಪಾಟೀಲ, ಕೃಷ್ಣಗೌಡ ಪಾಟೀಲ, ಸಚಿನ್​ ಪಾಟೀಲ, ಅಶೋಕ ಮಂದಾಲಿ, ವಿವೇಕ ಯಾವಗಲ್ಲ ಸೇರಿದಂತೆ ಹಲವರು ಇದ್ದರು.

    ಎಪಿಎಂಸಿ ಯಾರ್ಡ್​ ನಲ್ಲಿ ಪ್ರಚಾರ:
    ಗದಗ ನಗರದ ಎಪಿಎಂಸಿ ಯಾರ್ಡ್​ ನಲ್ಲಿ ಕಾಂಗ್ರೆಸ್​ ಅಭ್ಯಥಿರ್ ಆನಂದಸ್ವಾಮಿ ಗಡ್ಡದೇವರಮಠ, ಸಮಾಜದ ಎಲ್ಲ ವರ್ಗಗಳನ್ನು ಒಟ್ಟಾಗಿ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಬಲ್ಲ ನಾಯಕತ್ವ ಕಾಂಗ್ರೆಸ್​ ಪಕ್ಷಕ್ಕೆ ಮಾತ್ರ ಇದೆ. ಬಿಜೆಪಿಯವರ ಮಾತಿಗೆ ಮರುಳಾಗಿ ದೇಶವನ್ನು ಮತ್ತೊಮ್ಮೆ ಅವರ ಕೈಗೆ ಕೊಟ್ಟರೆ ಸಮಾಜಗಳ ನಡುವೆ ಕಂದಕಗಳನ್ನು ಸೃಷ್ಟಿ ಮಾಡಿ ಶಾಂತಿಯನ್ನು ಕದಡುತ್ತಾರೆ. ಹಾಗಾಗಿ ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಿ ನನಗೆ ನಿಮ್ಮ ಮತವನ್ನು ನೀಡಬೇಕು ಎಂದು ಆನಂದಸ್ವಾಮಿ ಗಡ್ಡದೇವರಮಠ ಮನವಿ ಮಾಡಿದರು.
    ಬಹುರಾಷ್ಟ್ರೀಯ ಹಾಗೂ ಶ್ರೀಮಂತ ಕಾಪೋರ್ರೇಟ್​ ಕಂಪನಿಗಳಿಗೆ ಅನುಕೂಲ ಕಲ್ಪಿಸಿದ ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳಿಂದಾಗಿ ದೇಶದಲ್ಲಿ ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರು ಪರಿತಪಿಸುತ್ತಿದ್ದಾರೆ. ವ್ಯಾಪಾರಸ್ಥರಿಂದ ವಸೂಲಿ ಮಾಡಿದ ಜಿಎಸ್​ಟಿ ಹಣದಲ್ಲಿ ರಾಜ್ಯಕ್ಕೆ ಬರಬೇಕಿದ್ದ, ರಾಜ್ಯದ ಅಭಿವೃದ್ಧಿಗೆ ಕಾರಣವಾಗಬೇಕಿದ್ದ ರಾಜ್ಯದ ಪಾಲಿನ ತೆರಿಗೆ ಹಣ ನೀಡದೇ ಪರೋಕ್ಷವಾಗಿ ಕರ್ನಾಟಕದ ಜನರ ಸಂಕಷ್ಟಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ 10 ವರ್ಷಗಳ ದುರಾಡಳಿತ ಕೊನೆಗೊಳಿಸಿ ಜನಪರ ಕಾಂಗ್ರೆಸ್​ ಸರ್ಕಾರ ಸ್ಥಾಪಿಸುವ ಕಾಲ ಬಂದಿದೆ. ದಯವಿಟ್ಟು ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಿ ಎಂದರು. ಸಚಿವ ಎಚ್​. ಕೆ. ಪಾಟೀಲ, ನಾಗೇಶ ಸವಡಿ, ಜಿ. ಎಸ್​. ಗಡ್ಡದೇವರಮಠ, ಮಹೇಂದ್ರ ಸಿಂಘಿ, ರೇವಣಪ್ಪ ಯಳಮಲಿ, ಉಮೇಶ ಹುಬ್ಬಳ್ಳಿ, ಶಶಿಕಲಾ ಅಕ್ಕಿ, ಲಲಿತಾ ಅಸೂಟಿ, ಲಲಿತಕ್ಕ ಇಂಗಳಳ್ಳಿ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts